ಕಾರ್ಕಳ: ಅಕ್ಷರಾಮೃತ ರಜತ ಸಂಭ್ರಮ ಉದ್ಘಾಟನೆ

Upayuktha
0



ಕಾರ್ಕಳ: ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ನಮ್ಮ ಪ್ರಾಚೀನ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋದಾಗ ಆ ಸಂಸ್ಕಾರಯುತ ಜೀವನವನ್ನು ಯುವ ಜನಾಂಗ ಪಡೆದು ಮುಂದಿನ ಪೀಳಿಗೆಗೆ ಸಂಸ್ಕಾರಯುತ ದಾರಿಯನ್ನು ಮಾಡಿಕೊಟ್ಟ ಹಾಗೆ ಆಗುತ್ತದೆ ಎಂದು ಉದಯ ಕೃಷ್ಣಯ್ಯ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.


ಬೋಳ ಯಕ್ಷಾಕ್ಷರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಕ್ಷರಾಮೃತ ರಜತ ಸಂಭ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


ಬೋಳ ಪ್ರಶಾಂತ್ ಕಾಮತ್ ರಜತ ಸಂಭ್ರಮದ ಲೋಗೋ ಅನಾವರಣಗೊಳಿಸಿದರು. ಆದರ್ಶ ಆಚಾರ್ಯ ಪರಿಸರ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿದರು. ಕೆಪಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಉದಯ್ ಜಿ.ಆಚಾರ್ಯ, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಗ್ರೆನೇಶಿಯ ಸಾ ಮಿಲ್ ಮಾಲಕ ಗ್ರೆಗೋರಿ ಮಿನೇಜಸ್, ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕ್ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ದೀಪಕ್ ಕೋಟ್ಯಾನ್ ಇನ್ನ, ಮೋಹನ್ ದಾಸ್ ಅಡ್ಯಂತಾಯ, ಸಂತೋಷ ಆಚಾರ್ ಪಕಲ, ಅಧ್ಯಕ್ಷ ಕೇಶವಾಚಾರ್ಯ, ಗೌರವಾಧ್ಯಕ್ಷ ದಿನೇಶ್ ಆಚಾರ್, ಉದಯ ಶೆಟ್ಟಿ ಮೂಡುಮನೆ, ಸತೀಶ್ ಪೂಜಾರಿ, ಪ್ರಕಾಶ್ ಆಚಾರ್ಯ, ರೊನಾಲ್ಡ್ ಅಲ್ಲೋನ್ಸ್ ಉಪಸ್ಥಿತರಿದ್ದರು.


ಯಕ್ಷಾಕ್ಷರ ರಜತ ಪ್ರಶಸ್ತಿ-2025ನ್ನು ಯಕ್ಷಗಾನ ಕಲಾವಿದ ಯೋಗೀಶ್ ಆಚಾರ್ ಉಳೆಪಾಡಿ ಮತ್ತು ದೈವಾರಾಧನೆಯಲ್ಲಿ ದಯಾನಂದ ಕಲ್ಯ ಸ್ವೀಕರಿಸಿದರು. ಪ್ರದೀಪ್ ಬೇಲಾಡಿ ಪ್ರಶಸ್ತಿ ಪತ್ರ ವಾಚಿಸಿದರು. ರಾಘವೇಂದ್ರ ನಾಯಕ್ ಅವರಿಗೆ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಕೆ. ದಿನೇಶ್ ಆಚಾರ್ ಸನ್ಮಾನ ಪತ್ರ ವಾಚಿಸಿ ದರು. ಬೋಳ ಸುಧಾಕರ ಆಚಾರ್ ಸ್ವಾಗತಿಸಿ ದರು. ವೀಣೇಶ್ ಅಮೀನ್ ನಿರೂಪಿಸಿದರು. ಸುದರ್ಶನ್ ಬಂಗೇರ ವಂದಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top