ಎಬಿವಿಪಿ ಉಡುಪಿ ನಗರ ಅಭ್ಯಾಸವರ್ಗ

Upayuktha
0


ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಕಾತ್ಯಾಯಿನಿ ಮಂಟಪ, ಕಡಿಯಾಳಿಯಲ್ಲಿ ಶನಿವಾರ (ಸೆ.26) ನಗರದ ಅಭ್ಯಾಸ ವರ್ಗವು ನಡೆಯಿತು. 


ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಸತ್ಯನಾರಾಯಣ ಭಟ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಎಸ್‌ಎಫ್‌ಡಿ ಸಂಯೋಜಕರಾದ ಅನಂತ ಕೃಷ್ಣ, ಉಡುಪಿ ಜಿಲ್ಲಾ ಸಂಚಾಲಕರಾದ ರಂಜಿತ್ ಸಿದ್ದಾಪುರ,ತಾಲೂಕು ವಿದ್ಯಾರ್ಥನಿ ಪ್ರಮುಖ್ ನಿಹಾರಿಕಾ ಪೈ ಉಪಸ್ಥಿತರಿದ್ದರು.


ಮೊದಲ ಅವಧಿ ಸೈದ್ಧಾಂತಿಕ ಭೂಮಿಕೆ ಆಗಿದ್ದು, ಈ ಅವಧಿಯನ್ನು ಡಾ.ಶಿವಾನಂದ ನಾಯಕ್ ಅವರು ನಡೆಸಿಕೊಟ್ಟರು. ಎರಡನೆಯ ಅವಧಿಯು ಕ್ಯಾಂಪಸ್ ಕಾರ್ಯವಾಗಿದ್ದು, ಈ ಅವಧಿಯನ್ನು ಸುವಿತ್ ಶೆಟ್ಟಿ ರಾಜ್ಯ ಸಹ ಕಾರ್ಯದರ್ಶಿ ಇವರು ನೇರವೇರಿಸಿದರು. ಕಾರ್ಯಕ್ರಮದ ಕೊನೆಯ ಅವಧಿಯು ಪ್ರಶಿಕ್ಷಣವಾಗಿದ್ದು, ಹಿರಿಯ ಕಾರ್ಯಕರ್ತರಾದ ಅಜಿತ್ ಜೋಗಿ ಇವರು ನಡೆಸಿದರು.


ಸಮಾರೋಪ ಸಮಾರಂಭ, 2026-27ನೇ ಸಾಲಿನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಸಂಚಿತ್ ಶೆಟ್ಟಿ, ಅಧ್ಯಕ್ಷರಾಗಿ ಪ್ರವೀಣ್ ಆಚಾರ್ಯ ಅನೇಕ ಜವಾಬ್ದಾರಿಗಳು ಈ ಸಂದರ್ಭದಲ್ಲಿ ಘೋಷಣೆಗೊಂಡವು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top