ಶಿಕ್ಷಕರ ಸೇವೆಗೆ ಸಮಾಜ ಕೃತಜ್ಞರಾಗಿರಬೇಕು: ರಮೇಶ್ ರಾವ್

Upayuktha
0

ಸುರತ್ಕಲ್: ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಶಿಕ್ಷಕರ ಸೇವೆಗೆ ಸಮಾಜ ಕೃತಜ್ಞರಾಗಿರಬೇಕು ಎಂದು ಸುರತ್ಕಲ್ ರೋಟರಿ ಕ್ಲಬ್ ನಿರ್ದೇಶಕ ರಮೇಶ್ ರಾವ್ ಹೇಳಿದರು.


ಸುರತ್ಕಲ್ ರೋಟರಿ ಕ್ಲಬ್ ತನ್ನ ಇಂಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಶಿಕ್ಷಕ ನಮನ’ ಕಾರ್ಯ ಸರಣಿಯ ಅಂಗವಾಗಿ ಸುರತ್ಕಲ್ ಶ್ರೀನಿವಾಸ ನಗರದ ಎನ್.ಐ.ಟಿ.ಕೆ. ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕ ವೃಂದವನ್ನು ಗೌರವಿಸಿ ಅವರು ಮಾತನಾಡಿದರು.


ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಟಿ.ಎನ್. ಮಾತನಾಡಿ, ಶಿಕ್ಷಕರನ್ನು ಗೌರವಿಸುವ ಮೂಲಕ ಸೇವಾಪರ ಗುರು ಪರಂಪರೆಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.


ಈ ಸಂದರ್ಭದಲ್ಲಿ ಶಾಲೆಗೆ ಅಭಿನಂದನಾ ಗೌರವ ಫಲಕ ನೀಡಿ ಗೌರವಿಸಲಾಯಿತು. ಶಾಲೆಯ ಎಲ್ಲಾ ಶಿಕ್ಷಕಿಯರನ್ನು ಗೌರವಿಸಲಾಯಿತು.


ಶಾಲಾ ಮುಖ್ಯ ಶಿಕ್ಷಕಿ ರಶ್ಮಿ ಆರ್. ಕೃತಜ್ಞತೆ ಸಲ್ಲಿಸಿದರು. ಹಿರಿಯ ಶಿಕ್ಷಕಿ ವಸಂತ ಕುಮಾರಿ, ರೋಟರಿ ಕ್ಲಬ್ ನಿರ್ದೇಶಕರಾದ ರಮೇಶ್ ಭಟ್ ಎಸ್.ಜೆ., ಕೃಷ್ಣಮೂರ್ತಿ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top