ಧರ್ಮಾಭ್ಯುದಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆ
ಪುತ್ತೂರು: ನಮ್ಮ ದೇಶವು ಆದಿ ಹಾಗೂ ಅಂತ್ಯವಿಲ್ಲದ ಸನಾತನ ಧರ್ಮವನ್ನು ಹೊಂದಿದ್ದು, ಪ್ರಪಂಚಕ್ಕೆ ಯೋಗವಿದ್ಯೆಯನ್ನು ಪರಿಚಯಿಸಿದೆ. ಸನಾತನ ಧರ್ಮವನ್ನು ಉಳಿಸುವ ಸಲುವಾಗಿ ನಾವೆಲ್ಲರೂ ಜಾಗೃತರಾಗಬೇಕು. 'ಭಜನೆ ಇದ್ದಲ್ಲಿ ವಿಭಜನೆ ಇಲ್ಲ'. ಭಜನೆಯಿಂದ ದೇವರನ್ನು ನಮ್ಮಲ್ಲಿ ನೆಲೆಯಾಗಿಸಬಹುದು. ಭಜನೆ ಹಾಗೂ ಶ್ಲೋಕಗಳು ಹಿರಿಯರು ನಮಗೆ ಕಲಿಸಿಕೊಟ್ಟಂತಹ ಒಂದು ಅದ್ಭುತ ಶಕ್ತಿಯಾಗಿದೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಪುತ್ತೂರಿನ ಧರ್ಮಾಭ್ಯುದಯ - ಧರ್ಮ ಶಿಕ್ಷಣ ಸಮಿತಿಯ ವತಿಯಿಂದ ವಿವಿಧ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧರ್ಮ ಶಿಕ್ಷಣ ಪಡೆಯುತ್ತಿರುವ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಭಜನೆ, ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಶ್ಲೋಕ ಕಂಠಪಾಠ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರ, ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಮತ್ತು ಈಶ್ವರಮಂಗಲ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು.
ಸಂಪೂರ್ಣ ಸ್ಪರ್ಧೆಯ ಭಜನಾ ವಿಭಾಗದಲ್ಲಿ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರ ಈಶ್ವರಮಂಗಲ ಪ್ರಥಮ, ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಅಜ್ಜಿಕಲ್ಲು ದ್ವಿತೀಯ ಹಾಗೂ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರ ತೃತೀಯ ಸ್ಥಾನ ಗಳಿಸಿದವು.
ಭಾಷಣ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಬೆಳ್ಳಿಪ್ಪಾಡಿಯ ಭುವನ್ ಎ. ಪ್ರಥಮ, ಅಜ್ಜಿಕಲ್ಲಿನ ಯಶಸ್ವಿನ್ ರೈ ದ್ವಿತೀಯ ಸ್ಥಾನ ಪಡೆದರೆ, ಪ್ರೌಢಶಾಲಾ ವಿಭಾಗದಲ್ಲಿ ಬೆಳ್ಳಿಪ್ಪಾಡಿಯ ಹೃತಿಕಾ ಕೆ. ಪ್ರಥಮ ಹಾಗೂ ಶ್ರಾವ್ಯ ದ್ವಿತೀಯ ಸ್ಥಾನ ಪಡೆದರು. ಪ್ರಬಂಧ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಅಜ್ಜಿಕಲ್ಲಿನ ಬಿಂದುಶ್ರೀ ಪ್ರಥಮ ಸ್ಥಾನ ಗಳಿಸಿದರೆ, ಪ್ರೌಢಶಾಲಾ ವಿಭಾಗದಲ್ಲಿ ಬೆಳ್ಳಿಪ್ಪಾಡಿಯ ಖುಷಿ ಪ್ರಥಮ, ಈಶ್ವರಮಂಗಲದ ಮಾನಸ ದ್ವಿತೀಯ ಹಾಗೂ ಬೆಳ್ಳಿಪ್ಪಾಡಿಯ ಸೋಕ್ಷಾ ತೃತೀಯ ಸ್ಥಾನ ಗಳಿಸಿದರು.
ಚಿತ್ರಕಲಾ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಅಜ್ಜಿಕಲ್ಲಿನ ರಿತ್ವಿನ್ ರೈ ಕೆ. ಪ್ರಥಮ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ಬೆಳ್ಳಿಪ್ಪಾಡಿಯ ಗ್ರೀಷ್ಮಾ ಪ್ರಥಮ, ಈಶ್ವರಮಂಗಲದ ಪೂರ್ತಿ ಕೆ. ದ್ವಿತೀಯ ಹಾಗೂ ಅಜ್ಜಿಕಲ್ಲಿನ ಧನ್ವಿತ್ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಈಶ್ವರಮಂಗಲದ ಎನ್. ಕೆ. ಜೀವಜ್ ಪ್ರಥಮ, ಬೆಳ್ಳಿಪ್ಪಾಡಿಯ ಸೋನಾಲಿ ಕೆ. ಎಸ್. ದ್ವಿತೀಯ ಹಾಗೂ ಅಜ್ಜಿಕಲ್ಲಿನ ಮನ್ವಿತ್ ತೃತೀಯ ಸ್ಥಾನ ಪಡೆದುಕೊಂಡರು.
ಶ್ಲೋಕ ಕಂಠಪಾಠ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಈಶ್ವರಮಂಗಲದ ಸಮರ್ಥ್ ಪ್ರಥಮ ಹಾಗೂ ಅಜ್ಜಿಕಲ್ಲಿನ ನಿಶ್ವಿ ದ್ವಿತೀಯ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ಈಶ್ವರಮಂಗಲದ ಸಮೃದ್ಧಿ ಪ್ರಥಮ, ಅಜ್ಜಿಕಲ್ಲಿನ ಮಾನ್ವಿ ದ್ವಿತೀಯ ಹಾಗೂ ಬೆಳ್ಳಿಪ್ಪಾಡಿಯ ತಾನ್ಯಾ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ., ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಧರ್ಮಶಿಕ್ಷಣ ಸಂಸ್ಥೆಗಳ ಮಾತಾಜಿಯವರು ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಶೈಲಶ್ರೀ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕ ಹೇಮಂತ್ ಕಾರ್ಯಕ್ರಮ ನಿರೂಪಿಸಿದರು.
