ಉಡುಪಿ: ಶೀರೂರು ಪರ್ಯಾಯ ಶ್ರೀ ಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ವಿಘ್ನನಿವಾರಕನ ಪ್ರತಿಷ್ಠಾಪನೆ

Upayuktha
0


ಉಡುಪಿ: ಭಾದ್ರಪದ ಶುಕ್ಲ ಗಣೇಶ ಚತುರ್ಥಿಯ ಪವಿತ್ರ ಪರ್ವಕಾಲದ ಅಂಗವಾಗಿ ಪರ್ಯಾಯ ಶ್ರೀ ಶೀರೂರು ಮಠದ ಆಡಳಿತಕ್ಕೊಳಪಟ್ಟ ಶ್ರೀ ಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ಶ್ರೀ ಗಣೇಶ ವಿಗ್ರಹವನ್ನು ಅತ್ಯಂತ ಶ್ರದ್ಧಾ-ಭಕ್ತಿಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.


ಪ್ರತಿಷ್ಠಾಪನೆಗೆ ಮುನ್ನ ಗಣೇಶ ವಿಗ್ರಹವನ್ನು ಮಠದ ಪ್ರಮುಖ ಬೀದಿಯಾದ ರಥಬೀದಿಯಲ್ಲಿ ವೈಭವದ ಹಾಗೂ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಬಡಗುಮಾಳಿಗೆಗೆ ತರಲಾಯಿತು. ತದನಂತರ, ಮಠದ ಪುರೋಹಿತರಾದ ಸುದರ್ಶನ ಭಟ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ಹಾಗೂ ವಿಧಿವತ್ತಾದ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಗ್ರಹದ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿತು.


ಮಧ್ಯಾಹ್ನದ ಪೂಜಾ ಸಮಯದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಪ್ರತಿಷ್ಠಾಪಿತ ಗಣೇಶನಿಗೆ ವೈಭವದ ಮಹಾಪೂಜೆ ನೆರವೇರಿತು. ಶ್ರೀಗಳು ದೇವರಿಗೆ ಮಹಾಮಂಗಳಾರತಿ ಬೆಳಗಿ, ಭಕ್ತಾದಿಗಳಿಗೆ ಅನುಗ್ರಹಿಸಿದರು.


ಈ ಪವಿತ್ರ ಧಾರ್ಮಿಕ ಸಮಾರಂಭದಲ್ಲಿ ಮಠದ ದಿವಾನರಾದ ಡಾ. ಉದಯ ಸರಳತ್ತಾಯ, ಪಾರುಪತ್ಯೆದಾರರಾದ ಶ್ರೀಶ ಭಟ್ ಕಡೆಕಾರು, ರಾಮಚಂದ್ರ ಕೊಡಂಚ ಹಾಗೂ ಮಠದ ಸಿಬ್ಬಂದಿ ವರ್ಗದವರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top