ಶಿವಳ್ಳಿ ಸ್ಪಂದನ ಕದ್ರಿ ವಲಯದ ವತಿಯಿಂದ ಶಿಕ್ಷಕರ ದಿನಾಚರಣೆ

Upayuktha
0


ಮಂಗಳೂರು: ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ವಿದ್ಯಾರ್ಥಿಗಳ ಬದುಕಿಗೆ ಜ್ಞಾನ, ಸಂಸ್ಕಾರ, ಶಿಸ್ತು ಹಾಗೂ ಜೀವನದ ಮೌಲ್ಯಗಳನ್ನು ತುಂಬಿ, ಅವರ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದು ಶಿವಳ್ಳಿ ಸ್ಪಂದನ (ರಿ.), ಮಂಗಳೂರು– ಕದ್ರಿ ವಲಯದ ಅಧ್ಯಕ್ಷೆ ಶ್ರೀಮತಿ ಶೀಲಾ ಜಯಪ್ರಕಾಶ ಹೇಳಿದರು.


ಶಿವಳ್ಳಿ ಸ್ಪಂದನ (ರಿ.), ಮಂಗಳೂರು– ಕದ್ರಿ ವಲಯದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 6ರಂದು ಸಂಜೆ ಶ್ರೀ ಮಾತಾ ಕೃಪಾದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.


ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿ, ಅನೇಕ ವಿದ್ಯಾರ್ಥಿಗಳ ಬದುಕಿಗೆ ಜ್ಞಾನ, ಸಂಸ್ಕಾರ ಹಾಗೂ ಮಾರ್ಗದರ್ಶನ ನೀಡಿದ ಗೌರವಾನ್ವಿತ ಶಿಕ್ಷಕ-ಶಿಕ್ಷಕಿಯರನ್ನು ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.


ಸನ್ಮಾನಿತರಾದ ಶಿಕ್ಷಕರಲ್ಲಿ ವೇ.ಮೂ. ಡಾ. ಪ್ರಭಾಕರ ಅಡಿಗ, ಶ್ರೀ ಸುಧಾಕರ ರಾವ್ ಪೇಜಾವರ, ಶ್ರೀಮತಿ ಸುಲೋಚನ ವಿ. ಭಟ್, ಶ್ರೀಮತಿ ಸುಲೋಚನ ರಾವ್, ಶ್ರೀಮತಿ ರಮಾಮಣಿ ಭಟ್, ಡಾ. ಮಾಲಿನಿ ಹೆಬ್ಬಾರ್, ಶ್ರೀಮತಿ ವಾಣೀ ಜಯರಾಮ, ಶ್ರೀಮತಿ ಸುಶೀಲಾ, ಶ್ರೀಮತಿ ಜಯಲಕ್ಷ್ಮೀ ರಾವ್, ಶ್ರೀಮತಿ ಮನೋರಂಜಿನಿ, ಡಾ. ಪದ್ಮನಯನ, ಶ್ರೀಮತಿ ಅಹಲ್ಯ ವೆಂಕಟ್ರಾಜ್, ಶ್ರೀಮತಿ ಸುಮಿತ್ರ ಆಚಾರ್, ಶ್ರೀಮತಿ ಶ್ರದ್ಧಾ ಎನ್. ಭಟ್, ಶ್ರೀಮತಿ ವತ್ಸಲಾ ಭಟ್, ಶ್ರೀಮತಿ ವಿನುತಾ ತಂತ್ರಿ, ಶ್ರೀಮತಿ ಚಂದ್ರಿಕಾ ಭಟ್, ಶ್ರೀಮತಿ ಅನುರಾಧಾ ತಂತ್ರಿ, ಶ್ರೀಮತಿ ಚೈತ್ರಾ ಬಿ., ಶ್ರೀಮತಿ ಜಾಹ್ನವಿ ದೇವರಾಜ ಅಗಳಿ ಹಾಗೂ ಶ್ರೀಮತಿ ಗೀತಾ ಸರಳಾಯ ಅವರು ಉಪಸ್ಥಿತರಿದ್ದರು.


ಸನ್ಮಾನ ಸ್ವೀಕರಿಸಿದ ಶಿಕ್ಷಕರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕ ವೃತ್ತಿಯಲ್ಲಿನ ತಮ್ಮ ಪಯಣ, ವಿದ್ಯಾರ್ಥಿಗಳೊಂದಿಗೆ ಹೊಂದಿದ್ದ ಆತ್ಮೀಯತೆ ಹಾಗೂ ಸಮಾಜಕ್ಕೆ ನೀಡಿದ ಸೇವೆಯನ್ನು ಸ್ಮರಿಸಿಕೊಂಡರು.


ಕಾರ್ಯಕ್ರಮದಲ್ಲಿ ಶಿವಳ್ಳಿ ಸ್ಪಂದನ (ರಿ.), ಮಂಗಳೂರಿನ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್, ಉಪಾಧ್ಯಕ್ಷ ಶ್ರೀಯುತ ಶ್ರೀನಿವಾಸ ಆಚಾರ್ ನೋಡು, ಕಾರ್ಯದರ್ಶಿ ಶ್ರೀಮತಿ ರಮಾಮಣಿ, ಕೋಶಾಧಿಕಾರಿ ಶ್ರೀಯುತ ರಘುರಾಮ ರಾವ್ ಹಾಗೂ ಆಡಳಿತ ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದರು.


ಶಿವಳ್ಳಿ ರತ್ನ ಪುರಸ್ಕೃತರಾದ ಡಾ. ವಾದೀಶ್ ಭಟ್, ಶರಣ್ ರಾವ್ ಹಾಗೂ ಶ್ರೀಮತಿ ಇಶಾ ರಾವ್ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸನ್ಮಾನಿತ ಶಿಕ್ಷಕರಿಗೆ ಶುಭ ಹಾರೈಸಿದರು.


ಶಿವಳ್ಳಿ ಸ್ಪಂದನ – ಕದ್ರಿ ವಲಯದ ವತಿಯಿಂದ ಅಧ್ಯಕ್ಷರಾದ ಶ್ರೀಮತಿ ಶೀಲಾ ಜಯಪ್ರಕಾಶ, ಉಪಾಧ್ಯಕ್ಷರಾದ ಸುಧಾಕರ ಭಟ್ ಹಾಗೂ ಸದಾನಂದ ಪೇಜಾವರ, ಕಾರ್ಯದರ್ಶಿ ರವಿಕಾಂತ ಭಟ್ ಹಾಗೂ ಇತರ ಕಾರ್ಯಕಾರಿಣಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಪತ್ರಕರ್ತ ಹಾಗೂ ಶಿವಳ್ಳಿ ಸ್ಪಂದನದ ಗೌರವ ಸಲಹೆಗಾರರಾದ ಶ್ರೀಯುತ ಜಿತೇಂದ್ರ ಕುಂದೇಶ್ವರ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಸಮಾರಂಭಕ್ಕೆ ಮೆರುಗು ತಂದರು.


ಕಾರ್ಯಕ್ರಮವು ಅತ್ಯಂತ ಶಿಸ್ತು, ಸಂಯಮ ಹಾಗೂ ಆತ್ಮೀಯ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಿಸುವುದರ ಮೂಲಕ ಅವರ ಆದರ್ಶ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಾರ್ಥಕ ಪ್ರಯತ್ನ ಇದಾಗಿದೆ.


ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸನ್ಮಾನಿತ ಶಿಕ್ಷಕರು, ಶಿವಳ್ಳಿ ಸ್ಪಂದನದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು, ಸದಸ್ಯರು, ಬಂಧು-ಮಿತ್ರರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top