ಸುರತ್ಕಲ್‌: ಗುರು ನಮನ ಕಾರ್ಯಕ್ರಮ

Upayuktha
0

ಸುರತ್ಕಲ್‌: ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿರ್ಮಾತೃಗಳು. ಶಿಕ್ಷಕರನ್ನು ಗೌರವಿಸುವ ಮೂಲಕ ಗುರು ಪರಂಪರೆಯ ಶ್ರೇಷ್ಠತೆಗೆ ನಮನ ಸಲ್ಲಿಸಿದಂತಾಗುತ್ತದೆ ಎಂದು ರೋಟರಿ ಜಿಲ್ಲೆ 3181ರ ಯುವ ರಕ್ಷಣೆ ವಿಭಾಗದ ಜಿಲ್ಲಾಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್ ನುಡಿದರು.


ಅವರು ಸುರತ್ಕಲ್ ರೋಟರಿ ಕ್ಲಬ್‌ನ ವತಿಯಿಂದ ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲೆ ಶ್ರೀನಿವಾಸ ನಗರ, ಸುರತ್ಕಲ್ ನ ಶಿಕ್ಷಕರನ್ನು ಶಾಲಾ ಇಂಟರಾಕ್ಟ್ ಸಹಯೋಗದಲ್ಲಿ ಗುರು ನಮನ ಕಾರ್ಯಕ್ರಮದಲ್ಲಿ ಗೌರವಿಸಿ ಮಾತನಾಡಿದರು.


ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಟಿ. ಎನ್. ಶಾಲೆಗೆ ಗೌರವ ಪ್ರಶಸ್ತಿ ಫಲಕವನ್ನು ನೀಡಿ ಶಿಕ್ಷಕರ ಸೇವಾ ನಿಷ್ಠೆಯನ್ನು ಪ್ರಶಂಸಿದರು. ಪ್ರಾಂಶುಪಾಲೆ ಪ್ರಮೀಳಾ ಕೊಂಡಾಣ ಕೃತಜ್ಞತೆ ತಿಳಿಸಿದರು.


ಇಂಟರ್ಯಾಕ್ಟ್ ಸಂಯೋಜಕ ರಾಮ್ ಮೋಹನ್ ವೈ, ಸೇವಾ ನಿರ್ದೇಶಕ ಡಾ. ಬಸವರಾಜ್ ಮನು, ಮಲ್ಲಿಕಾರ್ಜುನ ಅಂಗಡಿ, ಪ್ರೊ. ಕೃಷ್ಣ ಮೂರ್ತಿಮತ್ತು ಶಿಕ್ಷಕರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top