37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆಳ್ವಾಸ್‌ನ 22 ಕ್ರೀಡಾಪಟುಗಳು ಆಯ್ಕೆ

Shreya Hegde
0

 


ಮೂಡುಬಿದಿರೆ : ಸೆಪ್ಟೆಂಬರ್ 16ರಿಂದ 18ರವರೆಗೆ ಪಾಂಡಿಚೇರಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿರುವ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆಳ್ವಾಸ್‌ನ 22 ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ದಯಾನಂದ (400ಮೀ), ನೋವಲ್ ಆರ್.ಪಿ. (ಉದ್ದ ಜಿಗಿತ), ನಿತಿನ್ ಎಲ್.ಜಿ. (ಚಕ್ರ ಎಸೆತ), ರೂಪೇಶ್ (ಪೋಲ್ ವಾಲ್ಟ್), ಅಬ್ದುಲ್ ರಜಕ್ ಶಿಗ್ಗಾನ (ಹ್ಯಾಮರ್ ತ್ರೋ), ಸಾಹಿಲ್ (100ಮೀ), ಸಮರ್ಥ್ ಸಂಜೀವ್ ಕುಮಾರ್ (1000ಮೀ), ಆಕಾಶ್ ಹುಕ್ಕೇರಿ (110ಮೀ ಹರ್ಡಲ್ಸ್), ಜಸ್ವೀನ್ ಥೋಮಸ್ (ಎತ್ತರ ಜಿಗಿತ), ದಿಶಾಂತ್ (ಉದ್ದ ಜಿಗಿತ), ಹೆಚ್. ಮೈಲಾರಿ (ಚಕ್ರ ಎಸೆತ), ಆರಂಭಮ್ ರಾಜು (60ಮೀ ಮತ್ತು 80ಮೀ ಹರ್ಡಲ್ಸ್), ಕೌಶಿಕ್ ಪಿ. ಶೆಟ್ಟಿಗಾರ್ (80ಮೀ ಹರ್ಡಲ್ಸ್), ಹರ್ಷದ್ ಗೌಡ (ಉದ್ದ ಜಿಗಿತ), ಮೋಕ್ಷಿತ್ ಆರ್. ಗೌಡ (ತ್ರಯತ್ಲಾನ್ B) ಹಾಗೂ ಸುಭಾಷ್ ಆರ್. (ತ್ರಯತ್ಲಾನ್ C) ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ರೀತುಶ್ರೀ (400ಮೀ), ಚರೀಷ್ಮಾ (3000ಮೀ ಮತ್ತು 5000ಮೀ), ಬಾನವಿ ಪಿ.ಎಸ್. (400ಮೀ), ನಾಗಿಣಿ (1000ಮೀ), ಭಗೀರಥಿ (3ಕಿಮೀ ನಡಿಗೆ) ಹಾಗೂ ಮೇಘಾ ಅಶೋಕ್ ಪೂಜಾರಿ (600ಮೀ) ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಆಯ್ಕೆಗೊಂಡ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಶುಭ ಹಾರೈಸಿದ್ದಾರೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top