ಚೇತನ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

Shreya Hegde
0


 ಹುಬ್ಬಳ್ಳಿ‌ : ನಗರದ ಚೇತನ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಚೇತನ ಕಾಲೇಜ್ ಆಫ್ ಕಾಮರ್ಸ್, ಬಿಬಿಎ ಮತ್ತು ಬಿಸಿಎ ಆವರಣದಲ್ಲಿ ಶಿಕ್ಷಕರ ದಿನಾಚರಣೆ-೨೦೨೬ ನಡೆಯಿತು.


ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಿ ಕೆ ಎಸ್ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಸಂಸ್ಥೆಯ ನಿರ್ದೇಶಕ ಡಾ. ವಿ. ಎಂ. ಕೊರವಿ, ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ, ವಿದ್ಯಾರ್ಥಿಗಳ ಬದುಕಿಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತಾರೆ. ಶಿಕ್ಷಕರ ತ್ಯಾಗ, ಶ್ರಮ ಮತ್ತು ಸಮರ್ಪಣೆಯಿಂದ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.


ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ರಮಾ ಚಿದಾನಂದ ರೈಕರ್, ಕೃಷ್ಣಾನಂದ ನಾಯಕ್, ನಿಂಗಣ್ಣ ಕುಂಟಿ ಹಾಗೂ ಬಸವಂತಪ್ಪ ಮೊರಬ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಗುರುಗಳ ಪಾತ್ರ ಹಾಗೂ ಶಿಸ್ತು, ಮೌಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯದ ಕುರಿತು ಬೆಳಕು ಚೆಲ್ಲಿದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್‌ಮನ್ ಜಗದೀಶ ದ್ಯಾವಪ್ಪನವರ್, ಕೆ.ಸಿ. ಪಾಂಗಿ, ಡಾ. ಎ.ಆರ್. ವಡಕಣ್ಣನವರ, ರಮಾಕಾಂತ ಕುಲಕರ್ಣಿ, ಡಾ. ಪವನ ಅಪರಂಜಿ, ಡಾ. ಭಾರತಿ ಬಡಿಗೇರ, ಪ್ರೊ. ಸ್ವಾತಿ ಕನಮಡಿ, ಸ್ವಾತಿ ಕ್ಯಾತನವರ, ವೀಣಾ ಕುಮಂಸಿ ಹಾಗೂ ಭಾಗ್ಯಶ್ರೀ ಬಳಿಗಾರ ಉಪಸ್ಥಿತರಿದ್ದರು.


ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರತೀಕ್ಷಾ ಹಾಗೂ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top