ಉಜಿರೆ: ಮಂಕುತಿಮ್ಮನ ಕಗ್ಗ-ಜೀವನ ಮೌಲ್ಯ ವಿಶೇಷ ಉಪನ್ಯಾಸ

Shreya Hegde
0



ಉಜಿರೆ: ಮಂಕುತಿಮ್ಮನ ಕಗ್ಗವು ಕೇವಲ ಕಾವ್ಯ ಸಂಕಲನವಾಗಿರದೆ ಬದುಕನ್ನು ಅರ್ಥೈಸುವ ಮಹತ್ವದ ಗ್ರಂಥವಾಗಿದೆ. ಕಗ್ಗದಲ್ಲಿರುವ ಜೀವನ ದರ್ಶನ ಮತ್ತು ಸಾತ್ವಿಕ ಚಿಂತನೆಗಳು ಸಕಾರಾತ್ಮಕ ಜೀವನ ದೃಷ್ಟಿಯನ್ನು ಬೆಳೆಸಲು ಸಹಕಾರಿಯಾಗಿವೆ. ಕಗ್ಗದಲ್ಲಿನ ಪ್ರತಿ ಯೊಂದು ಸಾಲುಗಳು ಮಾನವನ ಜೀವ ನಾನುಭವಗಳ ಸಾರವನ್ನು ಒಳಗೊಂಡಿದ್ದು, ಸುಖ-ದುಃಖ, ಯಶಸ್ಸು- ವಿಫಲತೆ, ಆತ್ಮ ವಿಶ್ವಾಸ, ಸಹನೆ, ಮಾನವೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅಮೂಲ್ಯ ಸಂದೇಶಗಳನ್ನು ನೀಡುತ್ತದೆ ಎಂದು ನಾವೂರಿನ ಧಾರ್ಮಿಕ ಚಿಂತಕ ಡಾ. ಪ್ರದೀಪ್ ಆಟಿಕುಕ್ಕೆ ಅಭಿಪ್ರಾಯಪಟ್ಟರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಉಜಿರೆಯ ಎಸ್‌ಡಿಎಂ ತಾಂತ್ರಿಕ ಮಹಾ ವಿದ್ಯಾಲಯದ ಆಶ್ರಯದಲ್ಲಿ ಮಹಾ ವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾದ ಮಂಕುತಿಮ್ಮನ ಕಗ್ಗ ಜೀವನ ಮೌಲ್ಯ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.


ಇಂದಿನ ವೇಗದ ಮತ್ತು ಸ್ಪರ್ಧಾತ್ಮಕ ಜೀವನದಲ್ಲಿ ಯುವಜನತೆ ಅನೇಕ ಸವಾಲು ಗಳನ್ನು ಎದುರಿಸುತ್ತಿದ್ದು ಮಾನಸಿಕ ಒತ್ತಡ ಮತ್ತು ಗೊಂದಲಗಳಿಂದ ಹೊರಬರಲು ಮಂಕುತಿಮ್ಮನ ಕಗ್ಗದ ಚಿಂತನೆಗಳು ಮಾರ್ಗದರ್ಶನ ನೀಡುತ್ತವೆ. ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಲು ಜ್ಞಾನದ ಜತೆಗೆ ಉತ್ತಮ ಮೌಲ್ಯಗಳು, ನೈತಿಕತೆ ಮತ್ತು ಎಂದು ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಕುರಿತು ಕಗ್ಗದ ಆಯ್ದ ಪದ್ಯಗಳ ಮೂಲಕ ವಿವರಿಸಿದರು.


ಕಾರ್ಯಕ್ರಮ ಉದ್ಘಾಟಿಸಿದ ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ.ಸಂದೀಪ್ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಮತ್ತು ಮೌಲ್ಯಾಧರಿತ ಚಿಂತನೆಗಳು ಅತ್ಯಗತ್ಯ ವಾಗಿದ್ದು, ಮಂಕುತಿಮ್ಮನ ಕಗ್ಗದ ಸಂದೇಶ ಗಳು ಯುವಜನತೆಗೆ ಬದುಕಿನ ದಾರಿದೀಪ ವಾಗಿವೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ, ಕನ್ನಡ ಸಾಹಿತ್ಯವು ಜೀವನ ಮೌಲ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಯುವ ಜನತೆ ಸಾಹಿತ್ಯದೊಂದಿಗೆ ಹೆಚ್ಚು ಬೆರೆಯ ಬೇಕು ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡ ಶುಭಹಾರೈಸಿದರು.


ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೃಷ್ಣಪ್ರಸಾದ್ ಪಿ.ಎ. ಕಾರ್ಯಕ್ರಮ ಸಂಯೋಜಿಸಿದರು. ಉಪನ್ಯಾಸಕ ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top