ಬಳಸಿದ ಅಡುಗೆ ಎಣ್ಣೆಯಿಂದ ಜೈವಿಕ ಡೀಸೆಲ್: ಎಂ11 ಎನರ್ಜಿ‌ಗೆ ರಫ್ತು ಪ್ರಶಸ್ತಿ

Upayuktha
0

ಮಂಗಳೂರು: ಬಳಸಿದ ಅಡುಗೆ ಎಣ್ಣೆಯನ್ನು ಜೈವಿಕ ಡೀಸೆಲ್ ಆಗಿ ಪರಿವರ್ತಿಸುವ 'ಎಂ11 ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್' 2025-26ನೇ ಸಾಲಿಗೆ ಜೈವಿಕ ಇಂಧನ ರಫ್ತಿನಲ್ಲಿ ಅಗ್ರಸ್ಥಾನ ಪಡೆದ ಕಂಪನಿಯಾಗಿ ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಎ (ಎನ್‍ಎಂಪಿಎ) ಮನ್ನಣೆ ಪಡೆದಿದೆ.


ಪಡುಬಿದ್ರಿಯಲ್ಲಿ ಸಮಗ್ರ ಬಯೋಡೀಸೆಲ್ (ಜೈವಿಕ ಡೀಸೆಲ್) ಘಟಕವನ್ನು ಹೊಂದಿರುವ ಕಂಪನಿ ಜೈವಿಕ ಇಂಧನ ರಫ್ತು ವಲಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಮನ್ನಣೆ ನೀಡಲಾಗಿದೆ. ನವೀಕರಿಸಬಹುದಾದ ಇಂಧನ, ಉತ್ಪಾದನೆ ಮತ್ತು ಸ್ವಚ್ಛ-ಇಂಧನ ಪೂರೈಕೆ ಸರಪಳಿಗಳಿಗೆ ಕರಾವಳಿ ಕರ್ನಾಟಕವು ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿಯೇ ಈ ಗೌರವ ಲಭಿಸಿದೆ ಎಂದು ನಿರ್ದೇಶಕ ಮನ್ನನ್ ಖಾನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಈ ವಿನೂತನ ಘಟಕವು ತ್ಯಾಜ್ಯ ಸಂಪನ್ಮೂಲವನ್ನು ಪರ್ಯಾಯ ಇಂಧನವಾಗಿ ಪರಿವರ್ತಿಸುವ 'ವರ್ತುಲ ಆರ್ಥಿಕತೆ' ಮಾದರಿಯನ್ನು ಬೆಂಬಲಿಸುತ್ತದೆ. ಈ ಘಟಕ ನವ ಮಂಗಳೂರು ಬಂದರಿಗೆ ಹತ್ತಿರದ್ದು, ಆಮದು ಮತ್ತು ರಫ್ತು ಚಟುವಟಿಕೆಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ. ಇದು ಕೇವಲ ನಮ್ಮ ರಫ್ತು ಸಾಧನೆಗೆ ಸಿಕ್ಕ ಮನ್ನಣೆಯಲ್ಲ, ಬದಲಾಗಿ ಭಾರತದ ಸ್ವಚ್ಛ- ಇಂಧನ ಪರಿವರ್ತನೆಯ ಕೇಂದ್ರವಾಗಿ ಕರಾವಳಿ ಕರ್ನಾಟಕದ ಬೆಳೆಯುತ್ತಿರುವ ಸಾಮರ್ಥ್ಯಕ್ಕೂ ಸಿಕ್ಕ ಮನ್ನಣೆ. ತ್ಯಾಜ್ಯ ನಿರ್ವಹಣೆ, ನವೀಕರಿಸಬಹುದಾದ ಇಂಧನಗಳು, ಕೈಗಾರಿಕೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ಬೆಸೆಯುವಂತಹ ಜವಾಬ್ದಾರಿಯುತ ಮತ್ತು ವಿಸ್ತರಣಾ ಯೋಗ್ಯ ಜೈವಿಕ ಇಂಧನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಕಂಪನಿಯ ಪ್ರಯತ್ನಕ್ಕೆ ಸಂದ ಗೌರವವಾಗಿದೆ ಎಂದು ವಿವರಿಸಿದ್ದಾರೆ.


ಕಂಪನಿಯ ಜೈವಿಕ ಇಂಧನ ಮಾದರಿಯು ಬಳಸಿದ ಅಡುಗೆ ಎಣ್ಣೆಯ ಜವಾಬ್ದಾರಿಯುತ ಸಂಗ್ರಹಣೆ ಮತ್ತು ಸಂಸ್ಕರಣೆಯ ಮೇಲೆ ಕೇಂದ್ರೀಕೃತವಾಗಿದೆ, ಇದು ತ್ಯಾಜ್ಯ ತೈಲವನ್ನು ಆಹಾರ ಸರಪಳಿಯಲ್ಲಿ ಅನುಚಿತವಾಗಿ ಮರುಬಳಕೆ ಮಾಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಜೈವಿಕ ಡೀಸೆಲ್ ಉತ್ಪಾದನೆಗೆ ನವೀಕರಿಸಬಹುದಾದ ಫೀಡ್‍ಸ್ಟಾಕ್ ಸೃಷಿಸುತ್ತದೆ ಎಂದು ಹೇಳಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top