ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಅಂಚೆ ವಲಯ ಸ್ಥಾಪನೆಗೆ ಡಾ. ಉಮೇಶ್ ಜಾಧವ್ ಕೇಂದ್ರಕ್ಕೆ ಮನವಿ

Shreya Hegde
0

 ‌


ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಅಂಚೆ ವಲಯ ಸ್ಥಾಪಿಸಿ ಕಲಬುರಗಿಯಲ್ಲಿ ಮುಖ್ಯ ಕೇಂದ್ರ ಕಚೇರಿಯನ್ನು ತೆರೆಯುವಂತೆ ಕೇಂದ್ರ ಸರ್ಕಾರದ ಸಂಪರ್ಕ ಖಾತೆಯ ಸಚಿವರಿಗೆ ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.


ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ಕಾರ್ಯದರ್ಶಿಗಳಾದ ಸುಬ್ರತ್ ದಾಸ್ ಬ್ಯಾನರ್ಜಿ ಅವರ ಮೂಲಕ ಕೇಂದ್ರ ಸಂಪರ್ಕ ಖಾತೆಯ ಸಚಿವರಿಗೆ ಸೆಪ್ಟೆಂಬರ್ 14ರಂದು ಮನವಿ ಸಲ್ಲಿಸಿ ಈ ಬೇಡಿಕೆ ಮಂಡಿಸಿದ್ದಾರೆ.


ಪ್ರಸ್ತುತ ಉತ್ತರ ಕರ್ನಾಟಕ ದ ಅಂಚೆ ವಲಯದ ಕೇಂದ್ರ ಕಚೇರಿಯ ಧಾರವಾಡದಲ್ಲಿದ್ದು ಕಿತ್ತೂರು ಕರ್ನಾಟಕ ಹಾಗು ಕಲ್ಯಾಣ ಕರ್ನಾಟಕ ಕಂದಾಯ ಜಿಲ್ಲೆಗಳನ್ನು ಒಳಗೊಂಡಿವೆ. ಒಟ್ಟು 14 ಜಿಲ್ಲೆಗಳು ಹಾಗೂ  16 ಅಂಚೆ ವಲಯಗಳನ್ನು ಹೊಂದಿವೆ. ದಕ್ಷಿಣ ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಮತ್ತು ಮಂಗಳೂರು ಕೇಂದ್ರಗಳಿದ್ದು ಧಾರವಾಡ ಮುಖ್ಯ ಕೇಂದ್ರ ಕಚೇರಿ ವ್ಯಾಪ್ತಿಯಲ್ಲಿ ಇಡೀ ಉತ್ತರ ಕರ್ನಾಟಕ ಪ್ರದೇಶ ಒಳಗೊಂಡಿದೆ. ಧಾರವಾಡ ಮುಖ್ಯ ಕೇಂದ್ರಕ್ಕೆ ಬೀದರ್ ನಿಂದ 470 ಕೀ. ಮೀ., ಕಲಬುರಗಿ ಯಾದಗಿರಿ ರಾಯಚೂರು, ಬಳ್ಳಾರಿ, ಕೊಪ್ಪಳ ವಿಜಯನಗರ ಜಿಲ್ಲೆಗಳಿಂದ 300 ಹಾಗೂ 470 ಕೀ. ಮೀ. ಅಂತರವಿದೆ.


ಈ ಸಮಸ್ಯೆ ನಿವಾರಣೆಗೆ ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಕಲಬುರಗಿಯಲ್ಲಿ ಪ್ರತ್ಯೇಕ ಅಂಚೆ ವಲಯ ಮುಖ್ಯ ಕೇಂದ್ರ ಕಚೇರಿ ತೆರೆದು ಸೇವೆ ನೀಡಬೇಕು. ಇದರಿಂದ ಈ ವಿಭಾಗದಲ್ಲಿ ಅಂಚೆ ಇಲಾಖೆಯ ಸೇವಾ ಯೋಜನೆ ಸ್ಪೀಡ್ ಪೋಸ್ಟ್, ಪಾರ್ಸೆಲ್, ರಿಜಿಸ್ಟರ್ಡ್, ವಿಮಾ ಅಂಚೆ ಸೇವೆ, ಹಾಗೂ ಹಣಕಾಸು ಸೇವೆ ನಿರ್ವಹಣೆಗೆ ನೆರವಾಗಲಿದೆ ಮತ್ತು ಆದಾಯ ಗಳಿಕೆ ಕೂಡ ಹೆಚ್ಳವಾಗಲಿದೆ. ಇದರ ಜೊತೆಗೆ ಶೀಘ್ರದಲ್ಲೇ ಕಲಬುರಗಿಯ ಹೊನ್ನಕಿರಣಗಿಯಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಪಿ ಎಂ- ಮಿತ್ರ ಯೋಜನೆಯಡಿ ಜವಳಿ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು ಇದರಿಂದ ಅಂಚೆ ಇಲಾಖೆಯ ವಿವಿಧ ಸೇವಾ ವಿಸ್ತರಣೆಯೊಂದಿಗೆ ಆದಾಯ ಮೂಲ ಹೆಚ್ಚಾಗಲಿದೆ. ಆದುದರಿಂದ ಶೀಘ್ರದಲ್ಲೇ ಕಲಬುರಗಿ ಕೇಂದ್ರೀಕರಿಸು ಅಂಚೆ ಇಲಾಖೆಯ ನೂತನವಾಗಿ ಕಲ್ಯಾಣ ಕರ್ನಾಟಕ ವಲಯ ಸ್ಥಾಪನೆ ಅತ್ಯಂತ ಅಗತ್ಯ ಎಂದು ಮನವಿ ಪಾತ್ರದಲ್ಲಿ ಕೇಂದ್ರ ಸಚಿವರಿಗೆ ಒತ್ತಡ ಹೇರಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top