ಕಂದಗಲ್ಲ: ಶ್ರೀ ವೀರಭದ್ರೇಶ್ವರ ಗಜಾನನ ಮಂಡಳಿಯಿಂದ ವಿಜೃಂಭಣೆಯ ಗಣೇಶ ಮೂರ್ತಿ ಮೆರವಣಿಗೆ

Upayuktha
0


ಕಂದಗಲ್ಲ: ಕಂದಗಲ್ಲ ಗ್ರಾಮದ ಶ್ರೀ ವೀರಭದ್ರೇಶ್ವರ ಗಜಾನನ ಮಂಡಳಿಯ ವತಿಯಿಂದ ಶ್ರೀ ಗಣೇಶ ಮೂರ್ತಿಯ ಭವ್ಯ ಮೆರವಣಿಗೆಯು ಅತ್ಯಂತ ವೈಭವ ಹಾಗೂ ವಿಜೃಂಭಣೆಯಿಂದ ಜರುಗಿತು.


ಶ್ರೀ ವೀರಭದ್ರೇಶ್ವರ ದೇವಸ್ಥಾನದ ದ್ವಾರಬಾಗಿಲ ಪಕ್ಕದಲ್ಲಿ ಭಕ್ತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿಯ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಾದ ಬಸ್ ನಿಲ್ದಾಣ, ತೇರಿನ ಮನೆ, ವಾಲ್ಮೀಕಿ ಸರ್ಕಲ್ ಹಾಗೂ ಜ್ಞಾನಮೂರ್ತಿ ದೇವಸ್ಥಾನದ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಮೆರವಣಿಗೆ ಸಾಗಿತು.


ಈ ವೈಭವದ ಮೆರವಣಿಗೆಯಲ್ಲಿ ಗುಡಿ ಓಣಿಯ ಯುವಕರು, ಹಿರಿಯರು, ಕಂದಗಲ್ಲ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ನೂರಾರು ಭಕ್ತಾದಿಗಳು ಭಕ್ತಿಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮೆರವಣಿಗೆಯುದ್ದಕ್ಕೂ ಯುವಕರ ಉತ್ಸಾಹ ಹಾಗೂ ಭಕ್ತಿಭಾವ ಮುಗಿಲು ಮುಟ್ಟಿತ್ತು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top