ದೆಹಲಿ: ಪೇಜಾವರ ಶ್ರೀಗಳ ನೇತೃತ್ವದಲ್ಲಿ 'ದೇಶ ದೇವೋ ಭವ' ಯುವ ಸಮಾವೇಶ

Shreya Hegde
0


ನವದೆಹಲಿ: ವಂದೇ ಮಾತರಮ್ ಗೀತೆಯ 150ನೇ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ 'ದೇಶ ದೇವೋ ಭವ' ಯುವ ಸಮಾವೇಶವು ಅತ್ಯಂತ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಯುವ ಸಮೂಹಕ್ಕೆ ಐದು ಪ್ರಮುಖ ಪ್ರತಿಜ್ಞೆಗಳನ್ನು ಬೋಧಿಸುವ ಮೂಲಕ ದೇಶಪ್ರೇಮದ ಸಂದೇಶ ಸಾರಿದರು.


ಚಾತುರ್ಮಾಸ್ಯ ಸೇವಾ ಸಮಿತಿ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ದೆಹಲಿ ಸರ್ಕಾರ ಹಾಗೂ ದೆಹಲಿ ವಿಶ್ವವಿದ್ಯಾನಿಲಯದ ಸಂಯುಕ್ತ ಸಂಯೋಜನೆಯಲ್ಲಿ ಈ ಕಾರ್ಯಕ್ರಮವು ನಡೆಯಿತು. ತುಂಬಿದ ಸಭಾಂಗಣದಲ್ಲಿ 5 ಸಾವಿರಕ್ಕೂ ಅಧಿಕ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು. ದೇಶ ದೇವೋ ಭವ' ಚಿತ್ರಕಲಾ ಸ್ಪರ್ಧೆಯಲ್ಲಿ 2,100ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು. ಯುವ ಸಂಸದ ತೇಜಸ್ವಿ ಸೂರ್ಯ ಅವರು ಯುವಕರನ್ನು ಉದ್ದೇಶಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.


ಸಾಂಸ್ಕೃತಿಕ ವೈಭವ: ಉಡುಪಿಯ ಹುಲಿವೇಷ (ಮಾರ್ಪಳ್ಳಿ ಚಂಡೆ ಬಳಗ), ಕೃಷ್ಣಮೂರ್ತಿ ತುಂಗ ಮತ್ತು ಬಳಗದವರಿಂದ ಯಕ್ಷಗಾನ ಹಾಗೂ ದೆಹಲಿ ವಿವಿ ವಿದ್ಯಾರ್ಥಿಗಳ ದೇಶಭಕ್ತಿ ಗೀತಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.


ಪೇಜಾವರ ಶ್ರೀಗಳಿಂದ ಬೋಧಿಸಲ್ಪಟ್ಟ ಪಂಚ ಪ್ರತಿಜ್ಞೆಗಳು:

ತಂದೆ, ತಾಯಿ, ಗುರು ಹಾಗೂ ಹಿರಿಯರನ್ನು ಸದಾ ಗೌರವಿಸುತ್ತೇನೆ.

ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಮನೆ ಮಂದಿಯ ಜೊತೆಯಲ್ಲಿ ಕುಳಿತು ಭೋಜನ ಮಾಡುತ್ತೇನೆ.

ಭಾರತೀಯ ಜೀವನ ಪದ್ಧತಿ ನಮಗೆ ನೀಡಿದ ಉನ್ನತ ಸಂಸ್ಕಾರಗಳನ್ನು ಶಿರಸಾವಹಿಸಿ ಪಾಲಿಸುತ್ತೇನೆ ಹಾಗೂ ದುಶ್ಚಟ ಮುಕ್ತ ಜೀವನ ನಡೆಸುತ್ತೇನೆ.

ಭಾರತದ ಓರ್ವ ನಾಗರಿಕನಾಗಿ ಸಂವಿಧಾನವು ನೀಡಿದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ಪಾಲಿಸುವುದರೊಂದಿಗೆ ಎಂದೆಂದಿಗೂ ದೇಶವನ್ನು ಗೌರವಿಸುತ್ತೇನೆ.

ಭಾರತವನ್ನು ಜಗತ್ತಿನ ಶ್ರೇಷ್ಠ ರಾಷ್ಟ್ರವನ್ನಾಗಿ ರೂಪಿಸಲು ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ನಿರಂತರ ಶ್ರಮಿಸುತ್ತೇನೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top