ರೋಟರಿ ಕ್ಲಬ್ ಮಂಗಳೂರು ಹಿಲ್- ಸೈಡ್ ವತಿಯಿಂದ ವನಮಹೋತ್ಸವ

Upayuktha
0


ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಹಿಲ್-ಸೈಡ್ ವತಿಯಿಂದ ಪರಿಸರ ಸಂರಕ್ಷಣೆಯ ಭಾಗವಾಗಿ ಇತ್ತೀಚೆಗೆ ಹಳೆಯಂಗಡಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಹಳೆಯಂಗಡಿಯ ಹೊಯ್ಗೆಗುಡ್ಡೆಯ ಖಾಲಿ ಜಾಗದಲ್ಲಿ ರೋಟರಿ ಕ್ಲಬ್‌ ಮಂಗಳೂರು ಹಿಲ್-ಸೈಡ್‌ನ ಸದಸ್ಯರೆಲ್ಲರೂ ಒಗ್ಗೂಡಿ ಸುಮಾರು 400ಕ್ಕೂ ಹೆಚ್ಚು ತೇಗದ ಸಸಿಗಳನ್ನು ನೆಡುವ ಮೂಲಕ ಪ್ರಕೃತಿ ಪ್ರೇಮ ಮೆರೆದರು.


ಈ ಹಿಂದೆ 2022ರಲ್ಲಿ ಇದೇ ಪ್ರದೇಶದ ಸಮೀಪ ಸಂಸ್ಥೆಯ ವತಿಯಿಂದ ನೆಡಲಾಗಿದ್ದ 700ಕ್ಕೂ ಅಧಿಕ ತೇಗದ ಗಿಡಗಳು ಪ್ರಸ್ತುತ ಅತ್ಯಂತ ಆರೋಗ್ಯಕರವಾಗಿ ಬೆಳೆದು ನಿಂತಿವೆ. ಇದು ರೋಟರಿ ಸಂಸ್ಥೆಗೆ ಪರಿಸರದ ಮೇಲಿರುವ ಬದ್ಧತೆ ಮತ್ತು ಕಾಳಜಿಗೆ ಸಜೀವ ಸಾಕ್ಷಿಯಾಗಿದೆ.


ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷೆ ರೋ. ದೀಪಾ ರಾವ್, ಸಹಾಯಕ ಗವರ್ನರ್ ರೋ. ಪ್ರವೀಣಚಂದ್ರ ಶರ್ಮ, ಸದಸ್ಯರಾದ ರೋ. ರಂಗನಾಥ್ ಕಿಣಿ, ರೋ. ಪೀಟರ್ ಪಿಂಟೋ, ರೋ. ವಿಷ್ಣುದಾಸ್ ಶೇವಗೂರ್, ರೋ. ಅನಿಲ್ ರಾವ್, ರೋ. ಕಿರಣ್ ಕುಮಾರ್, ರೋ. ರಾಜೇಶ್ ವಸಾನಿ, ರೋ. ಮನೀಷ್ ರಾವ್, ರೋ. ಶ್ರೀನಿವಾಸ ಕಿಣಿ, ರೋ. ಉಷಾ ಸುಧಾಕರ್, ರೋ. ವಾಸುದೇವ ಶೆಟ್ಟಿಗಾರ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿ ಸಸಿಗಳನ್ನು ನೆಟ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top