ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ವಿದ್ಯಾಭಾರತಿ ವತಿಯಿಂದ ಮಂಗಳೂರಿನ ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಲವು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿದ್ದಾರೆ.
ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ ಹಾರಾಡಿಯ ಮಧುಸೂದನ್ ಸಾಲೆ ಮತ್ತು ವಿನುತಾ ಎಂ. ಸಾಲೆ ದಂಪತಿಯ ಪುತ ್ರ10ನೇ ತರಗತಿಯ ಅನಿತೇಜ್ ಮಧುಸೂದನ್ ಸಾಲೆ 800 ಮೀಟರ್ ಫ್ರೀ ಸ್ಟೈಲ್, 200 ಮೀಟರ್ ಬ್ಯಾಕ್ ಸ್ಟ್ರೋಕ್ ಹಾಗೂ 100 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಪರ್ಲಡ್ಕದ ಉಮಾಶಂಕರ್ ನಾಯಕ್ ಕೆ. ಮತ್ತು ರಶ್ಮಿ ದಂಪತಿಯ ಪುತ್ರ 10ನೇ ತರಗತಿಯ ಲಲನ್ ಯು. ನಾಯಕ್ 100 ಮೀಟರ್ ಬ್ಯಾಕ್ ಸ್ಟ್ರೋಕ್ ಹಾಗೂ 400 ಮೀಟರ್ ಫ್ರೀ ಸ್ಟೈಲ್‍ನಲ್ಲಿ ಬೆಳ್ಳಿ ಪದಕ ಮತ್ತು 200 ಮೀಟರ್ ಫ್ರೀ ಸ್ಟೈಲ್‍ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಪುತ್ತೂರಿನ ರವಿಕುಮಾರ್ ಕೊಠಾರಿ ಮತ್ತು ಕೊಠಾರಿ ಲಕ್ಷ್ಮೀ ಬೆನ್ ರವಿಕುಮಾರ್ ದಂಪತಿಯ ಪುತ್ರಿ 10ನೇ ತರಗತಿಯ ಮೆಹೆಕ್ ರವಿಕುಮಾರ್ ಕೊಠಾರಿ 100 ಮೀಟರ್ ಬ್ಯಾಕ್ ಸ್ಟ್ರೋಕ್ ಹಾಗೂ 200 ಮೀಟರ್ ಬ್ಯಾಕ್ ಸ್ಟ್ರೋಕ್‍ನಲ್ಲಿ ಚಿನ್ನದ ಪದಕ ಮತ್ತು 50 ಮೀಟರ್ ಬಟರ್‍ಫ್ಲೈಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ದರ್ಬೆಯ ಪ್ರಸನ್ನ ಕುಮಾರ್ ಶೆಟ್ಟಿ ಮತ್ತು ಪ್ರತಿಮಾ ದಂಪತಿಯ ಪುತ್ರಿ 8ನೇ ತರಗತಿಯ ರೀಶಾ ಪಿ. ಶೆಟ್ಟಿ 100 ಮೀಟರ್ ಫ್ರೀ ಸ್ಟೈಲ್ ಹಾಗೂ 200 ಮೀಟರ್ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ ಮತ್ತು 50 ಮೀಟರ್ ಬಟರ್‍ಫ್ಲೈಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಬಾಲ ವರ್ಗದ ಬಾಲಕರ ವಿಭಾಗದಲ್ಲಿ ಪರ್ಲಡ್ಕದ ಸತ್ಯನಾರಾಯಣ ಮತ್ತು ಲತಾ ಕೆ. ದಂಪತಿಯ ಪುತ್ರ 8ನೇ ತರಗತಿಯ ಪ್ರತ್ಯುμï ಎಲ್. ಎಸ್. ಗೌಡ 50 ಮೀಟರ್ ಬಟರ್‍ಫ್ಲೈ, 50 ಮೀಟರ್ ಬ್ಯಾಕ್ ಸ್ಟ್ರೋಕ್, 100 ಮೀಟರ್ ಬ್ಯಾಕ್ ಸ್ಟ್ರೋಕ್, 4x100ಮೀಟರ್ ಫ್ರೀ ಸ್ಟೈಲ್ ರಿಲೇ ಹಾಗೂ 4x100 ಮೀಟರ್ ಐ.ಎಂ. ರಿಲೇಯಲ್ಲಿಯೂ ಚಿನ್ನದ ಪದಕ ಪಡೆದಿದ್ದಾರೆ. ಉಲಾರ್ಂಡಿಯ ಮಹೇಶ್ ಜಿ. ಮತ್ತು ಸುಕನ್ಯಾ ಕೆ. ದಂಪತಿಯ ಪುತ್ರ 8ನೇ ತರಗತಿಯ ದೀಪಾಂಶ್ ಶೆಟ್ಟಿ 50 ಮೀಟರ್ ಫ್ರೀ ಸ್ಟೈಲ್, 100 ಮೀಟರ್ ಫ್ರೀ ಸ್ಟೈಲ್, 4x100 ಮೀಟರ್ ಫ್ರೀ ಸ್ಟೈಲ್ ರಿಲೇ ಹಾಗೂ 4x100 ಮೀಟರ್ ಐ.ಎಂ. ರಿಲೇಯಲ್ಲಿಯೂ ಚಿನ್ನದ ಪದಕ ಮತ್ತು 200 ಮೀಟರ್ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಸಾಮೆತಡ್ಕ ಜಯರಾಮ ಕೆ.ಟಿ. ಮತ್ತು ಸ್ವಾತಿ ಜಯರಾಮ್ ದಂಪತಿಯ ಪುತ್ರ 6ನೇ ತರಗತಿಯ ಶ್ರೀಹಾನ್ ಗೌಡ ಕೆ.ಜೆ 4x100 ಮೀಟರ್ ಫ್ರೀ ಸ್ಟೈಲ್ ರಿಲೇ, 200 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕ, 100 ಮೀಟರ್ ಬಟರ್‍ಫ್ಲೈಯಲ್ಲಿ ಬೆಳ್ಳಿ ಪದಕ ಹಾಗೂ 400 ಮೀಟರ್ ಫ್ರೀ ಸ್ಟೈಲ್ ನಲ್ಲಿ ಹಾಗೂ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಮೊಟ್ಟೆತಡ್ಕ ನಾಗೇಶ್ ಮತ್ತು ಹೇಮಲತಾ ದಂಪತಿಯ ಪುತ್ರ 6ನೇ ತರಗತಿಯ ದೈವಿಕ್ ದೇವಾಡಿಗ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಹಾಗೂ 50 ಮೀಟರ್ ಬಟರ್‍ಫ್ಲೈಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
ಪುತ್ತೂರಿನ ರವಿಕುಮಾರ್ ಕೊಠಾರಿ ಮತ್ತು ಕೊಠಾರಿ ಲಕ್ಷ್ಮೀ ಬೆನ್ ರವಿಕುಮಾರ್ ದಂಪತಿಯ ಪುತ್ರ 6ನೇ ತರಗತಿಯ ವಿಹಾನ್ ರವಿಕುಮಾರ್ ಕೊಠಾರಿ 4x100 ಮೀಟರ್ ಐ.ಎಂ. ರಿಲೇಯಲ್ಲಿ ಚಿನ್ನದ ಪದಕ ಮತ್ತು 100 ಮೀಟರ್ ಬ್ಯಾಕ್‍ಸ್ಟ್ರೋಕ್ ಹಾಗೂ 200 ಮೀಟರ್ ಐ.ಎಂ.ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಸಾಮೆತಡ್ಕದ ಸಂತೋಷ ಮತ್ತು ಪವಿತ್ರಾ ಕೆ ದಂಪತಿಯ ಪುತ್ರ 6ನೇ ತರಗತಿಯ ನಿಶಾನ್ ಎಸ್ 4x100 ಮೀಟರ್ ಐ.ಎಂ. ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


