'ಸಾಹಿತ್ಯಿಕ್ ಲಿಖ್ಣಿ' ಅಂತರರಾಷ್ಟ್ರೀಯ ಕಾರ್ಯಾಗಾರ

Upayuktha
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ ಹಾಗೂ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇವುಗಳ ಜಂಟಿ ಆಶ್ರಯದಲ್ಲಿ ‘ಸಾಹಿತ್ಯಿಕ್ ಲಿಖ್ಣಿ’ ಎಂಬ ಒಂದು ದಿನದ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಇಲಿನಾಯ್ಸ್‌ನಿಂದ ಆಗಮಿಸಿದ್ದ ಡಾ. ಎಲ್. ಡಿ. ಆಸ್ಟಿನ್ ಡಿಸೋಜ ಪ್ರಭು ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ‘ಲಿಖ್ಣಿ ಮತ್ತು ವೀಜ್’ ಪತ್ರಿಕೆಯ ಕುರಿತು ತಮ್ಮ ಭಾವನೆ ಹಾಗೂ ಅನುಭವಗಳನ್ನು ಹಂಚಿಕೊಂಡರು.


ವಿಶ್ವವಿದ್ಯಾನಿಲಯದ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ಕೊಂಕಣಿ ಧ್ವಜವನ್ನು ಎತ್ತಿಹಿಡಿದು ಕೊಂಕಣಿ ಮಾತೆಗೆ ವಂದಿಸುತ್ತಾ, ವಿಶ್ವವಿದ್ಯಾನಿಲಯದ ಒಳಗೆ ಕೊಂಕಣಿಯು ಸಜೀವ ಹಾಗೂ ಕ್ರಿಯಾಶೀಲವಾಗಿದೆ ಎಂಬ ಸಂದೇಶ ನೀಡಿದರು.


ಈ ಸಂದರ್ಭದಲ್ಲಿ ‘ಆಶಾವಾದಿ ಪ್ರಕಾಶನ’ದ ವೆಬ್‌ಸೈಟ್ ಅನ್ನು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ರೆಕ್ಟರ್ ವಂದನೀಯ ಫಾದರ್ ಬ್ರಾಯನ್ ಪಿರೇರಾ ಎಸ್.ಜೆ. ಬಿಡುಗಡೆಗೊಳಿಸಿ, ಕೊಂಕಣಿ ಭಾಷೆಗೆ ಜೆಸ್ಯುಯಿಟ್ ರವರ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು.


ಈ ವೇದಿಕೆಯಲ್ಲಿ ಕೊಂಕಣಿ ಸಂಸ್ಥೆಯ ನಿರ್ದೇಶಕ ವಂದನೀಯ ಫಾ. ಪ್ರಶಾಂತ್ ಮಾಡ್ತಾ, ಕೊಂಕಣಿ ಸಂಘದ ಕಾರ್ಯದರ್ಶಿ ಶನನ್ ಪಿಂಟೋ ಮತ್ತು ಆರೋನ ಪಿಂಟೋ ಉಪಸ್ಥಿತರಿದ್ದರು.


ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕಿ ಡಾ. ಪ್ರೀತಿ ಕೀರ್ತಿ ಡಿಸೋಜ ಸ್ವಾಗತಿಸಿದರು, ಹಾಗೆಯೇ ಫ್ಲೋರಾ ಕ್ಯಾಸ್ಟೆಲಿನೊ ವಂದಿಸಿದರು.


‘ಮಿಕ್ಸ್ ಮ್ಯಾಕ್ಸ್’ (ಕೊಂಕಣಿ ಬರಹಗಾರ/ಕವಿ) ಕುರಿತು ವಿಚಾರಸಂಕಿರಣ ನಡೆಯಿತು. ಇದರಲ್ಲಿ  ಜೂಲಿಯೆಟ್ ಮೊರಾಸ್ ಮತ್ತು ಹೇಮಾಚಾರ್ಯ ಭಾಗವಹಿಸಿ ವಿವಿಧ ಹಾಡುಗಾರರ ಹಾಡುಗಳನ್ನು ಪ್ರಸ್ತುತಪಡಿಸಿದರು. ಸಂಜಯ್ ರೋಡ್ರಿಗಸ್ ಅವರು ಸಂಗೀತ ನಿರ್ದೇಶನ ನೀಡಿದ್ದರು. ಈ ಸಂದರ್ಭದಲ್ಲಿ ‘ನಾಚುಯಾ ಕುಂಪಾಸರ್’ ಎಂಬ ಕೊಂಕಣಿ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top