ಹೊಸದುರ್ಗ: ಹೊಸದುರ್ಗದ ಭಗವಾನ್ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಸೆ.19ರಂದು ಬೆಳಿಗ್ಗೆ 10.45ಕ್ಕೆ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವ ಕಥನ ಕುರಿತ ಪುಸ್ತಕವೊಂದರ ಬಿಡುಗಡೆ ಸಮಾರಂಭ ನಡೆಯಲಿದೆ.
ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವಗಳು, ಜೀವನ, ಕಾರ್ಯಗಳನ್ನೊಳಗೊಂಡ ಈ ಕೃತಿಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮವು ಬೆಳಿಗ್ಗೆ 10.45ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ. ದೀಪ ಪ್ರಜ್ವಲನ, ವೇದಘೋಷ, ಪುಸ್ತಕ ಬಿಡುಗಡೆ, ಸ್ವಾಮಿ ಅವಧೂತಾನಂದರ ಜೀವನ ಮತ್ತು ಕಾರ್ಯಗಳ ಕುರಿತ ಸಾಕ್ಷ್ಯಚಿತ್ರವೊಂದರ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಗೌರವ ಅತಿಥಿಗಳಾಗಿ ಶ್ರೀ ಶಿವ ಲಿಂಗಪ್ಪ ಸ್ವಾಮೀಜಿ ಪಾಲ್ಗೊಳ್ಳುವರು ಎಂದು ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ. ಈ ಸಂದರ್ಭ ಕಾಸರಗೋಡು ಸತ್ಯಸಾಯಿ ಭಕ್ತರಿಂದ ವೇದಪಠಣ ಮತ್ತು ಭಜನೆ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

