ಮಂಗಳೂರು: ಮನಸ್ವಿನಿ ಮಹಿಳಾ ವೇದಿಕೆಯ (ಮನೆ ಮನೆ ಅಭಿಯಾನ) ವತಿಯಿಂದ ಅಕ್ಟೋಬರ್ 4, 2026 ರಂದು ಭಾನುವಾರದಂದು ಅಪರಾಹ್ನ 2:00 ಗಂಟೆಯಿಂದ 5:00 ಗಂಟೆಯವರೆಗೆ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಶ್ರೀನಿಧಿ ನಿಲಯ, ನಾರಾಯಣ ಮಂಗಲ, ವಿ.ಬಿ. ಕುಳಮರ್ವ ಅವರ ಮನೆಯಲ್ಲಿ ನಡೆಯಲಿದೆ.
ಉದ್ಘಾಟನೆ ಹಾಗೂ ಪ್ರಮುಖ ಅತಿಥಿಗಳು: ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರಾದ ವಿ.ಬಿ. ಕುಳಮರ್ವ ಹಾಗೂ ಕಾಸರಗೋಡಿನ ವಿಶ್ರಾಂತ ವಿದ್ಯಾಧಿಕಾರಿ ಶ್ರೀಮತಿ ಲಲಿತಾಲಕ್ಷ್ಮಿ ಕುಳಮರ್ವ ನೆರವೇರಿಸಲಿದ್ದಾರೆ. ಜನಪ್ರಿಯ ಕಾದಂಬರಿಕಾರರಾದ ಶ್ರೀಮತಿ ಪ್ರಸನ್ನ ವಿ. ಚಿಕ್ಕಮನೆ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಪ್ರಾಧ್ಯಾಪಕರಾದ ಶ್ರೀಮತಿ ಡಾ. ಪರಿಣಿತ ರವಿ ಕೊಚ್ಚಿ ಅವರು ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಿಂದ ಪ್ರಾರ್ಥನೆ ನಡೆಯಲಿದ್ದು, ಶ್ರೀಮತಿ ಸುಶೀಲಾ ಪದ್ಮಣ ಸ್ವಾಗತಿಸಲಿದ್ದಾರೆ ಮತ್ತು ಶ್ರೀಮತಿ ಲಕ್ಷ್ಮಿ ವಿ. ಭಟ್ ಪ್ರಾಸ್ತಾವಿಕ ನುಡಿಯನ್ನು ಆಡಲಿದ್ದಾರೆ. ಹಾಗೆಯೇ ಕಥಾಗೋಷ್ಠಿಯಲ್ಲಿ ಶ್ರೀಮತಿ ಪ್ರಸನ್ನ ವಿ. ಚಿಕ್ಕಮನೆ, ಶ್ರೀಮತಿ ಸತ್ಯವತಿ ಭಟ್ ಕೊಳಚಪ್ಪು, ಶ್ರೀಮತಿ ಪಾರ್ವತಿ ಕುಳಕೋೇಡ್ಲು, ಶ್ರೀಮತಿ ಸೀತಾಲಕ್ಷ್ಮಿ ವರ್ಮ, ಶ್ರೀಮತಿ ಧನ್ಯಶ್ರೀ ಸರಳಿ, ಶ್ರೀಮತಿ ಸುಮಿತ್ರ ಎಪರ್ಚಕಟ್ಟೆ, ಶ್ರೀಮತಿ ಸರ್ವಮಂಗಲ ಪುಣೇಂಚಿತ್ತಾಯ ಹಾಗೂ ಶ್ರೀಮತಿ ಅನುಪಮಾ ಉಡುಪ ಮೂಲೆ ಮುಂತಾದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಜ್ಯೋತ್ಸ್ನಾ ಕಡಂಡೇಲು ನಿರ್ವಹಿಸಲಿದ್ದು, ಶ್ರೀಮತಿ ಪ್ರಮೀಳಾ ಚುಳ್ಳಿಕಾನ ಧನ್ಯವಾದ ಅರ್ಪಿಸಲಿದ್ದಾರೆ ಮತ್ತು ಶ್ರೀಮತಿ ನಿರ್ಮಲಾ ಶೇಷಪ್ಪ ಅವರು ಯೂಟ್ಯೂಬ್ ಸಹಕಾರ ನೀಡಲಿದ್ದಾರೆ.
