ಮಂಗಳೂರು: ಪಡುಬಿದ್ರಿಯಲ್ಲಿ ಸಮಗ್ರ ಜೈವಿಕ ಇಂಧನ ಘಟಕವನ್ನು ನಿರ್ವಹಿಸುತ್ತಿರುವ 'ಎಂ11 ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್', 'ಇಂಡಿಯಾ ಸ್ಯಾಫ್ ಅವಾಡ್ರ್ಸ್ 2026'ರಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನವದೆಹಲಿಯ 'ಭಾರತ ಮಂಟಪ'ದಲ್ಲಿ ಬುಧವಾರ ನಡೆದ 'ಇಂಡಿಯಾ ಸ್ಯಾಫ್ ಕಾನ್‍ಕ್ಲೇವ್ ಮತ್ತು ಅವಾಡ್ರ್ಸ್' ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಕಂಪನಿಯು 'ಸ್ಯಾಫ್ ಇನ್ವೆಸ್ಟ್‍ಮೆಂಟ್ ಅವಾರ್ಡ್ 2026' (ಸ್ಯಾಫ್ ಹೂಡಿಕೆ ಪ್ರಶಸ್ತಿ) ಮತ್ತು ಪ್ರತ್ಯೇಕವಾಗಿ 'ಇಂಡಿಯಾ ಸ್ಯಾಫ್ ಅವಾರ್ಡ್ 2026 - ಸ್ಯಾಫ್ ಫೀಡ್‍ಸ್ಟಾಕ್ ಹೂಡಿಕೆ ಮತ್ತು ಹಣಕಾಸು ನಾಯಕತ್ವ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹೂಡಿಕೆಯನ್ನು ಕ್ರೋಢೀಕರಿಸುವ, ಕಚ್ಚಾ ವಸ್ತುಗಳ ಸಾಮಥ್ರ್ಯವನ್ನು ಬಲಪಡಿಸುವ ಮತ್ತು ದೇಶೀಯ ಸ್ಯಾಫ್ ಉತ್ಪಾದನೆಯನ್ನು ಮುನ್ನಡೆಸುವ ಎಂ11 ಎನರ್ಜಿಯ ಪ್ರಯತ್ನಗಳಿಗೆ ಸಂದ ಗೌರವ ಇದಾಗಿದೆ ಎಂದು ಎಂ11 ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್‍ನ ಸ್ಯಾಫ್ ವಿಭಾಗದ ಮುಖ್ಯಸ್ಥರಾದ ರಾಮನ್ ಚೋಪ್ರಾ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುಭಾನ್ ಖಾನ್ ಹೇಳಿದ್ದಾರೆ.
ಎಂ11 ಎನರ್ಜಿ ಎಸ್‍ಎಎಫ್ (ಸುಸ್ಥಿರ ವಿಮಾನಯಾನ ಇಂಧನ) ಯೋಜನೆಯ ಮೂಲಕ, ಕಂಪನಿಯು ಈಗ ಈ 'ವೃತ್ತಾಕಾರದ ಆರ್ಥಿಕತೆ'ಯ ಮಾದರಿಯನ್ನು ರಸ್ತೆ ಸಾರಿಗೆಯಿಂದ ವಿಮಾನಯಾನ ಕ್ಷೇತ್ರಕ್ಕೂ ವಿಸ್ತರಿಸಲು ಮುಂದಾಗಿದೆ. ಎಂ11 ಪ್ರಸ್ತುತ 9 ರಾಜ್ಯಗಳು ಮತ್ತು 26 ಜಿಲ್ಲೆಗಳಲ್ಲಿ ಸಂಗ್ರಹ ಪಾಲುದಾರರ ದೊಡ್ಡ ಜಾಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ರಾಜ್ಯದಲ್ಲಿ ಸಮುದಾಯ ಮತ್ತು ಪರಿಸರ ಉಪಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಬೆಂಗಳೂರು-ಉಡುಪಿ ಕಾರಿಡಾರ್‍ನಾದ್ಯಂತ ಶಾಲೆಗಳು, ಉದ್ಯೋಗಿಗಳು, ಸರ್ಕಾರಿ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಮತ್ತು ರೈತರನ್ನು ಒಳಗೊಂಡ ಪ್ರಸ್ತಾವಿತ ಬಹು-ವರ್ಷದ ತೋಟಗಾರಿಕೆ ಕಾರ್ಯಕ್ರಮವೂ ಇದರಲ್ಲಿ ಸೇರಿದೆ ಎಂದು ಪ್ರಕಟಣೆ ಹೇಳಿದೆ.
