ವೈಭವದ ‘ಕರಾಡವಾಣಿ’ ರಜತ ಮಹೋತ್ಸವ- ಸದಸ್ಯರ ಸಮಾವೇಶ

Upayuktha
0



ಪೆರ್ಲ: ಕರಾಡ ಕಲಾ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಪೆರ್ಲ ಇದರ ಆಶ್ರಯದಲ್ಲಿ ‘ಕರಾಡವಾಣಿ’ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸದಸ್ಯರ ಸಮಾವೇಶವು ದಿನಾಂಕ 06 ಸೆಪ್ಟೆಂಬರ್ 2026ರಂದು ಇಲ್ಲಿನ ಭಾರತಿ ಸದನದಲ್ಲಿ ಯಶಸ್ವಿಯಾಗಿ ನೆರವೇರಿತು. 


ಬೆಳಿಗ್ಗೆ ಸದಸ್ಯರ ನೋಂದಾವಣೆ ಹಾಗೂ ಉಪಾಹಾರದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಾರ್ಥನೆ ಮತ್ತು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಲಾಯಿತು. ವಿದ್ಯಾ ಸಾಗರ್ ಶಿರಂತಡ್ಕ ಸ್ವಾಗತ ಕೋರಿದರೆ, ಶ್ರೀ ರಾಜಾರಾಮ ಗುರುಕುಲ ಸಮಾವೇಶದ ಉದ್ದೇಶಗಳನ್ನು ವಿವರಿಸಿದರು. ಉದಯವಾಣಿಯ ನಿವೃತ್ತ ಉಪಸಂಪಾದಕರಾದ ನಿತ್ಯಾನಂದ ಸಜಂಗದ್ದೆ ಪಡ್ರೆ ಕಾರ್ಯಕ್ರಮ ಉದ್ಘಾಟಿಸಿ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಭಟ್ ಪಿಲಿಂಗಲ್ಲು ಅವರು ತಮ್ಮ ಆಶಯ ನುಡಿಗಳನ್ನು ಹಂಚಿಕೊಂಡರು. ಗಣಪತಿ ಭಟ್ ಶೆಟ್ಟಿಬೈಲು ಧನ್ಯವಾದ ಸಮರ್ಪಿಸಿದರು. 


ನಂತರ ಡಾ. ದುರ್ಗಾ ಪ್ರಸಾದ್ ಆನೆಮಜಲು ಅವರ ಸಂಯೋಜನೆಯಲ್ಲಿ ‘ಕರಾಡವಾಣಿ ಕಥಾ-ಕಥನ’ ಜರುಗಿತು. ಇದರಲ್ಲಿ ಕೃಷ್ಣ ಭಟ್ ಪಿಲಿಂಗಲ್ಲು, ಶ್ರೀಮತಿ ಅರುಣಾ ಶಿವರಾಂ ಪಡುಪ್ಪು, ಶ್ರೀಮತಿ ದಿವ್ಯಾ ಶಿರಂತಡ್ಕ, ಎಸ್. ಎನ್. ಭಟ್ ಸೈಪಂಗಲ್ಲು ಹಾಗೂ ಶ್ರೀಮತಿ ನಳಿನಿ ಸೈಪಂಗಲ್ಲು ಅವರು ಪತ್ರಿಕೆಯ ಹಾದಿ ಮತ್ತು ನೆನಪುಗಳನ್ನು ಮೆಲಕು ಹಾಕಿದರು. 


ಚಹಾ ವಿರಾಮದ ನಂತರ ಹಿರಿಯ ಪತ್ರಕರ್ತ ನಿತ್ಯಾನಂದ ಸಜಂಗದ್ದೆ ಅವರೊಂದಿಗೆ ರಮೇಶ್ ಮಾಣಿಮೂಲೆ ಅವರ ಸಂಯೋಜನೆಯಲ್ಲಿ ಉಪಯುಕ್ತ ಸಂವಾದ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದ ಭೋಜನದ ನಂತರ, ಅಪರಾಹ್ನ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ರಾಜ್ಯ ಮಟ್ಟದ ತರಬೇತುದಾರರಾದ ಎಸ್. ಎನ್. ಭಟ್ ಸೈಪಂಗಲ್ಲು ಅವರ ನೇತೃತ್ವದಲ್ಲಿ ಸಂಪಾದಕ ಮಂಡಳಿಯೊಂದಿಗೆ ಮುಖಾಮುಖಿ ಹಾಗೂ ಮಾತುಕತೆ ಗೋಷ್ಠಿ ನಡೆಯಿತು.


ಇಪ್ಪತ್ತಯ್ದರ ಹರೆಯದ ಸಂಭ್ರಮ ದಲ್ಲಿರುವ ಕರಾಡ ವಾಣಿಗೆ ಸಮಸ್ತ ಓದುಗರು ಭಾವನಾತ್ಮಕ ಪದಪುಂಜ ಗಳ ಮೂಲಕ ಅಭಿನಂದಿಸುವ ಕರಾಡ ವಾಣಿ ಕೃತಜ್ಞತಾ ಕಲಶವನ್ನು ಗೌರವಯುತವಾಗಿ ಪೂರಣ ಗೊಳಿಸಲಾಯಿತು “ಹಳೆಯ ಸಂಚಿಕೆ, ಹೊಸ ಸಂಭ್ರಮ" ದ ಅಂಗವಾಗಿ ಸದಸ್ಯರು ಸಂಗ್ರಹಿಸಿದ ಸಂಚಿಕೆಗಳನ್ನು ಆಧರಸಿ ಹಳೆಯ ಕಾಲದ ಸಂಚಿಕೆ ಸಂಗ್ರಹಿಸಿದವರನ್ನು ನೆನಪಿನ ಕಾಣಿಕೊಟ್ಟು ಬಹುಮಾನಿಸಲಾಯಿತು. ಬಳಿಕ ನಡೆದ ಚಿಂತನ-ಮಂಥನ ಹಾಗೂ ಪತ್ರಿಕೆಯ ಬೆಳವಣಿಗೆಗೆ ಪೂರಕವಾದ ಅಂಶಗಳ ಕುರಿತು ಸದಸ್ಯರು ಮುಕ್ತವಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡರು. 


ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಜಯಶ್ರೀ ಮೈಕಾನರವರು ಸ್ವಾಗತಿಸಿದರು. ಬಳಿಕ ಸದಸ್ಯರಿಂದ ಸಮಾವೇಶದ ಕುರಿತು ಅನಿಸಿಕೆ ಮತ್ತು ಪ್ರತಿಕ್ರಿಯೆಗಳು ವ್ಯಕ್ತವಾದವು. ಪೋಷಕರಾದ ಬಾಲ ಮುರಳಿ ಕೊಮ್ಮುಂಜೆ ಹಿತನುಡಿಗಳನ್ನಾಡಿದರೆ, ಕೋಟೆ ರಾಮ ಭಟ್ ಅಧ್ಯಕ್ಷೀಯ ಭಾಷಣ ಮಾಡಿದರು. ಶ್ರೀಮತಿ ಅರುಣಾ ಶಿವರಾಂ ಪಡುಪ್ಪು ವಂದನಾರ್ಪಣೆ ನೆರವೇರಿಸಿದರು. ಸಂಜೆಯ ಉಪಾಹಾರದೊಂದಿಗೆ ಈ ಅರ್ಥಪೂರ್ಣ ಸಮಾವೇಶವು ಸಂಪನ್ನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top