ದುಬೈ: ಯುಎಇ ಮೂಲದ 'ತುಂಬೆ ಗ್ರೂಪ್' ನ ಪ್ರಸಾರ ಮತ್ತು ಪ್ರಕಾಶನ ಸಂಸ್ಥೆಯಾದ 'ತುಂಬೈ ಮೀಡಿಯಾ', ಪ್ರಾದೇಶಿಕ ಶಿಕ್ಷಣ ಕ್ಷೇತ್ರದ ಬೆಳವಣಿಗೆಯನ್ನು ಬಿಂಬಿಸುವ ‘ಗಲ್ಫ್ ಎಜುಕೇಶನ್’ (Gulf Education) ಎಂಬ ನೂತನ ಮುದ್ರಣ ಹಾಗೂ ಡಿಜಿಟಲ್ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಸಂಸ್ಥೆಯ ಕಾರ್ಯತಂತ್ರದ ವಿಸ್ತರಣೆಯಲ್ಲಿ ಈ ಹೆಜ್ಜೆ ಪ್ರಮುಖ ಮೈಲಿಗಲ್ಲಾಗಿದ್ದು, ಇದರೊಂದಿಗೆ ತುಂಬೈ ಮೀಡಿಯಾದ ಪ್ರಕಾಶನ ಪೋರ್ಟ್‌ಫೋಲಿಯೋ ಒಟ್ಟು ಐದು ಶೀರ್ಷಿಕೆಗಳಿಗೆ ಏರಿಕೆಯಾಗಿದೆ. ಆರೋಗ್ಯ, ಜೀವನಶೈಲಿ, ಶಿಕ್ಷಣ, ಪಶುವೈದ್ಯಕೀಯ ಆರೈಕೆ ಮತ್ತು ಅತಿಥಿಸತ್ಕಾರ (Hospitality) ಕ್ಷೇತ್ರಗಳನ್ನು ಈ ಪತ್ರಿಕೆಗಳು ಒಳಗೊಂಡಿವೆ.
ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರಕ್ಕೆ ಹೊಸ ಸ್ಪಂದನೆ
ಕೃತಕ ಬುದ್ಧಿಮತ್ತೆ (AI), ತಂತ್ರಜ್ಞಾನದ ಬಳಕೆ, ಉದ್ಯೋಗ ಮಾರುಕಟ್ಟೆಯ ಹೊಸ ಅಗತ್ಯಗಳು ಮತ್ತು ಮೂಲಸೌಕರ್ಯ ಹೂಡಿಕೆಗಳ ಕಾರಣದಿಂದಾಗಿ ಗಲ್ಫ್ ಪ್ರದೇಶದ ಶಿಕ್ಷಣ ಕ್ಷೇತ್ರವು ವೇಗವಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಗಲ್ಫ್ ಎಜುಕೇಶನ್’ ಪತ್ರಿಕೆಯು ಬಿಡುಗಡೆಯಾಗಿದೆ.
ಈ ನೂತನ ಪತ್ರಿಕೆಯು ಶಿಕ್ಷಣ ನೀತಿ ನಿರೂಪಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಬೆಸೆಯುವ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ತರಗತಿಗಳ ನಾವೀನ್ಯತೆ, ಭವಿಷ್ಯದ ಕೌಶಲ್ಯಗಳು, ಕ್ಯಾಂಪಸ್ ಜೀವನ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಮತ್ತು ಜಾಗತಿಕ ಶಿಕ್ಷಣದ ಟ್ರೆಂಡ್‌ಗಳನ್ನು ಇದು ಪ್ರಾದೇಶಿಕ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಲಿದೆ.
ಈ ಬಿಡುಗಡೆಯ ಕುರಿತು ಮಾತನಾಡಿದ ತುಂಬೈ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೈ ಮೊಹಿದ್ದೀನ್, "ಗಲ್ಫ್ ಪ್ರದೇಶವು ಜಗತ್ತಿನ ಅತ್ಯಂತ ಕ್ರಿಯಾಶೀಲ ಶಿಕ್ಷಣ ಕ್ಷೇತ್ರಗಳಲ್ಲಿ ಒಂದಾಗಿದೆ. ಇಂದಿನ ಶಿಕ್ಷಣ ಕ್ಷೇತ್ರವನ್ನು ರೂಪಿಸುತ್ತಿರುವ ವಿಚಾರಗಳು ಮತ್ತು ಬೆಳವಣಿಗೆಗಳನ್ನು ಒಂದೇ ವೇದಿಕೆಯಲ್ಲಿ ತರಬಲ್ಲ ಹೊಸ ಧ್ವನಿಯ ಅಗತ್ಯ ನಮಗಿತ್ತು. 'ಗಲ್ಫ್ ಎಜುಕೇಶನ್' ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಉಪಯುಕ್ತ ಹಾಗೂ ಭವಿಷ್ಯದ ದೃಷ್ಟಿಕೋನವಿರುವ ವೇದಿಕೆಯನ್ನು ನಿರ್ಮಿಸುವುದು ನಮ್ಮ ಉದ್ದೇಶ," ಎಂದು ತಿಳಿಸಿದರು.
ಐದು ನಿಯತಕಾಲಿಕಗಳ ಶಕ್ತಿ
ಉತ್ತರ ಎಮಿರೆಟ್ಸ್ ಮೂಲದ ತುಂಬೈ ಮೀಡಿಯಾ, ಕಳೆದ ಎರಡು ದಶಕಗಳಲ್ಲಿ ಒಂದೇ ಒಂದು ಆರೋಗ್ಯ ನಿಯತಕಾಲಿಕದಿಂದ ಆರಂಭವಾಗಿ ಇಂದು ವೈವಿಧ್ಯಮಯ ಮಾಧ್ಯಮ ಸಂಸ್ಥೆಯಾಗಿ ಬೆಳೆದಿದೆ. 'ಗಲ್ಫ್ ಎಜುಕೇಶನ್' ಸೇರ್ಪಡೆಯೊಂದಿಗೆ ಸಂಸ್ಥೆಯ ಐದು ಪ್ರಮುಖ ಪತ್ರಿಕೆಗಳ ಪಟ್ಟಿ ಇಲ್ಲಿದೆ:
ಹೆಲ್ತ್ ಮ್ಯಾಗಝಿನ್ (Health Magazine): ಆರೋಗ್ಯ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಕಟವಾಗುತ್ತಿರುವ ಸಂಸ್ಥೆಯ ಪ್ರಮುಖ ಪತ್ರಿಕೆ.
ಲಿವಿಂಗ್ ಗಲ್ಫ್ (Living Gulf): ಇತ್ತೀಚೆಗೆ ಪ್ರಾರಂಭಿಸಲಾದ ಜೀವನಶೈಲಿ, ಸಂಸ್ಕೃತಿ ಮತ್ತು ಉದ್ಯಮ ಕ್ಷೇತ್ರದ ನಿಯತಕಾಲಿಕ.
ಗಲ್ಫ್ ಎಜುಕೇಶನ್ (Gulf Education): ಶಾಲಾ-ಕಾಲೇಜು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಮುಡಿಪಾದ ಹೊಸ ಪತ್ರಿಕೆ.
ಗಲ್ಫ್ ಪೆಟ್ಸ್ & ವೆಟ್ಸ್ (Gulf Pets & Vets): ಪಶುವೈದ್ಯಕೀಯ ವಿಜ್ಞಾನ, ಪ್ರಾಣಿಗಳ ಆರೋಗ್ಯ ಮತ್ತು ಸಾಕುಪ್ರಾಣಿಗಳ ಆರೈಕೆಯ ಕುರಿತು ಶೀಘ್ರದಲ್ಲೇ ಬರಲಿರುವ ಪತ್ರಿಕೆ.
ಗಲ್ಫ್ ಕಲಿನರಿ & ಹಾಸ್ಪಿಟಾಲಿಟಿ (Gulf Culinary & Hospitality): ಆಹಾರ ಸಂಸ್ಕೃತಿ, ಹೋಟೆಲ್ ಮತ್ತು ಅತಿಥಿಸತ್ಕಾರ ಕ್ಷೇತ್ರವನ್ನು ಆಧರಿಸಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಶೀರ್ಷಿಕೆ.
ಡಿಜಿಟಲ್ ಹಾಗೂ ಸಮಗ್ರ ಮಾಧ್ಯಮ ಸೇವೆ
‘ಗಲ್ಫ್ ಎಜುಕೇಶನ್’ ಪತ್ರಿಕೆಯು ಮುದ್ರಣ ರೂಪದ ಜೊತೆಗೆ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕವೂ ಲಭ್ಯವಿರಲಿದೆ.
ಪತ್ರಿಕಾ ಪ್ರಕಟಣೆಯಷ್ಟೇ ಅಲ್ಲದೆ, ಗಲ್ಫ್ ಪ್ರದೇಶದಾದ್ಯಂತ ಸಾರ್ವಜನಿಕ ಸಂಪರ್ಕ (PR), ಬ್ರ್ಯಾಂಡಿಂಗ್, ಸಾಮಾಜಿಕ ಮಾಧ್ಯಮ ನಿರ್ವಹಣೆ, ಪದವಿ ಪ್ರದಾನ ಸಮಾರಂಭಗಳು ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭಗಳ ಸಂಘಟನೆಯಂತಹ ಸಮಗ್ರ ಮಾಧ್ಯಮ ಸೇವೆಗಳನ್ನು ತುಂಬೈ ಮೀಡಿಯಾ ಒದಗಿಸುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


