ಸುರತ್ಕಲ್/ಕುಳಾಯಿ: ಶ್ರೀ ಪುತ್ತಿಗೆ ಮಠದ ಶಾಖೆಯಾಗಿರುವ ಹೊಸಬೆಟ್ಟು ಕುಳಾಯಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀ ಕೇಶವ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ.
ಮುಂಬರುವ 2026ರ ಸೆಪ್ಟೆಂಬರ್ 14, ಸೋಮವಾರದಂದು ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠಾಪನೆ, ಗಣಹೋಮ, ಮಹಾಪೂಜೆ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಪೂಜಿತ ಶ್ರೀ ಗಣಪತಿ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆದು, ರಾತ್ರಿ ಅರಬ್ಬೀ ಸಮುದ್ರದ ಕಿನಾರೆಯಲ್ಲಿ ವಿಗ್ರಹ ವಿಸರ್ಜನೆ ನೆರವೇರಲಿದೆ.
ಹದಿನಾಲ್ಕನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಕೇಶವ ದೇವಾಡಿಗ, ಕಾರ್ಯಾಧ್ಯಕ್ಷರಾಗಿ ಹರಿಕೃಷ್ಣ ಎಮ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಎಚ್, ಉಪ ಕಾರ್ಯದರ್ಶಿಯಾಗಿ ಸುಧೀಂದ್ರ ಹತ್ವಾರ್, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಶೆಟ್ಟಿ ಅಗರಮೇಲು, ಕೋಶಾಧಿಕಾರಿಯಾಗಿ ವಸಂತರಾಜ್ ಎಚ್ ಹಾಗೂ ಮಹಿಳಾ ಘಟಕದ ಸಂಚಾಲಕರಾಗಿ ಕೆ. ಕಲಾವತಿ ಅವರು ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರುಗಳಾಗಿ ರಾಘವೇಂದ್ರ ಎಚ್ ವಿ, ಶ್ರೀನಿಧಿ ಎ ಭಟ್, ರಮೇಶ ಗುರಿಕಾರ, ಜಯಶಂಕರ್ ಕೆ, ಶಶಿಧರ ಗುರಿಕಾರ, ಅಗರಿ ರಾಘವೇಂದ್ರ ರಾವ್, ಗಣೇಶ್ ಹೊಸಬೆಟ್ಟು, ಶಿವಪ್ರಸಾದ್ ಶೆಟ್ಟಿ, ಧನುರಾಜ್ ಅತ್ತಾವರ, ವಿಶ್ವೇಶ್ವರ ಬದವಿದೆ, ಪಿ ಎಚ್ ಆನಂದ, ಸುಖಪಾಲ ಸಾಲ್ಯಾನ್, ಶ್ರೀನಿವಾಸ ನಾಯಕ್, ಪುರುಷೋತ್ತಮ ಬಂಗೇರ, ಯೋಗೇಶ್ ಕರ್ಕೇರ, ಆನಂದ ಭಂಡಾರಿ, ದೇವರಾಜ್ ಪುತ್ರನ್, ಸುಕುಮಾರ್ ಸುರತ್ಕಲ್, ಕೈಲಾಶ್ ತಡಂಬೈಲ್, ಅನಂತ ಭಟ್ ಮತ್ತು ದಯಾಕರ್ ಕಾಂಚನ್ ಅವರುಗಳು ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಉಪಾಧ್ಯಕ್ಷರುಗಳು, ಜೊತೆ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ವಿವಿಧ ಸಮಿತಿಗಳ ಸಂಚಾಲಕರುಗಳು, ಮಹಿಳಾ ಘಟಕ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಆಯ್ಕೆಯಾಗಿದ್ದು, ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ವಿನಂತಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


