ನವದೆಹಲಿ: ಇಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಬುಧವಾರ ಸಂಜೆ ಭಾರತ ರತ್ನ, ಹಿರಿಯ ರಾಜಕೀಯ ಧುರೀಣ ಎಲ್.ಕೆ. ಆಡ್ವಾಣಿ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ನಡೆಸಿದರು.
ಅಡ್ವಾಣಿಯವರ ನಿವಾಸಕ್ಕೆ ಆಗಮಿಸಿದ ಪೇಜಾವರ ಶ್ರೀಗಳನ್ನು ಅವರ ಸುಪುತ್ರಿ ಪ್ರತಿಭಾ ಆಡ್ವಾಣಿಯವರು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶ್ರೀಪಾದಂಗಳು ಎಲ್. ಕೆ. ಆಡ್ವಾಣಿಯವರ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ವಿಚಾರಿಸಿ, ಅವರಿಗೆ ಭಗವಂತನು ಉತ್ತಮ ಆಯುರಾರೋಗ್ಯ ಹಾಗೂ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಬಿಕಾನೇರ್‌ನ ಪ್ರಮುಖರಾದ ಅಶ್ವಿನ್ ಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಭೇಟಿಯ ವೇಳೆ ಶ್ರೀಗಳು ಆಡ್ವಾಣಿಯವರನ್ನು ಫಲ ಮಂತ್ರಾಕ್ಷತೆ ನೀಡಿ ಸಂಮಾನಿಸಿ, ಹಾರ್ದಿಕವಾಗಿ ಆಶೀರ್ವದಿಸಿದರು. ಪೇಜಾವರ ಶ್ರೀಗಳ ಚಾತುರ್ಮಾಸ್ಯ ವ್ರತದ ಅಂಗವಾಗಿ ನವದೆಹಲಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿದ್ದು, ಈ ನಡುವೆ ಹಿರಿಯರಾದ ಅಡ್ವಾಣಿಯವರ ಭೇಟಿ ವಿಶೇಷ ಮಹತ್ವ ಪಡೆದುಕೊಂಡಿದೆ.
