ತ್ರಿಶಾ ಕ್ಲಾಸಸ್‌: ಸಿಎ ಫೌಂಡೇಷನ್ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

Upayuktha
0

 


ಕಟಪಾಡಿ: ತ್ರಿಶಾ ಕ್ಲಾಸಸ್‌ ವತಿಯಿಂದ ಸಿಎ ಫೌಂಡೇಷನ್ ವಿದ್ಯಾರ್ಥಿಗಳಿಗೆ ಒರಿಯಂಟೇಶನ್‌ ಕಾರ್ಯಕ್ರಮವು ಸೆಪ್ಟೆಂಬರ್ 20ರಂದು ಕಾಲೇಜ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. 


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಿ.ಎ. ನಾಗೇಂದ್ರ ಭಕ್ತ ಅವರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಬಗ್ಗೆ ಅಮೂಲ್ಯ ವಿಚಾರ ಹಾಗೂ ಮಾರ್ಗದರ್ಶನ ನೀಡಿದರು. 


ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಟ್ರಸ್ಟಿಗಳಾದ ರಾಮ್ ಪ್ರಭು, ಅಕಾಡೆಮಿಕ್ ಮ್ಯಾನೇಜರ್ ಶಾಂತ ಪ್ರಿಯ, ತ್ರಿಶಾ ಕಾಲೇಜ್ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್ಮೆಂಟ್ ನ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೊ. ಕುಲದೀಪ್ ವೈ.ಯು, ತ್ರಿಶಾ ಕ್ಲಾಸಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಗೌರಿ ಕಾಮತ್ ಸಿಎ ಫೌಂಡೇಷನ್ ಕ್ಲಾಸಸ್‌ನ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವನ್ನು ಕುಮಾರಿ ಪ್ರಜ್ಞಾ ರಾವ್ ನಿರೂಪಿಸಿ, ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top