ಮಂಗಳೂರು: ಸೇವಾ ಭಾರತಿ(ರಿ) ಮಂಗಳೂರು ಇದರ ಅಂಗಸಂಸ್ಥೆಯಾದ ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ದಿನಾಂಕ 2ನೇ ಸೆಪ್ಟೆಂಬರ್ 2026 ರಂದು ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ.ಲಿ. ಉರ್ವ,ಮಂಗಳೂರು ಇವರ ವತಿಯಿಂದ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಸೋಸೈಟಿಯ ಮಹತ್ಕಾರ್ಯವನ್ನು ಶ್ಲಾಘಿಸಿದರು. ಇಂತಹ ಸೇವಾ ಮನೋಭಾವವು ಇನ್ನೂ ಮುಂದಿನ ವರ್ಷಗಳಲ್ಲೂ ಮುಂದುವರಿಯಬೇಕು ಎಂದು ತಿಳಿಸಿದರು. ಇದೇ ರೀತಿಯ ಕಾರ್ಯಗಳಿಗೆ ಇತರ ಸಂಸ್ಥೆಗಳೂ ಚೇತನಾ ಶಾಲೆಯೊಂದಿಗೆ ಕೈಗೋಡಿಸಬೇಕೆಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್.ಜೆ ಅಭಿಷೇಕ್ ಶೆಟ್ಟಿ,ನಿರ್ಮಾಪಕರು,ಸಾರಂಗ ರೇಡಿಯೋ ವಾಹಿನಿ ಇವರು ಮಾತನಾಡುತ್ತಾ ದಿವ್ಯಾಂಗ ಮಕ್ಕಳನ್ನು ಪ್ರೀತಿಯಂದ ದಿನವಿಡೀ ನೋಡಿಕೊಳ್ಳುತ್ತಿರುವ ಚೇತನಾ ಶಾಲಾ ಶಿಕ್ಷಕಿಯರ ಸೇವೆಯನ್ನು ಮುಕ್ತ್ರಕಂಠದಿಂದ ಪ್ರಶಂಸಿಸಿದರು ಹಾಗೂ ಸೊಸೈಟಿಯ ಸಮಾಜ ಮುಖೀ ನಡೆಯನ್ನು ಎಲ್ಲರೂ ಅನುಸರಿಸಬೇಕೆಂದು ಕರೆ ನೀಡಿದರು. ಸೇವಾ ಭಾರತಿ ಮತ್ತು ಚೇತನಾ ಶಾಲೆಯ ಕಾರ್ಯ ಚಟುವಟಿಕೆಯನ್ನು ಸಂಸ್ಥೆಯ ಹಿರಿಯ ಸ್ವಯಂಸೇವಕರಾದ ಶ್ರೀ ಪ್ರಕಾಶ್ ಪೈ ಅವರು ವಿವರಿಸಿದರು.
ತದನಂತರ ಎಲ್ಲಾ ದಿವ್ಯಾಂಗ ಮಕ್ಕಳಿಗೂ ಅಗತ್ಯ ವಸ್ತುಗಳ ಪರಿಕರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪರೇಟರ್ ಮತ್ತುಮಾಜಿ ಉಪ ಮೇಯರ್ ಅವರಾದ ಪೂರ್ಣಿಮ,ಚೇತನಾ ಶಾಲಾ ಮುಖ್ಯೋಪಾಧ್ಯಾಯಿನಿ ಸುಪ್ರೀತಾ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ.ಲಿ. ಇದರ ಕ್ಷೇತ್ರ ಅಭಿವೃದ್ಧಿ ಪ್ರಬಂಧಕರಾದ ನಾಗರಾಜ ಮಡಿವಾಳ್,ಸೊಸೈಟಿಯ ಇತರ ಪ್ರಮುಖ ಅಧಿಕಾರಿಗಳು,ಶಾಲಾ ಶಿಕ್ಷಕಿಯರು,ಪೋಷಕರು, ಸ್ವಯಂಸೇವಕರು,ವಿಶ್ವಸ್ಥರು,ಹಿತೈಷಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
