ರೋಟರಿ ಸೆಂಟ್ರಲ್‌ನಿಂದ ಗುರುವಂದನಾ ಪ್ರಶಸ್ತಿ ಪ್ರದಾನ

Shreya Hegde
0


ಮಂಗಳೂರು, ಸೆ.27: ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ಗುರುವಂದನಾ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಹೊಟೇಲ್ ಸೀ ವ್ಯೂ ಸಭಾಂಗಣದಲ್ಲಿ ದಿನಾಂಕ 25.09.2026ರಂದು ಸಂಸ್ಥೆಯ ಅಧ್ಯಕ್ಷ ಬಿ.ಎನ್. ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಕೆಎಂಸಿ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಗುರುದತ್ ಕಾಮತ್, ಕರಂಬಾರು ದ.ಕ. ಜಿಲ್ಲಾ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಜಗನ್ನಾಥ್ ಶೆಟ್ಟಿ, ನಗರದ ಸಂತ ಅಲೋಶಿಯಸ್ ಶಾಲೆಯ ಶಿಕ್ಷಕರಾದ ಪ್ರವೀಣ್ ಕುಟಿನ್ಹೊ, ಕೇರಳ‌ ಸಮಾಜಂ ಶಾಲೆಯ ನಿವೃತ್ತ ಶಿಕ್ಷಕಿ ಸುಭದ್ರಾ ಶೇಟ್ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ, ಅನುಪಮ ಸೇವೆ, ಸಾಧಿಸಿದ ಅಮೂಲ್ಯ ಸಾಧನೆಗಳನ್ನು ಪರಿಗಣಿಸಿ ಗುರುವಂದನಾ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.

                                                 

ಈ ಸಂದರ್ಭದಲ್ಲಿ ಸಂಸ್ಥೆಯ ಸಮಾಜಸೇವಾ ಯೋಜನೆಯ ಅಂಗವಾಗಿ ವಾಮಂಜೂರು ನಿವಾಸಿ, ಸೌಂದರ್ಯ ತಜ್ಞೆ ಸುಪ್ರೀತಾ ಅವರಿಗೆ ಸ್ವ‌ಉದ್ಯೋಗವಾಗಿ ಸೌಂದರ್ಯ ಮಳಿಗೆ ಆರಂಭಿಸಲು 15,000 ರು. ಆರ್ಥಿಕ ಸಹಾಯವನ್ನು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ ಅವರು ಹಸ್ತಾಂತರಿಸಿದರು. ಈ ಉದಾರ ಕೊಡುಗೆಯನ್ನು ಸಂಸ್ಥೆಯ ಸದಸ್ಯ ಎಂ.ವಿ. ಮಲ್ಯ ಅವರು ಪ್ರಾಯೋಜಿಸಿದ್ದರು. ಬಳಿಕ ಡಾ. ದೇವದಾಸ್ ರೈ ಅವರ ಸಂಪಾದಕತ್ವದ ಸಂಸ್ಥೆಯ ಗೃಹವಾರ್ತಾ ಪತ್ರಿಕೆ "ಸೆಂಟೋರ್"ನ್ನು ಸಂಸ್ಥೆಯ ಹಿರಿಯ ಸದಸ್ಯ ಶ್ರೀನಿವಾಸ್ ಶೆಟ್ಟಿ ಬಿಡುಗಡೆಗೊಳಿಸಿದರು.  ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 2, 3, 4ರಂದು ನಗರದ ಕುಲಶೇಖರದಲ್ಲಿರುವ ಕೋರ್ಡೆಲ್ ಚರ್ಚ್ ಪ್ರಾಂಗಣದಲ್ಲಿ ಜರುಗಲಿರುವ "ಕೃಷಿ ಹಬ್ಬ"ದ ಬಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.


ಸಂಸ್ಥೆಯ ಅಧ್ಯಕ್ಷ ಬಿ.ಎನ್. ರವೀಂದ್ರ ಸ್ವಾಗತಿಸಿ, ಶಿಕ್ಷಕರ ವೃತ್ತಿ ಗೌರವಾನ್ವಿತ ವೃತ್ತಿಯಾಗಿದ್ದು, ಸಮಾಜದಲ್ಲಿ ವಿಶೇಷ ಸ್ಥಾನಮಾನ ಅಲಂಕರಿಸಿದ್ದಾರೆ ಎಂದರು. ಕಾರ್ಯದರ್ಶಿ ಜಾಕ್ಸನ್ ಸಲ್ದಾನಾ ಸಂಸ್ಥೆಯ ವರದಿ ಮಂಡಿಸಿದರು. ಶೆಲ್ಡನ್ ಕ್ರಾಸ್ತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರವಿ ಜಲನ್ ವಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಭಾಸ್ಕರ ರೈ ಉಪಸ್ಥಿತರಿದ್ದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top