ಮಂಗಳೂರು ವಿವಿ ಕ್ರಾಸ್‌ಕಂಟ್ರಿಯಲ್ಲಿ ಆಳ್ವಾಸ್ ಎರಡು ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್

Upayuktha
0

ಸತತ 23ನೇ ಬಾರಿ ಪುರುಷ–ಮಹಿಳಾ ವಿಭಾಗದಲ್ಲಿ ಪ್ರಶಸ್ತಿ; 12 ಕ್ರೀಡಾಪಟುಗಳು ಅಖಿಲ ಭಾರತ ಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಸುಳ್ಯದ ಎನ್‌ಎಂಸಿ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯದ ಅಂತರ-ಕಾಲೇಜು ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡಗಳು ಎರಡೂ ವಿಭಾಗಗಳಲ್ಲಿ ಸತತ 23ನೇ ಬಾರಿಗೆ ಸಮಗ್ರ ಚಾಂಪಿಯನ್‌ಶಿಪ್ ಪಡೆದುಕೊಂಡರು.  


ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ, ಒಟ್ಟು 10 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‌ಶಿಪ್‌ನ್ನು ಕುರುಂಜಿ ವಿಶ್ವನಾಥ ಗೌಡ ಮೆಮೋರಿಯಲ್ ಟ್ರೋಪಿಯೊಂದಿಗೆ ತನ್ನದಾಗಿಸಿಕೊಂಡರು. ಪುರುಷರ ವಿಭಾಗದಲ್ಲಿ ಶೈಲೇಶ್ ಪ್ರಥಮ, ಸುನಿಲ್ ದ್ವಿತೀಯ ಹಾಗೂ ರೋಹಿತ್ ತೃತೀಯ ಸ್ಥಾನ ಪಡೆದರೆ, ಜುಗುನ್ನು ಕುಮಾರ್ ನಾಲ್ಕನೇ, ರೋಹನ್ ಕುಮಾರ್ ಐದನೇ ಹಾಗೂ ಅಜಯ್ ಕುಮಾರ್ ಪಾಟೀಲ್ ಆರನೇ ಸ್ಥಾನ ಪಡೆದುಕೊಂಡರು.


ಮಹಿಳೆಯರ ವಿಭಾಗದಲ್ಲಿಯೂ ಆಳ್ವಾಸ್ ತಂಡ 10 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‌ಶಿಪ್ ಪಡೆದು ಕೈಕುರೆ ರಾಮಣ್ಣ ಗೌಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಭಾಗೀರಥಿ ಪ್ರಥಮ, ಯಾಶಿ ದ್ವಿತೀಯ ಹಾಗೂ ಆರತಿ ತೃತೀಯ ಸ್ಥಾನ ಪಡೆದರು. ಆರಾಧನಾ ನಾಲ್ಕನೇ, ಆರತಿ ಅರ್ಜುನ್ ಐದನೇ ಹಾಗೂ ಜ್ಯೋತಿ ಏಳನೇ ಸ್ಥಾನ ಗಳಿಸಿ ತಂಡದ ಚಾಂಪಿಯನ್‌ಶಿಪ್‌ಗೆ ಬಲ ತುಂಬಿದರು.


ಈ ಚಾಂಪಿಯನ್‌ಶಿಪ್‌ನ ಮತ್ತೊಂದು ಗಮನಾರ್ಹ ಸಾಧನೆಯೆಂದರೆ, ನವೆಂಬರ್‌ನಲ್ಲಿ ಉಡುಪಿಯಲ್ಲಿ ನಡೆಯಲಿರುವ ಅಖಿಲ ಭಾರತ ಪುರುಷರ ಹಾಗೂ ಮಹಿಳೆಯರ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ಆಳ್ವಾಸ್‌ನ 12 ಕ್ರೀಡಾಪಟುಗಳನ್ನು ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ರಾಷ್ಟಿçÃಯ ಮಟ್ಟದ ಕ್ರಾಸ್‌ಕಂಟ್ರಿ ಕ್ರೀಡಾಕೂಟದಲ್ಲಿ  ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಮಂಗಳೂರು ವಿವಿಯನ್ನು ಆಳ್ವಾಸ್‌ನ ವಿದ್ಯಾಥಿಗಳೇ ಪ್ರತಿನಿಧಿಸಲಿದ್ದಾರೆ.  


ಸಮಗ್ರ ಚಾಂಪಿಯನ್‌ಶಿಪ್ ಗೆದ್ದ ಕ್ರೀಡಾಪಟುಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top