Bhima Jewellery Festival - ಡೈಮಂಡ್ ಆಭರಣ ಖರೀದಿಸಿ BMW ಕಾರ್ ಗೆದ್ದ ಅದೃಷ್ಟಶಾಲಿ; ಕೀಲಿ ಕೈ ಹಸ್ತಾಂತರಿಸಿದ ಭೀಮ!

Upayuktha
0

ಭೀಮ ಮಂಗಳೂರು ಮಳಿಗೆಯಲ್ಲಿ  ಲಕ್ಕಿ ಡ್ರಾ ನಂತರ, ಬಂಪರ್ ಬಹುಮಾನವಾದ  ಐಷಾರಾಮಿ BMW X1 suv ಕಾರನ್ನು  ಹೆಚ್. ಶಶಿ ಶೆಟ್ಟಿ ಅವರು ಸ್ವೀಕರಿಸಿದರು.


ಮಂಗಳೂರು: ಭೀಮ ಸಂಸ್ಥೆಯು  ಇತ್ತೀಚೆಗೆ ಮುಕ್ತಾಯಗೊಂಡ 'ಭೀಮ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಫೆಸ್ಟಿವಲ್'ನ ಬಂಪರ್ ಬಹುಮಾನ ವಿಜೇತರಾದ ಹೆಚ್ . ಶಶಿ ಶೆಟ್ಟಿ ಅವರಿಗೆ ನಿನ್ನೆ BMW X1 ಕಾರಿನ ಕೀಗಳನ್ನು ಹಸ್ತಾಂತರಿಸಲಾಯಿತು . ಈ ಮೂಲಕ ಅವರ ಆಭರಣ ಖರೀದಿಯನ್ನು ಅವಿಸ್ಮರಣೀಯವಾಗಿಸಿತು .


ಭೀಮದ ಮಂಗಳೂರು ಮಳಿಗೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದು; ಈ ವಿಶೇಷ ಸಂದರ್ಭದಲ್ಲಿ ಶೆಟ್ಟಿ ಅವರೊಂದಿಗೆ ಅವರ ಕುಟುಂಬದವರೂ ಕೂಡ ಉಪಸ್ಥಿತರಿದ್ದರು. ಒಂದು ತಿಂಗಳ ಅವಧಿಯ ವಜ್ರಾಭರಣಗಳ ಉತ್ಸವವು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿರುವ ಭೀಮದ 21 ಮಳಿಗೆಗಳ  ಗ್ರಾಹಕರನ್ನು ಒಳಗೊಂಡಿದ್ದು , BMW X1 ಕಾರನ್ನು ಬಂಪರ್ ಬಹುಮಾನವಾಗಿ ಇಡಲಾಗಿತ್ತು .


ಆಗಸ್ಟ್  17, 2026 ರಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಭೀಮ ಮಳಿಗೆಯಲ್ಲಿ  ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಭೀಮ ಮಂಗಳೂರು ಮಳಿಗೆಯಲ್ಲಿ ಆಭರಣ ಖರೀದಿಸಿದ್ದ ಶಶಿ ಶೆಟ್ಟಿ ಅವರು ವಿಜೇತರಾಗಿ ಹೊರಹೊಮ್ಮಿದರು.


ಈ ವಿಷಯದ ಬಗ್ಗೆ ಮಾತನಾಡುತ್ತ , "ಆಭರಣ ಖರೀದಿಗೆಂದು ಬಂದ ನಮಗೆ BMW X1 ಕಾರನ್ನು ಗೆಲ್ಲುವಂತಹ ಯೋಗ ಬರುವುದು ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಭೀಮ ಸಂಸ್ಥೆಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು ಈ ಕ್ಷಣವನ್ನು ನನ್ನ ಕುಟುಂಬದವರೊಂದಿಗೆ  ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಇದು ನಾವು ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳುವಂತಹ ಕ್ಷಣವಾಗಿದೆ," ಎಂದು ಹೆಚ್.ಶಶಿ ಶೆಟ್ಟಿಯವರು ಹೇಳಿದರು


ಜುಲೈ 9 ರಿಂದ ಆಗಸ್ಟ್  9, 2026 ರವರೆಗೆ ನಡೆದ 'ಭೀಮ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಫೆಸ್ಟಿವಲ್' ವಜ್ರಾಭರಣಗಳ ಉತ್ಸವವಾಗಿದ್ದು . ಇದರಲ್ಲಿ ಮದುವೆಯ ಆಭರಣಗಳು, ಸಾಲಿಟೇರ್ (ಏಕ ವಜ್ರದ ಆಭರಣಗಳು), ಸಮಕಾಲೀನ ವಿನ್ಯಾಸಗಳು, ದೈನಂದಿನ ಬಳಕೆಯ ಹಗುರವಾದ ಆಭರಣಗಳು ಮತ್ತು ವಿಶೇಷ ಸಂದರ್ಭಗಳಿಗೆ ಸೂಕ್ತವಾದ ಆಭರಣಗಳು ಸೇರಿದಂತೆ ಪ್ರಮಾಣೀಕೃತ ವಜ್ರಾಭರಣಗಳ ವಿಶೇಷ ಸಂಗ್ರಹಗಳು ಪ್ರದರ್ಶನಗೊಂಡಿದ್ದವು.  ಬಂಪರ್ ಬಹುಮಾನ ಮತ್ತು ವಿಶೇಷ ಕೊಡುಗೆಗಳನ್ನೊಳಗೊಂಡ ಈ ಅಭಿಯಾನವು ಗ್ರಾಹಕರಿಗೆ  ವಿಶೇಷವಾಗಿತ್ತು.


BMW X1 ಕಾರಿನ ಹಸ್ತಾಂತರದೊಂದಿಗೆ ಸಂಭ್ರಮದ  ಈ ಉತ್ಸವವು ಮುಕ್ತಾಯಗೊಂಡಿದ್ದು. ವಿಶಿಷ್ಟ ಅನುಭವಗಳ ಜೊತೆಗೆ  ಅನಿರೀಕ್ಷಿತ ಸಂತೋಷದ ಕ್ಷಣಗಳನ್ನು ಗ್ರಾಹಕರಿಗೆ ನೀಡಿದ ಭೀಮ ಸಂಸ್ಥೆಯ  ಈ ಅಭಿಯಾನದಿಂದ, ಪ್ರಮುಖ ಅಭಿಯಾನಗಳು ಮತ್ತು ಹಬ್ಬದ ಅವಧಿಗಳಲ್ಲಿ ಆಭರಣ ಖರೀದಿಗೆಂದು ಬರುವ ಗ್ರಾಹಕರಿಗೆ ಸ್ಮರಣೀಯ ಅನುಭವಗಳನ್ನು ಸೃಷ್ಟಿಸುವ ಭೀಮದ ಬದ್ಧತೆಯನ್ನೂ  ಪ್ರತಿಬಿಂಬಿಸುತ್ತದೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top