ಬೆಂಗಳೂರು: ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯಾಗಿ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ತುಳುನಾಡ ಜವನೆರ್ ಸಂಘದಿಂದ ಭಾನುವಾರ ಬೆಂಗಳೂರಿನಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು.
ಆ ಪ್ರಯುಕ್ತ ಭಾನುವಾರ ಬೆಳಗ್ಗೆ ಬೆಂಗಳೂರಿನ ಯಶವಂತಪುರ ರಾಣಿ ಅಬ್ಬಕ್ಕ ಸರ್ಕಲ್‌ನಿಂದ ಚಂದ್ರಾ ಲೇ ಔಟ್‌ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ವಾಹನ ಜಾಥಾವನ್ನು ನಡೆಸಲಾಯಿತು. ಜಾಥಾದಲ್ಲಿ ನೂರಾರು ಕಾರು, ಬೈಕ್‌ಗಳಲ್ಲಿ ತುಳು ಬಾವುಟಗಳನ್ನು ಹಿಡಿದಿರುವುದು ಮತ್ತು ಕಾರುಗಳಿಗೆ ತುಳು ಬಾವುಟಗಳನ್ನು ಹೊದಿಕೆ ಹಾಕಿರುವುದು ಎಲ್ಲರ ಗಮನ ಸೆಳೆಯಿತು.
ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಯ್ಯ, ಬಿಬಿಎಂಪಿ ನಿಕಟ ಪೂರ್ವ ಸದಸ್ಯ ಉಮೇಶ್ ಶೆಟ್ಟಿ, ಕೆಎಸ್‌ಡಿಎಲ್‌ಐನ ಪ್ರಶಾಂತ್ ಪಾಲ್ಗೊಂಡಿದ್ದರು. ತುಳುನಾಡ ಜವನೆರ್ ಸಂಘದ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ವರದಿ: ಡಿಎಸ್ ಕುಲಾಲ್


