‘ಆಲ್ಝೈಮರ್ಸ್- ತಡೆಗಟ್ಟುವಿಕೆ ಮತ್ತು ನಿರ್ವಹಣೆ’ ಕುರಿತು ಮಾಹಿತಿ, ಸಂವಾದ ಕಾರ್ಯಕ್ರಮ

Shreya Hegde
0


ಮಂಗಳೂರು: ಸೇವಾಭಾರತಿ (ರಿ.) ಮಂಗಳೂರು ಇದರ ಸೇವಾ ಪ್ರಕಲ್ಪವಾದ ‘ಅನಂತಸೌಖ್ಯ’ದ ವತಿಯಿಂದ ಎಲ್ಲಾ ವಯೋಮಾನದ ನಾಗರಿಕರಿಗಾಗಿ ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರದ ವಠಾರದಲ್ಲಿ “ಆಲ್ಝೈಮರ್ಸ್ (ಮರೆಗುಳಿತನ)-ತಡೆಗಟ್ಟುವಿಕೆ ಮತ್ತು ನಿರ್ವಹಣೆ” ಕುರಿತು ವಿಶೇಷ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮವನ್ನು ಶನಿವಾರ (ಸೆ.26) ಆಯೋಜಿಸಲಾಯಿತು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ದೇರಳಕಟ್ಟೆಯ ಮನೋವಿಜ್ಞಾನ ವಿಭಾಗದ ಡಾ. ವಿಶ್ರುತ ಐತಾಳ್ (ಎಂ.ಬಿ.ಬಿ.ಎಸ್, ಎಂ.ಡಿ) ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಡಾ. ವಿಶ್ರುತ ಐತಾಳ್ ಅವರು ಮರೆಗುಳಿತನದ ವಿವಿಧ ಹಂತಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರವಾಗಿ ಪರಿಚಯಿಸಿದರು. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ಇದು ಮತ್ತಷ್ಟು ಹೆಚ್ಚಾಗದಂತೆ ಯಾವ ರೀತಿಯಲ್ಲಿ ತಡೆಗಟ್ಟಬಹುದು ಎಂಬುದರ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಸಭಾಸದರಿಗೆ ಮರೆವಿಗೆ ಸಂಬಂಧಿಸಿದ ಕೆಲವು ಸರಳ ಪರೀಕ್ಷೆಗಳನ್ನು ನೀಡಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಯಿತು. ಅಲ್ಲದೆ, ಸಭಿಕರ ವಿವಿಧ ಪ್ರಶ್ನೆಗಳಿಗೆ ಅವರು ಸೂಕ್ತ ಉತ್ತರಗಳನ್ನು ನೀಡಿ ಮನವರಿಕೆ ಮಾಡಿಕೊಟ್ಟರು.


ಕಾರ್ಯಕ್ರಮದಲ್ಲಿ ಸೇವಾ ಭಾರತಿ ಗೌರವ ಕಾರ್ಯದರ್ಶಿ ಹೆಚ್. ನಾಗರಾಜ ಭಟ್, ಕೋಶಾಧಿಕಾರಿ ವಿನೋದ್ ಶೆಣೈ ಹಾಗೂ ಅನಂತಸೌಖ್ಯ ಸಂಚಾಲಕರಾದ ಶ್ರೀ ಉಮೇಶ್ ಶೆಣೈ ಉಪಸ್ಥಿತರಿದ್ದರು. ಶಿಕ್ಷಕಿ ದೀಪಾ ಮೋಹನ್ ಪ್ರಾರ್ಥನಾ ಗೀತೆ ಹಾಡಿದರು.  ಹೆಚ್. ನಾಗರಾಜ ಭಟ್ ಸ್ವಾಗತಿಸಿದರೆ, ಉಮೇಶ್ ಶೆಣೈ ವಂದನಾರ್ಪಣೆಗೈದರು. ಸೇವಾ ಭಾರತಿ ಸಿಬ್ಬಂದಿಗಳು, ಚೇತನಾ ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಒಟ್ಟು 105 ಮಂದಿ ನಾಗರಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top