ಶಕ್ತಿನಗರದಲ್ಲಿ ವೈಭವದ ಜನ್ಮಾಷ್ಟಮಿ: ಭಕ್ತರ ಸಮ್ಮುಖದಲ್ಲಿ ಕಂಗೊಳಿಸಿದ ಗೋಪಾಲಕೃಷ್ಣ ದೇವಸ್ಥಾನ!

Upayuktha
0

ಮಂಗಳೂರು: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೆಪ್ಟೆಂಬರ್ 4-5ರಂದು ಸಂಭ್ರಮದ ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಸಂಪನ್ನಗೊಂಡಿತು. ಸೆಪ್ಟೆಂಬರ್ 04ರಂದು ಪ್ರಾತಃಕಾಲ 6:00ರಿಂದ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಬೆಳಿಗ್ಗೆ 7:30ಕ್ಕೆ ಶ್ರೀಗಣಪತಿ ಹವನ ನಂತರ ಮಹಾಪೂಜೆ ಜರುಗಿತು. ನಂತರ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ಹಾಗೂ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮಹಾಪೂಜೆ ನಡೆಯಿತು. ಅಂದು ಸಂಜೆ5 ಗಂಟೆಯಿಂದ 8ರವರೆಗೆ ಸುಧಾಕರ್‍ಕೋಟೆ ಕುಂಜತ್ತಾಯ ಕಾಸರಗೋಡು ಇವರ ತಂಡದಿಂದ ಭಕ್ತ ಸುಧಾಮ ಎಂಬ ಹರಿಕಥಾ ಸತ್ಸಂಗ ನಡೆಯಿತು. ರಾತ್ರಿ 8 ಗಂಟೆಯಿಂದ 11-30ರತನಕ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ರಾತ್ರಿ 11:30ಕ್ಕೆ ವಿಶೇಷ ಆಲಂಕಾರಪೂಜೆ ನೆರವೇರಿತು. ಶ್ರೀಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ಅಘ್ರ್ಯ ಪ್ರಧಾನ ನೆರವೇರಿತು. ಈ ಸಂದರ್ಭದಲ್ಲಿ ನಗರದ ಅನೇಕ ಭಕ್ತಾದಿಗಳು ಈ ಅಘ್ರ್ಯಪ್ರಧಾನ ಸೇವೆಯಲ್ಲಿ ಬಾಗವಹಿಸಿದರು.


ಸೆಪ್ಟೆಂಬರ್ 05ರಂದು ಪ್ರಾತಃಕಾಲ 6ಗಂಟೆಗೆ ಶ್ರೀದೇವರಿಗೆ ಪಂಚಾಮೃತಾಭಿಷೇಕ , ಬೆಳಿಗ್ಗೆ 7:30ಕ್ಕೆಗಣಪತಿ ಹವನ ನಡೆದು ಬೆಳಗ್ಗೆ 8.30ರಿಂದ ನಿರಂತರ ಲಕ್ಷ ತುಳಸಿ ಅರ್ಚನೆಯು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಅಸ್ರ ಅವರ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು. ಮಧ್ಯಾಹ್ನ12:30 ಕ್ಕೆ ಶ್ರೀ ದೇವರ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಿತು.  ಊರ ಪರವೂರ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು. ದೇವಾಲಯದ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ ನಾೈಕ್, ಮೊಕ್ತೇಸರರಾದ ಸಗುಣಾ .ಸಿ. ನಾೈಕ್,ಸಂಜೀತ್ ನಾೈಕ್,ಅಂಜುಆಳ್ವ ನಾೈಕ್, ಗೌರವ ಸಲಹೆಗಾರರಾದ ಅನಂತಕೃಷ್ಣ ಭಟ್‍ರವರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top