ಅಲೋಶಿಯಸ್ ವಿವಿಯಲ್ಲಿ ರಾಷ್ಟ್ರಮಟ್ಟದ "ಅಲೋಶಿಯನ್ ಫೆಸ್ಟ್–2026"

Upayuktha
0

 


ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ರಾಷ್ಟ್ರಮಟ್ಟದ "ಅಲೋಶಿಯನ್ ಫೆಸ್ಟ್–2026"ಗೆ ಸೋಮವಾರ ಎಲ್‌ಎಫ್ ರಸ್ಕಿನ್ಹಾ ಸಭಾಂಗಣದಲ್ಲಿ ಅದ್ದೂರಿ ಚಾಲನೆ ದೊರೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ಕೌಶಲ್ಯಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಫೆಸ್ಟ್ ಆಯೋಜಿಸಲಾಗಿದೆ.


ಕಾರ್ಯಕ್ರಮದ ಮುಖ್ಯ ಅತಿಥಿಯಾದ ಅಲೋಶಿಯಸ್‌ನ ಹಳೆಯ ವಿದ್ಯಾರ್ಥಿ ಹಾಗೂ ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ಮಾತನಾಡಿ, ತರಗತಿಯೊಳಗಿನ ಶಿಕ್ಷಣದ ಜೊತೆಗೆ ತರಗತಿಯ ಹೊರಗಿನ ಕಲಿಕೆಯೂ ಮುಖ್ಯ ಎಂದು ಹೇಳಿದರು.


ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ವಿವಿಧ ಕೌಶಲ್ಯಗಳನ್ನು ಕಲಿಯುವುದು ಜೀವನದಲ್ಲಿ ಮಹತ್ವದ್ದಾಗಿದ್ದು, ಅವುಗಳ ಮೌಲ್ಯ ಮುಂದಿನ ದಿನಗಳಲ್ಲಿ ಅರಿವಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಆಸಕ್ತಿಯನ್ನು ಗುರುತಿಸಿಕೊಂಡು, ಅದನ್ನು ಕೌಶಲ್ಯವಾಗಿ ಬೆಳೆಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಇಚ್ಛೆ ಹೊಂದಿದ್ದರೆ, ಅಂತಹ ಯುವಕರಿಗೆ ಅವಕಾಶ ಕಲ್ಪಿಸುವ ತಮ್ಮ ಆಶಯವನ್ನು ಹಂಚಿಕೊಂಡರು.


ಗೌರವ ಅತಿಥಿಯಾದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದ ಅತೀಶ್ ಎಸ್. ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ, ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಆತ್ಮವಿಶ್ವಾಸದಿಂದ ಬೆಳೆಸಿಕೊಳ್ಳಬೇಕು ಹಾಗೂ ಫೆಸ್ಟ್‌ನಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಉಪಕುಲಪತಿ ರೆವ. ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ ಮಾತನಾಡಿ, ಪ್ರತಿಯೊಬ್ಬರ ಆಲೋಚನೆಗಳು ವಿಭಿನ್ನವಾಗಿದ್ದು, ಅವರಲ್ಲಿರುವ ಪ್ರತಿಭೆ ದೇವರು ನೀಡಿದ ಕೊಡುಗೆಯಾಗಿದೆ.

ಅದನ್ನು ಗುರುತಿಸಿ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.



ವೇದಿಕೆಯಲ್ಲಿ ಪ್ರೊ-ವೈಸ್ ಚಾನ್ಸಲರ್ ಮೆಲ್ವಿನ್ ಡಿಕೊನ್ನಾ, ಕುಲಸಚಿವ ಡಾ. ರೊನಾಲ್ಡ್ ನಜರೇತ್, ಫೆಸ್ಟ್ ನ ಸಂಯೋಜಕರಾದ ಡಾ. ದಿನೇಶ್ ನಾಯಕ್ ಹಾಗೂ ಡಾ. ದೇಶಲ್ ಫೆರ್ನಾಂಡಿಸ್, ವಿದ್ಯಾರ್ಥಿ ಸಂಯೋಜಕರಾದ ಗಿಸೆಲ್ ಪರ್ಲ್, ಜೀವನ್ ಡಿಮೆಲ್ಲೊ ಹಾಗೂ ರೇಚೆಲ್ ಮಾರಿಯಾ ಉಪಸ್ಥಿತರಿದ್ದರು.


ಕಾರ್ಯಕ್ರಮದ ಆರಂಭದಲ್ಲಿ ಡಾ. ದಿನೇಶ್ ನಾಯಕ್ ಸ್ವಾಗತ ಭಾಷಣ ಮಾಡಿದರು. ಕೊನೆಯಲ್ಲಿ ಜೀವನ್ ಡಿಮೆಲ್ಲೊ ವಂದನಾರ್ಪಣೆ ಸಲ್ಲಿಸಿದರು. ಬಳಿಕ ವಿವಿಧ ಸ್ಪರ್ಧೆಗಳು ಹಾಗೂ ಫೆಸ್ಟ್‌ನ ಚಟುವಟಿಕೆಗಳು ಮುಂದುವರಿದವು.


ಪ್ರೊ-ವೈಸ್ ಚಾನ್ಸಲರ್ ರೆ. ಡಾ. ಮೆಲ್ವಿನ್ ಡಿ'ಕುನ್ನಾ (ಎಸ್‌ಜೆ) ಅವರ ಅಧ್ಯಕ್ಷತೆಯಲ್ಲಿ ಸಮಾಪನ ಸಮಾರಂಭ ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿ, ರೋಹನ್ ಕಾರ್ಪೊರೇಷನ್ ನಿರ್ದೇಶಕ ಶ್ರೀ ಡಿಯೋನ್ ಮೊಂಟೇರೊ ಮಾತನಾಡಿ, "ವೃತ್ತಿಜೀವನದ ನಿಜವಾದ ಯಶಸ್ಸಿಗೆ ಕೇವಲ ಪುಸ್ತಕದ ವಿದ್ಯೆಯಷ್ಟೇ ಸಾಲದು; ಕ್ಯಾಂಪಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹಾಗೂ ಎದುರಾಗುವ ಸವಾಲುಗಳನ್ನು ಎದುರಿಸುವುದೇ ನಿಜವಾದ ತರಬೇತಿ"ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.


ಡಾ. ಡೆಶೆಲ್ ಫೆರ್ನಾಂಡಿಸ್ ಸ್ವಾಗತಿಸಿದರು, ಡಾ. ದಿನೇಶ್ ನಾಯಕ್ ವಂದಿಸಿದರು ಮತ್ತು ಜೊಯೇಲ್‌ ಡಿಸೊಜಾ ಕಾರ್ಯಕ್ರಮ ನಿರೂಪಿಸಿದರು.


ಈ ಸ್ಪರ್ಧೆಯಲ್ಲಿ ಕರ್ನಾಟಕ ಹಾಗೂ ನೆರೆ ರಾಜ್ಯಗಳ ಒಟ್ಟು 58 ಪದವಿ ಪೂರ್ವ ಕಾಲೇಜುಗಳ 1250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಫೆಸ್ಟಿವಲ್ಸ್ ಆಫ್ ಫೆಸ್ಟ್ ನಲ್ಲಿ ಕೆನರಾ ಪದವಿ ಪೂರ್ವ ಕಾಲೇಜು ವಿನ್ನರ್ ಆಗಿದ್ದು, ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಶಾಲೆ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತು.


ಸಾಂಸ್ಕೃತಿಕ ಉತ್ಸವ ದಲ್ಲಿ ಸುದಾನ ಪದವಿ ಪೂರ್ವ ಕಾಲೇಜು, ಪುತ್ತೂರು ವಿನ್ನರ್ ಆಗಿದ್ದು, ಸರೋಜಿನಿ ಮಧುಸೂದನ್ ಕುಶೆ ಪದವಿ ಪೂರ್ವ ಕಾಲೇಜು ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top