ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನ ಹಾಗೂ ಇಂಜಿನಿಯರ್ಸ್ ದಿನಾಚರಣೆ

Upayuktha
0

ನಿಟ್ಟೆ: 'ಸಮಾಜದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಬಹು ಮಹತ್ವದ್ದಾಗಿದ್ದು ಇಂಜಿನಿಯರ್‌ಗಳ ಸೃಜನಶೀಲತೆ ಹಾಗೂ ತಾಂತ್ರಿಕ ಪರಿಣತಿಯ ಮೂಲಕ ದೇಶದ ಪ್ರಗತಿಯನ್ನು ಸದಾ ಕಾಣಬೇಕು' ಎಂದು ಉಡುಪಿ ಮೂಲದ ಪ್ರಸಿದ್ಧ ಕಂಸಲ್ಟಿಂಗ್ ಇಂಜಿನಿಯರ್ ಹಾಗೂ ಎಲ್.ಬಿ. ಸರ್ವೇಯರ್ ಆದ ರಾಘವೇಂದ್ರ ರಾವ್ ಯು.ಕೆ. ಅಭಿಪ್ರಾಯಪಟ್ಟರು.


ಸೆಪ್ಟೆಂಬರ್ 5ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನ ಹಾಗೂ ಇಂಜಿನಿಯರ್ಸ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, 'ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ಕಟ್ಟುವಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಂಜಿನಿಯರ್‌ಗಳು ತಮ್ಮ ಸೃಜನಶೀಲ ಚಿಂತನೆಗಳಿಂದ ಸಮಾಜಕ್ಕೆ ನೂತನತೆ ತರುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಇಂಜಿನಿಯರಿಂಗ್ ಪದವಿಯೊಂದಿಗೆ ಪ್ರಚಲಿತದಲ್ಲಿರುವ ತಂತ್ರಜ್ಞಾನ ಕೌಶಲ್ಯವನ್ನು ಕರಗತಗೊಳಿಸಿಕೊಂಡರಷ್ಟೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಗಲು ಸಾಧ್ಯ' ಎಂದರು.


ಕಾರ್ಯಕ್ರಮದ ಗೌರವ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕ್ಯಾಂಪಸ್ ಮೈಂಟೆನೆನ್ಸ್ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ. ಎ ಯೋಗೀಶ್ ಹೆಗ್ಡೆ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಸನ್ಮಾನಿತ ಶಿಕ್ಷಕರನ್ನು ಅಭಿನಂದಿಸಿ, 'ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶದ ಬದುಕು ನಮಗೆ ಸದಾ ಮಾದರಿಯಾಗಬೇಕು. ಪಿಎಚ್.ಡಿ ಪದವಿಯನ್ನು ಗಳಿಸುವ ಮೂಲಕ ನೀವು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ. ನಿಮ್ಮ ಜ್ಞಾನ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಪೂರಕವಾಗಬೇಕು' ಎಂದರು.

2025-26 ನೇ ಸಾಲಿನಲ್ಲಿ ಪಿಎಚ್.ಡಿ ಪದವಿಯನ್ನು ಪಡೆದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಶಿಕ್ಷಕರಾದ ಡಾ. ರಂಜಿತ್ ಪಿ. ಭಟ್, ಡಾ. ರಸಾನಂದ ಮುದುಲಿ, ಡಾ. ಪಾಟೀಲ್ ಜಿ. ಪಿ., ಡಾ. ಅಂಕಿತಾ ರಾವ್, ಡಾ. ಸೋನಿಯಾ ಲೋಬೋ, ಡಾ. ಸುನಿತಾ ಲಸ್ರಾಡೋ, ಡಾ. ಸರಿತಾ, ಡಾ. ದಿಶಾ ಡಿ. ಎನ್., ಡಾ. ಮೋಹನ್ ಪೂಜಾರಿ, ಡಾ. ವಿನ್ಸೆಂಟ್ ಲಿನಿಶ್ ಡಿಸೋಜಾ, ಡಾ. ರವೀಂದ್ರ ಕೆ. ಎಸ್., ಡಾ. ರಾಜಶ್ರೀ ನಂಬಿಯಾರ್ ಪಿ., ಡಾ. ಅನಿಲ್ ಕುಮಾರ್ ಭಟ್, ಡಾ. ಸವಿತಾ, ಡಾ. ದೀಕ್ಷಿತಾ ವಿವೇಕ್ ಅಂಚನ್, ಡಾ. ರಾಘವೇಂದ್ರ ಪೈ ಕೆ., ಡಾ. ಅನುಷಾ ಮತ್ತು ಡಾ. ಪವನ್‌ಕುಮಾರ್ ಬಿ. ಅವರನ್ನು ಸನ್ಮಾನಿಸಲಾಯಿತು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ| ನಾಗೇಶ್ ಪ್ರಭು ಸ್ವಾಗತಿಸಿದರು. ಸಿವಿಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ಶ್ರೀರಾಮ್ ಮರಾಠೆ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ರೆಸಿಡೆಂಟ್ ಇಂಜಿನಿಯರ್ ಡಾ| ಶ್ರೀನಾಥ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಡೀನ್ - ಸ್ಟೂಡೆಂಟ್ ವೆಲ್ಫೇರ್ ಡಾ| ನರಸಿಂಹ ಬೈಲ್ಕೇರಿ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ಗ್ರೈನಲ್ ಡಿಮೆಲ್ಲೊ ವಂದಿಸಿದರು. ಸಹಪ್ರಾಧ್ಯಾಪಕಿಯರಾದ ಡಾ| ಶ್ರೀವಿದ್ಯಾ ಜಿ ಹಾಗೂ ಡಾ| ಪದ್ಮಾವತಿ ಕೆ ಪ್ರಾರ್ಥಿಸಿದರು. ಇಲೆಕ್ಟ್ರಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಹತ್ವಾರ್ ಕಾರ್ಯಕ್ರಮ ನಿರೂಪಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top