ಉದ್ಯಮಶೀಲತೆ ಮತ್ತು ನಾವೀನ್ಯತೆ– ತರಗತಿಯಿಂದ ಸ್ಟಾರ್ಟ್‌ಅಪ್‌ ವರೆಗೆ: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧಕರ ಕಾರ್ಯಾಗಾರ

Shreya Hegde
0

 


ಮಂಗಳೂರು: ತರಗತಿಯ ಕಲಿಕೆಯನ್ನು ನಾವೀನ್ಯತೆ ಮತ್ತು ಉದ್ಯಮಶೀಲತೆಯೊಂದಿಗೆ ಸಂಪರ್ಕಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಘಟಕ ಹಾಗೂ ಕೆನರಾ ಇನ್ನೋವೇಶನ್ ಫೌಂಡೇಶನ್ ವತಿಯಿಂದ ಟೈ (TiE ) ಮಂಗಳೂರು ಸಹಯೋಗದಲ್ಲಿ “ಉದ್ಯಮಶೀಲತೆ ಮತ್ತು ನಾವೀನ್ಯತೆ– ತರಗತಿಯಿಂದ ಸ್ಟಾರ್ಟ್‌ಅಪ್‌ ವರೆಗೆ” ಎಂಬ ವಿಷಯದ ಕುರಿತು ಬೋಧಕ ಅಭಿವೃದ್ಧಿ ಕಾರ್ಯಕ್ರಮ ಜರಗಿತು.


ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಬೆಳೆಸುವಲ್ಲಿ ಬೋಧಕರ ಪಾತ್ರ, ನೈಜ ಸಮಸ್ಯೆಗಳನ್ನು ಗುರುತಿಸುವುದು, ಅವಕಾಶಗಳನ್ನು ಅನ್ವೇಷಿಸುವುದು, ಆಲೋಚನೆಗಳನ್ನು ಮೌಲ್ಯೀಕರಿಸುವುದು, ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಅವುಗಳನ್ನು ಉದ್ಯಮವಾಗಿ ರೂಪಿಸುವ ಪ್ರಕ್ರಿಯೆಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.


ಇನ್‌ಕ್ಚರ್ ಟೆಕ್ನಾಲಜೀಸ್‌ನ ಸೀನಿಯರ್ ಡೈರೆಕ್ಟರ್– (ಉತ್ಪನ್ನ ಮತ್ತು ತಂತ್ರಜ್ಞಾನ) ಪ್ರಾಡಕ್ಟ್ & ಟೆಕ್ನಾಲಜಿ ರವಿಕಿರಣ್ ಪಾಪ್ತಿಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಉದ್ಯಮಶೀಲತೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಕುರಿತು ತಮ್ಮ ಅನುಭವ ಹಾಗೂ ಒಳನೋಟಗಳನ್ನು ಹಂಚಿಕೊಂಡರು.


ಕಾರ್ಯಕ್ರಮದಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ತರಬೇತಿ, ಪ್ಲೇಸ್‌ಮೆಂಟ್ ಮತ್ತು ಸಹಯೋಗದ ಡೀನ್ ಡಾ. ಎಚ್. ಮನೋಜ್ ಟಿ. ಗಡಿಯಾರ್, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ ಬೆಳೆಸುವಲ್ಲಿ ಬೋಧಕರ ಪಾತ್ರ ಪ್ರಮುಖವಾಗಿದೆ ಎಂದರು. ವಿದ್ಯಾರ್ಥಿಗಳ ಆಲೋಚನೆಗಳನ್ನು ಗುರುತಿಸಿ, ಅವುಗಳನ್ನು ನವೀನ ಪರಿಹಾರಗಳು ಹಾಗೂ ಉದ್ಯಮಗಳಾಗಿ ರೂಪಿಸುವ ನಿಟ್ಟಿನಲ್ಲಿ ಬೋಧಕರು ಮಾರ್ಗದರ್ಶನ ನೀಡುವ ಅಗತ್ಯವನ್ನು ಅವರು ವಿವರಿಸಿದರು.


ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಡೀನ್ ಡಾ. ಉದಯ ಕುಮಾರ್ ಕೆ. ಶೆಣೈ ಉಪಸ್ಥಿತರಿದ್ದರು. ಕಾಲೇಜಿನಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಯತೀಶ್ ಕೆ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.


ಸಮಾರೋಪ ಸಮಾರಂಭದಲ್ಲಿ ಕೆನರಾ ಇನ್ನೋವೇಶನ್ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕೆನರಾ ಇಂಜಿನಿಯರಿಂಗ್ ಕಾಲೇಜಿನ ತರಬೇತಿ ಮತ್ತು ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥ ಪ್ರಶಾಂತ್ ಕುಮಾರ್ ಎ. ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top