ದೇಶದ ಎಲ್ಲಾ ಭಾಷೆಗಳಿಗೂ ಸಾಮ್ಯತೆ ಇದೆ: ಡಾ. ಲಲಿತ್ ಸಿಂಗ್ ರಾಜ್ ಪುರೋಹಿತ್

Shreya Hegde
0


ಮಂಗಳೂರು: ವಿದೇಶಿ ಭಾಷೆಗಳು ಕೂಡ ಭಾರತೀಯ ಭಾಷೆಗಳಿಂದ ಪದಗಳನ್ನು ಆಯ್ಕೆ ಮಾಡಿಕೊಂಡಿದೆ. ಅಲ್ಲದೇ, ಇಡೀ ದೇಶದ ಭಾಷೆ ಒಂದಕ್ಕೊಂದು ಹೋಲಿಕೆ ಹೊಂದಿದೆ ಎಂದು ಎಂಆರ್‌ಪಿಎಲ್‌ನ ರಾಜ ಭಾಷೆ ಸಹಾಯಕ ಕಾರ್ಯಕಾರಿ ಡಾ. ಲಲಿತ್ ಸಿಂಗ್ ರಾಜ್ ಪುರೋಹಿತ್ ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತ ಸಭಾ ಭವನದಲ್ಲಿ ಮಂಗಳೂರಿನ ಎಂಆರ್‌ಪಿಎಲ್, ಭಾಷಾ ಸಂಘ, ಹಿಂದಿ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ ಆಯೋಜಿಸಲಾಗಿದ್ದ ಹಿಂದಿ ದಿವಸ - 2026 ಕಾರ್ಯಕ್ರಮದಲ್ಲಿ ಮಾತನಾಡಿದರು.


ಹಿಂದಿ ಭಾಷೆ ದೇಶದ ಸಂಪರ್ಕ ಭಾಷೆಯಾಗಿದ್ದು, ಅದನ್ನು ಕಲಿಯುವುದರಿಂದ ಬೇರೆ ರಾಜ್ಯದ ಜನರೊಂದಿಗೂ ಸಂಪರ್ಕ ಸಾಧಿಸಬಹುದು. ಆ ಮೂಲಕ ದೇಶದ ಎಲ್ಲರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ದೇಶದಲ್ಲಿ ಬೇರೆ ಭಾಷೆಗೆ ಹೋಲಿಕೆ ಮಾಡಿದರೆ ಹಿಂದಿ ಭಾಷಿಗರ ಸಂಖ್ಯೆ ಹೆಚ್ಚಾಗಿದೆ. ಈ ಭಾಷೆ ರಾಷ್ಟ್ರೀಯತೆಯನ್ನು ಪ್ರೋತ್ಸಾಹಿಸುತ್ತದೆ. ಈ ಭಾಷೆಯನ್ನು ಕಲಿಯುವುದರಿಂದ ದೇಶದ ಯಾವುದೇ ರಾಜ್ಯದಲ್ಲಿ ಕೆಲಸ ನಿರ್ವಹಿಸುವುದು ಸುಲಭವಾಗುತ್ತದೆ. ಅಲ್ಲದೇ, ಈ ಭಾಷೆಯು ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಉದ್ಯೋಗವಕಾಶ ಹೆಚ್ಚಿನ ಮಟ್ಟದಲ್ಲಿ ಲಭ್ಯವಿದೆ ಎಂದು ತಿಳಿಸಿದರು.


ಹಿಂದಿ ಭಾಷಾ ಸಪ್ತಾಹದ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯನ್ನು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಹಿಂದಿ ಬರೆವಣಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಲಾಯಿತು. ತೃತೀಯ ಬಿಎ ವಿದ್ಯಾರ್ಥಿ ಅಮಿತ್ ಶುಕ್ಲಾ, ರೂಬಿ ಶುಕ್ಲಾ ಹಿಂದಿ ಭಾಷೆಕುರಿತು ಮಾತನಾಡಿದರು. 


ಇದೇ ವೇಳೆ, ಐಕ್ಯುಎಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಭಾಷಾ ಸಂಘದ ಸಹ ನಿರ್ದೇಶಕಿ ಪ್ರೊ. ನಾಗರತ್ನರಾವ್, ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಸುಮ ಟಿ. ಆರ್., ಉಪನ್ಯಾಸಕಿ ಡಾ. ನಾಗರತ್ನ ಶೆಟ್ಟಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆಡಾ. ಗಾಯತ್ರಿ ಎನ್., ವಾಣಿಜ್ಯಶಾಸ್ತ್ರ ವಿಭಾಗದ ಕಾರ್ತಿಕ್ ಪೈ ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ತೃತೀಯ ಬಿಎ ವಿದ್ಯಾರ್ಥಿ ರೆಯಾನಾ ರೋಡ್ರಿಗ್ರಸ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top