ಯಕ್ಷಗಾನದ ಅಮೂಲ್ಯ ನಾಟ್ಯ ಸಂಪತ್ತು ಮುಂದಿನ ಪೀಳಿಗೆಗೆ ರವಾನೆ: 'ಕರ್ಗಲ್ಲು ಯಕ್ಷ ಮಾರ್ಗ' ದಾಖಲೀಕರಣ ಬಿಡುಗಡೆ

Upayuktha
0

ಕಾಸರಗೋಡು: ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಾಟ್ಯ ಪದ್ಧತಿಯನ್ನಾಧರಿಸಿದ 'ಕರ್ಗಲ್ಲು ಯಕ್ಷ ಮಾರ್ಗ: ಪ್ರಾಥಮಿಕ ಹಂತದ ನಾಟ್ಯ ಪ್ರಸ್ತುತಿ' ಯೋಜನೆಯ ಕಿರು ವೀಡಿಯೋ ಭಾಗವನ್ನು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಆಗಸ್ಟ್ 25 ರಂದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಯಿತು.


ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನದ ಅಧ್ಯಯನ ಹಾಗೂ ಅಧ್ಯಾಪನದಲ್ಲಿ ನಿರತರಾಗಿರುವ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ವಿಶೇಷ ಅನುಭವ ಹಾಗೂ ನಾಟ್ಯ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ತಲುಪಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ಸಿರಿಬಾಗಿಲು ಪ್ರತಿಷ್ಠಾನವು ಈ ದಾಖಲೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.


ಕಾರ್ಯಕ್ರಮದಲ್ಲಿ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಹಿರಿಯ ಕಲಾವಿದ ಶಂಭಯ್ಯ ಕಂಜರ್ಪಣೆ, ಕಲಾವಿದ-ಉಪನ್ಯಾಸಕ ಡಾ. ಶ್ರುತಕೀರ್ತಿರಾಜ ಉಜಿರೆ, ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ, ಸುಮಿತ್ರ ಆರ್. ಮಯ್ಯ, ಶ್ರೀಮುಖ ಎಸ್.ಆರ್. ಮಯ್ಯ ಹಾಗೂ ರಾಜ ಎಸ್.ಆರ್. ಮಯ್ಯ ಉಪಸ್ಥಿತರಿದ್ದರು.


ಈ ಕುರಿತು ಮಾತನಾಡಿದ ಪ್ರತಿಷ್ಠಾನದ ಪದಾಧಿಕಾರಿಗಳು, "ಯಕ್ಷಗಾನವು ವಿಶ್ವ ರಂಗಭೂಮಿಯಲ್ಲಿ ಶಾಶ್ವತವಾಗಿ ನೆಲೆನಿಲ್ಲಲು ಈ ದಾಖಲೀಕರಣ ಪೂರ್ಣಪ್ರಮಾಣದಲ್ಲಿ ಸಹಕಾರಿಯಾಗಲಿದೆ. ಇಂದಿನ ನಾಟ್ಯ ಶಿಕ್ಷಕರು, ಕಲಾವಿದರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಆಶಯ ವ್ಯಕ್ತಪಡಿಸಿದರು.


ಸಹಕಾರ ಮತ್ತು ತಾಂತ್ರಿಕ ಬೆಂಬಲ


ಆರ್ಥಿಕ ಸಹಾಯ: ಕೆ.ಕೆ. ಶೆಟ್ಟಿ (ಅಹಮದ್ ನಗರ), ವಾಸುದೇವ ಐತಾಳ (ಪಣಂಬೂರು), ಮಹಾಬಲೇಶ್ವರ ಭಟ್ (ಎಡಕ್ಕಾನ) ಹಾಗೂ ಮಧುರ ಉಪಾಧ್ಯ (ಬೆಂಗಳೂರು).


ಕಲಾತ್ಮಕ ಸಹಕಾರ: ಶಂಭಯ್ಯ ಕಂಜರ್ಪಣೆ, ಮಧೂರು ಗೋಪಾಲಕೃಷ್ಣ ನಾವಡ, ಲಕ್ಷ್ಮಣ ಕುಮಾರ್ ಮರಕಡ ಮತ್ತು ಶಿವಾನಂದ ಪೆರ್ಲ.


ಚಿತ್ರೀಕರಣ: ಶ್ರೀಮುಖ ಮಯ್ಯ (ಎಸ್.ವಿ. ವಿಷನ್) ಹಾಗೂ ಕಾರ್ತಿಕ್ ಕರ್ಗಲ್ಲು.


ಅಗತ್ಯವಿರುವ ಆಸಕ್ತ ಅಭ್ಯಾಸಿಗಳು ಹಾಗೂ ಅಧ್ಯಯನಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಈ ಸಂಪೂರ್ಣ ದಾಖಲೀಕರಣವು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಲಭ್ಯವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಪ್ರತಿಷ್ಠಾನವನ್ನು ಸಂಪರ್ಕಿಸಬಹುದಾಗಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top