ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಚೆಸ್ ಸಹಕಾರಿ: ಸತೀಶ್‍ ರೈ

Upayuktha
0


ಪುತ್ತೂರು: ಕ್ರೀಡೆಜೀವನ ಮೌಲ್ಯವನ್ನು ಹೆಚ್ಚಿಸುತ್ತದೆ.  ವಿದ್ಯಾರ್ಥಿಗಳ ಬುದ್ಧಿಶಕ್ತಿ ಬೆಳವಣಿಗೆಗೆ ಚೆಸ್‍ ಒಂದು ಉತ್ತಮ ಕ್ರೀಡೆ. ಇದು ಬದುಕಿನಲ್ಲಿ ಮನೋಸ್ಥೈರ್ಯವನ್ನು ಬೆಳೆಸುತ್ತದೆ. ಚೆಸ್‍ ಒಂದು ಐಕ್ಯತೆಯ ಕ್ರೀಡಾಕೂಟ ಎಂದು ಕಾರ್ಯಕ್ರಮದ ಉದ್ಘಾಟಕರಾದ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲ ಸತೀಶ್‍ ರೈ ಹೇಳಿದರು.


ಇವರು ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಸಂಘ ಮತ್ತು ಬಾಬ್ಬಿ ಫಿಶ್ಚರ್ಸ್‍ಚೆಸ್ ಅಸೋಸಿಯೇಷನ್ ಸುಳ್ಯ, ಕಲ್ಮಡ್ಕಇದರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಮೂರನೇ ಚೆಸ್ ಪಂದ್ಯಾವಳಿಯಲ್ಲಿ ಉದ್ಘಾಟನೆಗೈದು ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ ಚೆಸ್‍ಎಂಬುದು ಕ್ರೀಡೆಗಳ ರಾಜನಿದ್ದಂತೆ.ಇದು ನಮ್ಮ ಜೀವನಕ್ಕೆ ಬೇಕಾದ ಶಿಸ್ತನ್ನು ಕಲಿಸಿ ಕೊಡುತ್ತದೆ.ನಮ್ಮ ಪ್ರತಿಯೊಂದು ಹೆಜ್ಜೆಯನ್ನು ಚಾಕಚಕ್ಯತೆಯಿಂದ ಇಡುವ ಹಾಗೆ ಚೆಸ್ ನಮ್ಮನ್ನು ರೂಪಿಸುತ್ತದೆ. ಹಾಗೆಯೇ ಕ್ರೀಡೆಯಲ್ಲಿ ಗೆಲುವು ಎಂಬುದು ಮುಖ್ಯವಲ್ಲ ಬದಲಾಗಿ ನಮ್ಮ ಪಾಲ್ಗೊಳ್ಳುವಿಕೆ ಅಲ್ಲಿ ಪ್ರಾಮುಖ್ಯತೆ ವಹಿಸುತ್ತದೆಎಂದು ಹೇಳಿದರು.


ರಾಷ್ಟೀಯ ಚೆಸ್‍ ತೀರ್ಪುಗಾರ ಪ್ರಸನ್ನರಾವ್‍ ಕಾರ್ಯಕ್ರಮಕ್ಕೆ ಶುಭಕೋರಿದರು.


ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ.ರವಿಕಲಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್. ವಿ. ಎಸ್ ಉಪಸ್ಥಿತರಿದ್ದರು.


ಸಮಾರೋಪ ಸಮಾರಂಭ

ಬಾಬ್ಬಿ ಫಿಶರ್ಸ್‍ಚೆಸ್ ಅಸೋಸಿಯೇಷನ್, ಸುಳ್ಯ-ಕಲ್ಮಡ್ಕವು ಅನೇಕ ವರ್ಷಗಳಿಂದ ವಿವಿಧಚೆಸ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ, ಹಲವಾರು ಚೆಸ್‍ ಆಟಗಾರರಿಗೆತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತಿದೆ. ವಿವೇಕಾನಂದ ಪದವಿ ಕಾಲೇಜು ಸಹ ಇಂತಹ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಾ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ವೇದಿಕೆಯಾಗುತ್ತಿದೆಎಂದು ಬಾಬ್ಬಿ ಫಿಶರ್ಸ್‍ಚೆಸ್‍ ಅಸೋಸಿಯೇಷನ್, ಸುಳ್ಯ-ಕಲ್ಮಡ್ಕ ಇದರ ನಿರ್ದೇಶಕ  ಪಿ.ಜಿ.ಎಸ್.ಎನ್. ಪ್ರಸಾದ್‍ರಾವ್ ಸಮಾರೋಪ ಸಮಾರಂಭದ ಮುಖ್ಯಅಥಿತಿಯಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ.ಎನ್. ಮಾತನಾಡಿ, ಚೆಸ್ ಕೇವಲ ಒಂದು ದಿನದ ಆಟವಲ್ಲ, ಅದಕ್ಕೆ ನಿರಂತರ ಪರಿಶ್ರಮ, ಏಕಾಗ್ರತೆ ಹಾಗೂ ಅಭ್ಯಾಸದ ಅಗತ್ಯವಿದೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕ್ರೀಡೆಯನ್ನೂ ಮುಂದುವರಿಸಿ, ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲಿ ಎಂದು ಶುಭ ಹಾರೈಸಿದರು.


ವೇದಿಕೆಯಲ್ಲಿ ಬಾಬ್ಬಿ ಫಿಶರ್ಸ್‍ಚೆಸ್ ಅಸೋಸಿಯೇಷನ್, ಸುಳ್ಯ-ಕಲ್ಮಡ್ಕ ಇದರ ನಿರ್ದೇಶಕ ಪಿ.ಜಿ.ಎಸ್.ಎನ್. ಪ್ರಸಾದ್‍ರಾವ್ ಹಾಗೂ ರಾಷ್ಟ್ರೀಯಚೆಸ್‍ತೀರ್ಪುಗಾರ ಪ್ರಸನ್ನಅವರನ್ನು ಸನ್ಮಾನಿಸಲಾಯಿತು.


ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಮೂರನೇ ಚೆಸ್ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ವಿವೇಕಾನಂದ ಜೂನಿಯರ್‍ ಚೆಸ್ ಪಂದ್ಯಾಟದ ಫಲಿತಾಂಶ

1. 1 ರಿಂದ 3 ನೇ ತರಗತಿ ವಿಭಾಗ :

ಪ್ರಥಮ - ಓಂಕಾರ ಕಾಮತ್‍ಕೆ , ಶಾರದಾ ವಿದ್ಯಾಲಯ ಮಂಗಳೂರು

ದ್ವಿತೀಯ - ಅತ್ರೆಯರಾಮ್, ವಿದ್ಯಾದಾಯಿನಿ ಇಂಗ್ಲಿಷ್‌ ಮೀಡಿಯಂ ಸ್ಕೂಲ್, ಸುರತ್ಕಲ್

ತೃತಿಯ - ಅದ್ವೈತ್‍ಯು ಪಾಟ್ಕರ್, ವಿದ್ಯಾಧಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್

2. 4 ರಿಂದ 6 ನೇ ತರಗತಿ ವಿಭಾಗ :

ಪ್ರಥಮ - ಭವಿತ್ ಪ್ರದೀಪ್ ಶೆಟ್ಟಿ , ಪೋದಾರ್‍ ಇಂಟನ್ರ್ಯಾಷನಲ್ ಸ್ಕೂಲ್, ಮಂಗಳೂರು

ದ್ವಿತೀಯ - ವಿಪುಲ್‍ಗೌಡ , ವಿವೇಕಾನಂದ ಸೆಂಟ್ರಲ್ ಸ್ಕೂಲ್ ಪುತ್ತೂರು

ತೃತೀಯ - ಆಶಯ್. ಜಿ ಸಿ , ವಿವೇಕಾನಂದ ಸೆಂಟ್ರಲ್ ಸ್ಕೂಲ್ , ಪುತ್ತೂರು

3. 7 ರಿಂದ 9 ನೇ ತರಗತಿ ವಿಭಾಗ :

ಪ್ರಥಮ - ವಿಹಾನ್ ಶೆಟ್ಟಿ , ಪೋದಾರ್‍ ಇಂಟನ್ರ್ಯಾಷನಲ್ ಸ್ಕೂಲ್, ಮಂಗಳೂರು

ದ್ವಿತೀಯ - ಅನ್ವಿತ್ ಶೆಟ್ಟಿ. ಪೋದರ್‍ಇಂಟನ್ರ್ಯಾಷನಲ್ ಸ್ಕೂಲ್, ಮಂಗಳೂರು

ತೃತೀಯ - ಎಸ್ಆರ್ ಕೌಶಿಕ್, ಸುಧಾನ ರೆಸಿಡೆನ್ಸಿಯಲ್ ಸ್ಕೂಲ್ ,ಪುತ್ತೂರು.

4. 10 ರಿಂದ 12 ನೇ ತರಗತಿ ವಿಭಾಗ :

ಪ್ರಥಮ - ಅಭಿನವಪಿ ,ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ

ದ್ವಿತೀಯ - ರವೀಶ್‍ಕೋಟೆ, ಸೇಂಟ್ ಅಲೋಶಿಯಸ್ ಕಾಲೇಜ್ ಮಂಗಳೂರು

ತೃತೀಯ - ಬ್ರಿಜೇಶ್, ವಿವೇಕಾನಂದ ಪಿಯುಕಾಲೇಜ್, ಪುತ್ತೂರು


ಪ್ರತಿ ವಿಭಾಗದಲ್ಲಿ ಒಂದರಿಂದ 10 ಸ್ಥಾನ ಪಡೆದವರಿಗೆ ಟ್ರೋಫಿಗಳನ್ನು ನೀಡಲಾಯಿತು ಹಾಗೂ ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನವನ್ನು ನೀಡಲಾಯಿತು.ಈ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 147 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀ ಕೃಷ್ಣ ಗಣರಾಜ್ ಭಟ್‍ ಎಸ್, (ವಿಶೇಷ ಅಧಿಕಾರಿ) ಆಡಳಿತ ಮಂಡಳಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥಡಾ. ಮನಮೋಹನ್ ಎಂ, ಮತ್ತು ದೈಹಿಕ ಶಿಕ್ಷಣ  ವಿಭಾಗದ ನಿರ್ದೇಶಕ ರವಿಶಂಕರ್ ವಿ.ಎಸ್. ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಕಲಾ ವಿಭಾಗದ ವಿದ್ಯಾರ್ಥಿನಿಯರಾದ ಹೇಮಲತಾ ಸ್ವಾಗತಿಸಿ, ಕೀರ್ತಿಲತಾ ಬಿ.ಎಲ್. ವಂದಿಸಿ, ಭೂಮಿಕಾ ನಿರೂಪಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top