ಅಕ್ಷಯ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಸಂಭ್ರಮ

Upayuktha
0

 


ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆಹ್ವಾನಂ 2026 ಫ್ರೆಶರ್ಸ್ ಡೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಂತ್ ನಡುಬೈಲು ರವರು, ವಿದ್ಯಾಭ್ಯಾಸದೊಂದಿಗೆ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದಲ್ಲದೇ, ಸಮಯ ಪಾಲನೆ, ಶಿಸ್ತು ಹಾಗೂ ನಿರಂತರ ಪ್ರಯತ್ನಗಳೇ ಯಶಸ್ಸಿನ ಮೆಟ್ಟಿಲುಗಳು ಮತ್ತು ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸುವ ಉತ್ತಮ ಹಂತವಾಗಿದ್ದು, ಈ ಅವಧಿಯನ್ನು ಕೌಶಲ್ಯಾಧರಿತ ಶಿಕ್ಷಣದೊಂದಿಗೆ, ಸ್ಪಷ್ಟ ಗುರಿಯನ್ನು ನಮ್ಮದಾಗಿಸಿದರೆ ಉಜ್ವಲ ಭವಿಷ್ಯ ಖಚಿತ ಎಂದು ತಿಳಿಸಿದರು. ಪ್ರಯತ್ನಗಳು ನಿಮ್ಮದಾಗಲಿ ಎಂದು ಶುಭಹಾರೈಸಿದರು.


ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, 6 ವಿಭಾಗದ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಲ್ಲದೇ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.


ನಂತರ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.


ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಕ್ಷಯ್, ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ. ಪಕ್ಕಳ, ಆಡಳಿತ ಅಧಿಕಾರಿಯಾದ ಅರ್ಪಿತ್ ಟಿ. ಎ., ಶೈಕ್ಷಣಿಕ ಸಲಹೆಗಾರರಾದ ಅಭಿಲಾಷ್ ಕ್ಷತ್ರೀಯ, ವಿದ್ಯಾರ್ಥಿ ಕ್ಷೇಮಪರಿಪಾಲನಾಧಿಕಾರಿ ಅಶೋಕ್ ರೈ, ಉಪ ಪ್ರಾಂಶುಪಾಲರಾದ ರಕ್ಷಣ ಟಿ.ಆರ್., IQAC ನಿರ್ದೇಶಕರಾದ  ರಶ್ಮಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೂರ್ಯ, ತೃತೀಯ ಬಿ.ಕಾಂ, ಕಾರ್ಯದರ್ಶಿ ದೇವಿಕಾ, ತೃತೀಯ ಎಫ್.ಡಿ. ಉಪಸ್ಥಿತರಿದ್ದರು.


ವಿದ್ಯಾರ್ಥಿನಿಯರಾದ ಕು. ಮೋಕ್ಷಾ, ಸ್ವರ್ಣಶ್ರೀ, ದೀಪಾ ಪ್ರಾರ್ಥಿಸಿ, ಪ್ರತೀಕ್ಷಾ, ದ್ವಿತೀಯ ಬಿ.ಎ., ಸ್ವಾಗತಿಸಿ, ದೀಕ್ಷಾ, ತೃತೀಯ ಬಿ.ಸಿ.ಎ., ವಂದಿಸಿ, ಕು. ರಜೀನಾ ಭಾನು, ತೃತೀಯ ಎಫ್.ಡಿ., ಗ್ರೀಷ್ಮ, ದ್ವಿತೀಯ ಬಿ.ಕಾಂ., ಸೂರ್ಯಪ್ರಕಾಶ್, ತೃತೀಯ ಬಿ.ಕಾಂ. ಕಾರ್ಯಕ್ರಮ ನಿರೂಪಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top