ಎಲ್ಲವೂ ಕೃಷ್ಣಮಯವೇ: ಬದುಕಿನ ಹಲವು ಭಾವಗಳ ಪ್ರತೀಕ ಶ್ರೀಕೃಷ್ಣ

Upayuktha
0

"ಎಲ್ಲವೂ  ಕೃಷ್ಣ ಮಯವೇ"




ಹಲೋ, ಹೇಗಿದ್ದೀರಾ?

ಶ್ರಾವಣ ಮಾಸ ಬಂತೆದರೆ ನಮಗೆ ನೆನಪಾಗುವುದು ಕೃಷ್ಣ ಜನ್ಮಾಷ್ಟಮಿ. ಕೃಷ್ಣ ಕೇವಲ ಒಬ್ಬ ದೇವರಲ್ಲ. ಅವನು ಹಲವು. ಭಾವಗಳ ಮಿಶ್ರಣ.

ಹುಟ್ಟಿದ ಕೂಡಲೇ ಗೋಕುಲಕ್ಕೆ  ಹೋಗಿ ಅಲ್ಲಿ ಗೋವಿನ ಮಹತ್ವವನ್ನು ಸಾರಿದನು. ಈಗಲೂ ಪಶು ವೈದ್ಯಕೀಯ ಇಲಾಖೆಯವರು  ಗೋ ಸೇವೆಯೇ ಗೋಪಾಲನ ಸೇವೆ ಎಂಬ ಧ್ಯೇಯ ವಾಕ್ಯ ಇಟ್ಟು  ಕೊಂಡಿದ್ದಾರೆ.  


ದೊಡ್ಡವ ನಾಗುತ್ತಲೇ ಮಾವ    ಕಂಸ ನನ್ನು ಕೊಂದು ತನ್ನ ತಾಯಿ ತಂದೆಯನ್ನು ಸೆರೆಯಿಂದ  ಬಿಡಿಸಿ  ಮಕ್ಕಳು ತಂದೆ ತಾಯಿಯರ ಬಗ್ಗೆ ತೋರ ಬೇಕಾದ ಗೌರವ ವನ್ನು ಎತ್ತಿ ಹಿಡಿದನು. ಗೆಳೆಯ ಸುಧಾಮ ಕೊಟ್ಟ  ಹಿಡಿ ಅವಲಕ್ಕಿ ತಿಂದು ಸ್ನೇಹದ ಮಹತ್ವವನ್ನು ಎತ್ತಿ ಹಿಡಿದನು.

ರಾಧೆಯ ಪ್ರೇಮಕ್ಕೆ  ಅವನು ಕೊಟ್ಟ ಕೊಡುಗೆ ತುಂಬಾ ದೊಡ್ಡದು. ಯಾರೋ ಕೃಷ್ಣನಿಗೆ ಕೇಳಿದರಂತೆ, ನೀನು ಯಾಕೆ ರಾಧೆಯನ್ನು ಮದುವೆ ಆಗಲಿಲ್ಲ? ಆಗ  ಕೃಷ್ಣ ಕೊಟ್ಟ  ಉತ್ತರ  ಅವನ ಪ್ರೇಮದ ಪರಾಕಾಷ್ಠೆಯನ್ನು ಎತ್ತಿ ಹಿಡಿಯುತ್ತದೆ. ಅವಳು ನನ್ನ ಆತ್ಮ. ನಾನು ಅವಳನ್ನು ಹೇಗೆ ಮದುವೆ ಆಗಲಿ?  ಈಗಲೂ ಜನ ಪ್ರೇಮದ ಪ್ರತೀಕವಾಗಿ ಜನ ರಾಧಾ ಕೃಷ್ಣ ರನ್ನು ಪೂಜಿಸುತ್ತಾರೆ.


ಕೃಷ್ಣ  ದ್ರೌಪದಿಯ ಭರವಸೆಯ ಬೆಳಕು ಕೂಡ ಹೌದು. ಅನಾಥೋ ದೈವ  ರಕ್ಷಕ ಎನ್ನುವಂತೆ  ಅನಾಥರಾಗಿದ್ದ ಪಾಂಡವರನ್ನು ಎತ್ತಿ ಹಿಡಿದು ಬಲಹೀನರನ್ನು ಬಲವಂತ ಹೊಡೆದರೆ, ಬಲವಂತ ರನ್ನು ಭಗವಂತ ಹೊಡೆಯುತ್ತಾನೆ ಎಂದು ತೋರಿಸಿದ.


ಕೊನೆಗೆ ಗಾಂಧಾರಿಯ ಶಾಪವನ್ನು ಸ್ವೀಕರಿಸಿ ಕಾಡಿನಲ್ಲಿ ವ್ಯಾಧನ ಬಾಣಕ್ಕೆ ಸಿಕ್ಕಿ ಪರಂಧಾಮಕ್ಕೆ ಹೊರಟು ನಿಂತ ಕೃಷ್ಣ  ಅಂತಿಮ ಪಯಣದಲ್ಲಿ ನಾವು ಒಬ್ಬರೇ ಎಂಬ ಸಂದೇಶ ನೀಡಿದ.ಬಹುಶಃ ಕೃಷ್ಣ ನಷ್ಟು ಯಾರು ನಮ್ಮ ಮೇಲೆ ಪ್ರಭಾವ ಬೀರಿಲ್ಲ ಎಂದು ಹೇಳ ಬಹುದು.


ಈಗಲೂ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂತೋಷ ಪಡುತ್ತೇವೆ. ಕೋರ್ಟಿನಲ್ಲಿ ಭಗವದ್ಗೀತೆ ಪ್ರತಿ ಇಡುತ್ತೇವೆ. ರಾಧೆ ಕೃಷ್ಣರ ಫೋಟೋ ನಾವು ಶೋಕೆಸಿನಲ್ಲಿ ಇಟ್ಟು ಸಂಭ್ರಮ ಪಡುತ್ತೇವೆ. ಇಸ್ಕಾನ್, ಚೈತನ್ಯರ ಅನುಯಾಯಿಗಳನ್ನು ಕಾಣ ಬಹುದು. ಮಥುರಾ, ವೃಂದಾವನ, ಜನರನ್ನು ಆಕರ್ಷಿಸುತ್ತಿವೆ.  ಉತ್ತರ ಭಾರತದಲ್ಲಿ ರಾಧೆ,ರಾಧೆ ಘೋಷಣೆ ಜನಪ್ರಿಯ.


ಕೊನೆಗೆ ದೇವರಿಗೆ ಇಟ್ಟ ನೈವೇದ್ಯವನ್ನು ಕೂಡ  ಕೃಷ್ಣಾರ್ಪಣ ಎಂದು ಹೇಳುತ್ತೇವೆ. ಅಷ್ಟರ  ಮಟ್ಟಿಗೆ ಕೃಷ್ಣ ನಮ್ಮಜೀವನದ ಭಾಗವಾಗಿದ್ದಾನೆ.

ಕೃಷ್ಣ, ಎಲ್ಲವೂ ನೀನೆ.

ಏನಂತೀರಾ

-ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top