ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 79 ವರ್ಷಗಳು ಪೂರ್ಣಗೊಂಡಿದೆ. ನಾಳೆ ಈ ಸಂಭ್ರಮವನ್ನು ನಾವು ಆಚರಿಸಲಿದ್ದೇವೆ. ಸ್ವಾತಂತ್ರೋತ್ಸವದ ಅಂಗವಾಗಿ ದೇಶಾದ್ಯಂತ ಸಂಭ್ರಮದ ಕಾರ್ಯಕ್ರಮಗಳು ನಡೆಯಲಿಕ್ಕಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಛೇರಿಗಳಲ್ಲಿ ಕಾರ್ಯಕ್ರಮ ಪೂರ್ವಸಿದ್ಧತೆ ಎಲ್ಲಾ ನಡೆದು ನಾಳೆಯ ಪ್ರಸ್ತುತಿಗೆ ಕಾತರದಿಂದ ಕಾಯುತ್ತಿದ್ದಾರೆ. ಇದು ಭಾರತದ ಸರ್ವಧರ್ಮ ಬಾಂಧವರು ಒಂದುಗೂಡಿ ಆಚರಿಸುವ ಹಬ್ಬವೇ ಸರಿ. ಭಾರತ ಆಂಗ್ಲರ ಕಪಿಮುಷ್ಠಿಯಿಂದ ಬಿಡಿಸಿಕೊಂಡದ್ದು ಮರೆಯದ, ಮರೆಯಲಾಗದ, ಮರೆಯಬಾರದ ವಿಷಯೇ ಹೌದು.
ಆದರೆ ಸಂಭ್ರಮಗಳು ಯಾವುದು ಎಲ್ಲೆ ಮೀರಬಾರದು. ನಾಳಿನ ದಿನ ನಡೆಯುವ ಡ್ರಿಲ್, ರ್‍ಯಾಲಿಗಳ ನಂತರ ಕಾಣಸಿಗುವ ದೃಶ್ಯಗಳು ನೋವು ನೀಡುತ್ತದೆ. ಭಾರತದ ತ್ರಿವರ್ಣ ಧ್ವಜ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತ. ಅದು ನಮ್ಮ ಹೆಮ್ಮೆ. ಆದರೆ ಈ ಸಂಭ್ರಮದ ನಡುವೆ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ತಲೆಕೆಳಗಾಗಿ ಹಾರಾಡುವ ಬಾವುಟಗಳು ಒಂದು ಕಡೆಯಾದರೆ ಅಲ್ಲಿ ಇಲ್ಲಿ ಕಾಲ ಅಡಿಯಲ್ಲಿ ಸಿಕ್ಕಿ ಹೊರಲಾಡುವ ಪ್ಲಾಸ್ಟಿಕ್ ಬಾವುಟಗಳು ಇನ್ನೊಂದು ಕಡೆ.
ನಾವು ಯೋಚಿಸಬೇಕಾದ ವಿಚಾರ . ಪ್ರಥಮವಾಗಿ ತ್ರಿವರ್ಣ ಧ್ವಜ ನಮಗೆ ಸರ್ವ ಶ್ರೇಷ್ಠವಾದದ್ದು ಅದಕ್ಕೆ ಎಂದೂ ಅಪಮಾನವಾಗಬಾರದು. ಪ್ಲಾಸ್ಟಿಕ್ ಧ್ವಜಗಳು ಒಂದಷ್ಟು ಹೊತ್ತು ಮಕ್ಕಳ ಕಿಸೆಯಲ್ಲಿ, ವಾಹನಗಳಲ್ಲಿ ಅಲ್ಲಿ ಇಲ್ಲಿ ಹಾರಾಡಿ ಧರಾಶಾಯಿಯಾಗುತ್ತದೆ. ಅದನ್ನು ಎತ್ತಿಕೊಳ್ಳುವವರು ಯಾರು ಇರುವುದಿಲ್ಲ ಎಲ್ಲ ಮೆಟ್ಟಿಕೊಂಡೇ ಮುಂದೆ ಸಾಗುತ್ತಾರೆ. ಒಂದು ಕಡೆ ರಾಷ್ಟ್ರಧ್ವಜಕ್ಕೆ ಅವಮಾನ ಇನ್ನೊಂದು ಕಡೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಪ್ರಕೃತಿ ನಾಶ. ಒಂದು ಕಡೆ ಭಾರತ ಮಾತೆಗೆ ಜಯಕಾರ ಇನ್ನೊಂದು ಕಡೆ ಪ್ರಕೃತಿ ಮಾತೆಗೆ ಬೇಡಿ. ಇಂತಹ ಆಚರಣೆಗಳು ಎಷ್ಟು ಸೂಕ್ತ. ಸ್ವಾತಂತ್ರ್ಯವನ್ನು ಸಂಭ್ರಮಿಸೋಣ ಆದರೆ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸೋಣ.
- ಗೀತಾ ಲಕ್ಷ್ಮೀಶ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

