ಹುನಗುಂದ: ಚಿತ್ರಕಲೆ ಜಗತ್ತಿನ ಸಾರ್ವತ್ರಿಕ ಭಾಷೆ. ಇದಕ್ಕೆ ಹಿರಿದಾದ ಇತಿಹಾಸ ಇದೆ. ಆಸಕ್ತಿ ಇರುವ ಪ್ರತಿಯೊಬ್ಬರನ್ನು ತನ್ನೆಡೆಗೆ ಸೆಳೆಯುತ್ತದೆ. ಮಾನವ ಇತಿಹಾಸ ನಿರ್ಮಾಣದಲ್ಲಿ ಚಿತ್ರಕಲೆಯ ಪಾತ್ರ ಪ್ರಮುಖ. ಮಾನವನ ಮನಸ್ಸನ್ನು ಉಲ್ಲಾಸಗೊಳಿಸುವ ಅಗಾಧ ಶಕ್ತಿ ಅದಕ್ಕಿದೆ ಎಂದು ಕಲಬುರಗಿ -ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ ಹೇಳಿದರು.
ಅವರು ಯಾದಗಿರಿ ಜಿಲ್ಲೆಯ ಸುರಪುರ ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯ ಯೋಜನೆ ಅಡಿ ಹುನಗುಂದದ ಯುವ ಚಿತ್ರಕಲಾವಿದ ಮಹೇಶ ವಾಲಿಕಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಸುರಪುರ ಬಸವೇಶ್ವರ ಬ್ಯಾಂಕ ಅಧ್ಯಕ್ಷ ಎಚ್.ಸಿ. ಪಾಟೀಲ, ಉಪಾಧ್ಯಕ್ಷ ವೀರೇಂದ್ರ ನಿಷ್ಠಿ ದೇಶಮುಖ, ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಮುಖಂಡರಾದ ಶಿವಶರಣಪ್ಪ ಹೆಡಗಿನಾಳ, ವೀರಭದ್ರಪ್ಪ ಸತ್ಯಂಪೇಟೆ, ವೀರೇಶ ಪಂಚಾಂಗಮಠ, ಸಿದ್ದನಗೌಡ ಹೆಬ್ಬಾಳ, ಗುರುನಾಥ ಕಟ್ಟಿ ಮತ್ತು ಪ್ರಶಾಂತ ಜಾಧವ ಉಪಸ್ಥಿತರಿದ್ದರು. ಸಿದ್ಧಪ್ರಸಾದ ಪಾಟೀಲ ನಿರೂಪಿಸಿದರು. ಸೃಜನ ಜಗಶೆಟ್ಟಿ ಸ್ವಾಗತಿಸಿದರು, ಸೌಭಾಗ್ಯ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

