ಗಣೇಶನ ಪೌರಾಣಿಕ ಕಥೆ

Shreya Hegde
0


ನಲ್ಮೆಯ ಗಣೇಶನನ್ನು ಯಾವ ರೀತಿ ಸ್ವಾಗತಿಸುತ್ತೇವೆ ಎಂದರೆ ಅದು ಊರಲ್ಲಿ ಆಗಲಿ ಮನೆಯಲ್ಲೇ ಆಗಲಿ, ಬಹಳ ವಿಜೃಂಭಣೆಯಿಂದ ವಿನಾಯಕನನ್ನು ಭಾದ್ರುಪದ  ಮಾಸದಲ್ಲಿ ಬರ ಮಾಡಿಕೊಳ್ಳುತ್ತೇವೆ. ಇದು ನಮ್ಮ ಸನಾತನ ಧರ್ಮದ ಸೌಂದರ್ಯವನ್ನು ತೋರ್ಪಡಿಸುವುದು.


ಇನ್ನೂ ಚಿಕ್ಕ ಮಕ್ಕಳ ವಿಷಯದಲ್ಲಿ ಗಣೇಶನ ಹಬ್ಬ ಎಂದರೆ, ಬಲು ಜೋರು ಪಟಾಕಿ ಸಿಡಿಸಿ ಸಂಭ್ರಮಿಸುವುದು ಇದು ಒಂದು ಸಾರ್ವತ್ರಿಕ ಹಬ್ಬವಾಗಿದ್ದು ಪ್ರತಿಯೊಬ್ಬರು ಈ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುವರು. ಮೊದಲು ಅಂದರೆ ಸ್ವತಂತ್ರ ಹೋರಾಟದ ಕಾಲದಲ್ಲಿ ಬಾಲ ಗಂಗಾಧರ್ ತಿಲಕ ಅವರು ಭಾರತೀಯ ಎಲ್ಲಾ ಪ್ರಜೆಗಳನ್ನು ಒಗ್ಗೂಡಿಸಿ ಚರ್ಚಿಸಲು ಈ ಗಣೇಶನ ಹಬ್ಬ ಒಂದು ಮೈಲುಗಲ್ಲು.


ಕೆಲವು ಕಡೆ ರೈತರು ಆನೆಗಳನ್ನು ಬೆಳೆ ಹಾನಿ ಮಾಡದಿರಲಿ ಎಂದು ದೇವರ ಸ್ವರೂಪದಲ್ಲಿ ಪೂಜಿಸಿದರೆ ಮೂಷಿಕ ಅಂದರೆ ಇಲಿಯನ್ನು ಗೋಧಾಮಗಳಲ್ಲಿ ಧಾನ್ಯವನ್ನು ಹಾಳು ಮಾಡದಿರಲಿ ಎಂದು ಗಣಪತಿಯೊಂದಿಗೆ ಮೋಶಕನನ್ನು ಪೂಜಿಸುವರು. ನಂತರ ಗಣೇಶನ ಚತುರ್ಥಿಯ ಪೌರಾಣಿಕ ಹಿನ್ನೆಲೆಯನ್ನು ನೋಡುವುದಾದರೆ ಸಂಸ್ಕೃತಿಯ ಪ್ರಕಾರ ಗಣೇಶನ ಅಂಬಿಕೆ ಪುತ್ರ ಆದರೆ ಹಿಂದೂ ಪುರಾತನ ಪ್ರಕಾರ ವಿನಾಯಕನು ಪಾರ್ವತಿಯ ಪುತ್ರ ಸಾಮಾನ್ಯವಾಗಿ ಎಲ್ಲರೂ ತಿಳಿದಂತೆ ಏಕದಂತ ಗೌರಿಯ ಶರೀರದ ಕೊಳೆ ಅಥವಾ ಅರಶಿನದಿಂದ ಉದ್ಭವಿಸಿದ ಶುಶವಾಗಿದ್ದನು.


ಗೌರಿವು ಸ್ನಾನಕ್ಕೆ ಹೊರಡಬೇಕಾದರೆ ಈ ಶ ಪುತ್ರನಿಗೆ ಜೀವ ತುಂಬಿ ಕಾವಲಿಗೆ ಇಟ್ಟು ಯಾರು ಆಗಮಿಸಿದರು ಒಳಗೆ ಬರಲು ಅನುಮತಿ ನೀಡಬೇಡ ಎಂದು ಗಣೇಶನಿಗೆ ಹೇಳಿ ಸ್ನಾನಕ್ಕೆಂದು ಹೊರಡುವಳು. ನಂತರ ಈಶ್ವರ ಆಗಮಿಸುವನು. ಪ್ರವೇಶಕ್ಕೆ ದಾರಿ ಬಿಡದೆ ಗಣೇಶನಿಗೆ ತನ್ನ ಶಸ್ತ್ರದಿಂದ ಶಿರಶ್ಚೇಧ ಮಾಡಿದನು ಆಗ ಗಣೇಶ ಅಮ್ಮ ಎಂದು ಕೂಗಿದ ಗಣೇಶನ ಕೂಗನ್ನು ಕೇಳಿ ಅತಿ ಅವಸರದಿಂದ ದಾವಸಿದ  ಗೌರಿಗೆ ಕಾದಿತ್ತು ಮಗನ ಸಾವಿನ ಆಘಾತ. ಈಶ್ವರನಿಗೆ ತನ್ನ ಪುತ್ರನನ್ನು ಮರುಜನ್ಮ ನೀಡುವ ಮೂರೆಯನ್ನು ಪ್ರಸ್ತಾಪಿಸಿದರು ಆಗಮಿಸಿದ ಬ್ರಹ್ಮದೇವನ ಬಳಿಯು ತನ್ನ ಕೋರಿಕೆಯನ್ನು ನೀಡುವವರು ಆಗ ಬ್ರಹ್ಮದೇವ ಉತ್ತರ ದಿಕ್ಕಿನಲ್ಲಿ ಯಾರು ಯಾರು ತಲೆ ಹಾಕಿ ಮಲಗಿರೋರು ಅವರ ಶಿರವನ್ನು ತಂದರೆ ಗಣೇಶನಿಗೆ ಜೋಡಿಸಬಹುದೆಂದು ತಿಳಿಸಿದನು.


ಆಗ ನಂದಿ ಮತ್ತು ಇತರರು ಸೇರಿ ಉತ್ತರ ದಿಕ್ಕಿನಲ್ಲಿ ಮಲಗಿರುವರು ಶಿರವನ್ನು ಹುಡುಕಿ ಹೊರಡುವರು. ಯಾರು ಸಿಗದ ಕಾರಣ ಆನೆಯ ಶಿರವನ್ನು ತಂದು ಜೋಡಿಸಿದರು. ಇದು ಗಜಾನನ ಕಥೆ ಆಗಿದೆ ನಂತರ ಪ್ರತಿ ವರ್ಷ ಭೂಲೋಕಕ್ಕೆ ವಿಘ್ನೇಶ್ವರನ ಯಾವ ಕಾರಣಕ್ಕೆ ಆಗಮಿಸುವೆನೆಂದರೆ  ‌ ತವರಿಗೆ ಬಂದ ತಾಯಿ ಗೌರಿಯನ್ನು ಕರೆದುಕೊಂಡು ಹೋಗಲು ಬರುವವನು. ಬಂದ ನಂತರ ಎರಡು ದಿನವಾದ ದಿನ ಒಂಬತ್ತು ದಿನ ಅಥವಾ ಹನ್ನೊಂದು ದಿನ ಸಂಭ್ರಮದಿಂದ ಇದ್ದು ಕಡಬು ಮೋದಕ ಲಡ್ಡುಗಳನ್ನು ತಿಂದು ಹೊರಡುವನು.


ಗಣೇಶನಿಗೆ ಒದಗಿಸಿದ ಇನ್ನೊಂದು ಸಮಸ್ಯೆ ಎಂದರೆ ವಾಹನವಾದ ಮೋಶಿಕನ ಮೇಲೆ ಕೈಲಾಸಕ್ಕೆ ತೆರಳುವಾಗ ಬಗೆ ಬಗೆಯ ಭಕ್ಷಗಳನ್ನು ಸೇವಿಸಿದ ಕಾರಣ ಗಣೇಶನ ಹೊಟ್ಟೆ ಬಹಳ ದೊಡ್ಡ ಗಾತ್ರದಲ್ಲಿ ಉಬ್ಬಿತ್ತು ಆದ ಕಾರಣ ಮೋಸಕನಿಗೆ ಮೇಲಿಂದ ಗಣೇಶ ಉರುಳಿ ಕೆಳಗೆ ಬಿದ್ದಾಗ ಚಂದ್ರ ನೋಡಿ ನಸು ನಕ್ಕು ಚಂದ್ರನಿಗೆ ಚೌತಿಯ ದಿನ ನಿನ್ನ ನೋಡಿದ ನೋಡಿದವರಿಗೆ ಗೌರ ಅಪವಾದ ದೊರಕಲೆಂದು ಶಾಪ ನೀಡುವವನು ನಂತರ ಹೊಡೆದ ಹೊಟ್ಟೆಗೆ ಈಶನ ಕೊರಳಿನಲ್ಲಿ ಹಾವನ್ನು ಕಟ್ಟಿಕೊಳ್ಳುವನು ಇದು ಈಶ ಪುತ್ರನ ಪೌರಾಣಿಕ ಹಿನ್ನೆಲೆಯಾಗಿದೆ ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.


- ನೀಲಮ್ಮ  ಬಾಣಕಾರ

ಪತ್ರಿಕೋದ್ಯಮ ವಿಭಾಗ, ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆ




إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top