ಎಸ್‌ಡಿಎಂ ಆರೋಹಮ್-2026ರಲ್ಲಿ ಆಳ್ವಾಸ್ ಪಿಯು ಕಾಲೇಜಿಗೆ ಸಮಗ್ರ ಚಾಂಪಿಯನ್‌ಶಿಪ್

Shreya Hegde
0



 ಮೂಡುಬಿದಿರೆ : ರಾಜ್ಯದ 37 ಕಾಲೇಜುಗಳಿಂದ 1,350ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದ ಅಂತರ್ ಕಾಲೇಜು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ ‘ಎಸ್‌ಡಿಎಂ ಆರೋಹಮ್-2026’ರಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ಗೆದ್ದು ಸಾಧನೆ ಮೆರೆದಿದ್ದಾರೆ.


ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕು ಪ್ರಥಮ ಹಾಗೂ ಎರಡು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡರು.


ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ನಿಹಾಲ್, ಶೌರ್ಯ, ವರ್ಷಾ, ನಮಿಷ್, ಶ್ರೀನಿವಾಸ್, ಸಾತ್ವಿಕ್ ಹಾಗೂ ತೇಜಶ್ರೀ ಅವರ ತಂಡ ಪ್ರಥಮ ಸ್ಥಾನ ಗಳಿಸಿತು. ಕಾರ್ಪೊರೇಟ್ ವಾಕ್ ಸ್ಪರ್ಧೆಯಲ್ಲಿ ಆದ್ಯಾ ಜೈನ್, ನಿತಿನ್ ಕಶ್ಯಪ್, ನಿಧಿ ಕೆ.ಕೆ. ಹಾಗೂ ನಿಯೋಲಾ ಲೋಬೊ ಅವರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.


ಈವೆಂಟ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಅರುಷ್ ಹಾಗೂ ಆದಿತ್ಯ ಅವರ ತಂಡ ಪ್ರಥಮ ಸ್ಥಾನ ಗಳಿಸಿದರೆ, ‘ಪಕೋಡಾ ಟೇಲ್ಸ್’ ಸ್ಪರ್ಧೆಯಲ್ಲಿ ಲಿಖಿತಾ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಪ್ರತಿಭೆ ಮೆರೆದರು.


ಇನ್ನು ಟೆಕ್ ಟ್ರೆಕ್ ಸ್ಪರ್ಧೆಯಲ್ಲಿ ಸಿದ್ದೇಶ್, ಪವನ್, ಅಮನ್ ಹಾಗೂ ಹರ್ಷ ಅವರ ತಂಡ ದ್ವಿತೀಯ ಸ್ಥಾನ ಗಳಿಸಿತು. ವೆಸ್ಟರ್ನ್ ಡ್ಯಾನ್ಸ್ ವಿಭಾಗದಲ್ಲಿ ಶ್ರುಜನ್ಯಾ, ತನಿಷಾ, ವೀಕ್ಷಾ, ವೈಭವಿ, ಮಾನ್ವಿ, ಮಾನಸ್ವಿ, ಅನುಷ್ಕಾ ಹಾಗೂ ನವ್ಯಾ ಅವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.


ಸ್ಪರ್ಧೆಗಳಿಗೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾದ ರಶ್ಮಿನ್ ತನ್ವೀರ್, ಅಕ್ಷತಾ ಜೈನ್, ಪುಷ್ಪಲತಾ ಪಿ.ಡಿ. ಹಾಗೂ ಪ್ರಫುಲ್ಲ ಶೆಟ್ಟಿ ತರಬೇತಿ ಮತ್ತು ಮಾರ್ಗದರ್ಶನ ನೀಡಿದರು.


ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್‌ಡಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top