ವಿವೇಕಾನಂದ ಮಹಾವಿದ್ಯಾಲಯದಲ್ಲಿ ಮ್ಯಾನೇಜ್ಮೆಂಟ್‍ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

Upayuktha
0

ಪುತ್ತೂರು: ವಿದ್ಯಾಸಂಸ್ಥೆಗಳಲ್ಲಿ ವಿವಿಧ ಸಂಘಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ನಮ್ಮ ಔದ್ಯಮಿಕ ಬದುಕಿಗೆ ಸಹಕಾರಿಯಾಗುತ್ತವೆ. ಅಂತಹಾ ಸಂಘಗಳಿಗೆ ನಾವು ಕೃತಜ್ಞರಾಗಿರಬೇಕು. ಪ್ರತಿಯೊಬ್ಬರಿಗೂಸಮಾಜದಲ್ಲಿತಮ್ಮದೇಆದ ಅಸ್ತಿತ್ವವಿದೆ. ಯಶಸ್ಸಿಗೆ ಕೊನೆಯೆಂಬದಿಲ್ಲ ಹೀಗಾಗಿ ಸಮಾಜಕ್ಕೆಕೀರ್ತಿತರುವ ಸಾಧನೆಯೇ ನಿಜವಾದಯಶಸ್ಸಾಗಿರುತ್ತದೆಎಂದು ಪುತ್ತೂರುಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ವಿಭಾಗೀಯ ವ್ಯವಸ್ಥಾಪಕ ಹರಿಪ್ರಸಾದ್ ಎಂ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಪುತ್ತೂರು, ಸ್ನಾತಕೋತ್ತರಅಧ್ಯಯನ ಮತ್ತು ಸಂಶೋಧನಾಕೇಂದ್ರ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಯೋಗದಲ್ಲಿನಡೆದ 2026-27ನೇ ಶೈಕ್ಷಣಿಕ ವರ್ಷದ ಮ್ಯಾನೇಜ್ಮೆಂಟ್‍ಕ್ಲಬ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಕೆನರಾ ಬ್ಯಾಂಕಿನ ನೆಹರುನಗರ ಶಾಖೆಯ ವ್ಯವಸ್ಥಾಪಕತೇಜಕುಮಾರ್.ಕೆ ಮಾತನಾಡಿ, ಯಶಸ್ಸಿಗೆ ವಿವಿಧ ದಾರಿಗಳಿರುತ್ತವೆ. ನಮ್ಮಲ್ಲಿರುವ ಕೌಶಲ್ಯಗಳನ್ನು ನಾವು ಹೆಚ್ಚಿಸಿಕೊಳ್ಳಬೇಕು. ಜೊತೆಗೆಸ್ವಪ್ರಯತ್ನದಿಂದಯಶಸ್ಸನ್ನು ಕಂಡುಕೊಳ್ಳಬೇಕು ಎಂದುಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಸ್ನಾತಕೋತ್ತರ ವಿಭಾಗದಡೀನ್‍ಡಾ.ವಿಜಯಸರಸ್ವತಿ.ಬಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಮ್ಯಾನೇಜ್ಮೆಂಟ್‍ಕ್ಲಬ್‍ನಅಧ್ಯಕ್ಷೆಅಂತಿಮ ಎಂ.ಕಾಂ ವಿದ್ಯಾರ್ಥಿನಿ ಅನನ್ಯಾ ಹಾಗೂ ಕಾರ್ಯದರ್ಶಿ ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ಧನ್ಯಾ ನಾಯರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುಅಂತಿಮ ಎಂ.ಕಾಂ ವಿದ್ಯಾರ್ಥಿಗಳಾದದೀಕ್ಷಾ.ಕೆ ಸ್ವಾಗತಿಸಿ, ಉನ್ನತಿ ವಂದಿಸಿ, ದೀಕ್ಷಾ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top