ತೆರ್ನಮಕ್ಕಿಯಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣದ ಲೋಕಾರ್ಪಣೆ

Upayuktha
0

ಭಟ್ಕಳ : ತಾಲೂಕಿನ ಕಾಯ್ಕಿಣಿ ಗ್ರಾಮದ ತೆರ್ನಮಕ್ಕಿಯಲ್ಲಿ  ಜೈನ ಜಟಕೇಶ್ವರ ಯುವಕ ಮಂಡಲದ ವತಿಯಿಂದ ಸಾರ್ವಜನಿಕ ಸಹಕಾರದೊಂದಿಗೆ 80ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಒಂದು ನೂತನ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಇಂದು ಲೋಕಾರ್ಪಣೆ ಗೊಳಿಸಲಾಯಿತು.


ಇಂದು ಬೆಳಿಗ್ಗೆ 11 ಗಂಟೆಗ ಹಳೆಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರರಾದ ಸುಬ್ರಾಯ್ ಜಟ್ಟ ನಾಯ್ಕ  ರವರು ಉಪಸ್ಥಿತ ಗಣ್ಯರೊಂದಿಗೆ ಸೇರಿ ವಿದ್ಯುಕ್ತವಾಗಿ ಉದ್ಘಾಟನೆ ಮಾಡಿ ತಮ್ಮ ಊರಿನ  ಯುವಕ ಮಂಡಲದ ಬಗ್ಗೆ ಮೆಚ್ಚುಗೆಯ ಮಾತನಾಡಿ ಅವರ ಸೇವಾಕಾರ್ಯವನ್ನು ಕೊಂಡಾಡಿದರು.

ಹಾಗೂ ಮುಂದಿನ ದಿನಗಳಲ್ಲಿ ಯುವಕಮಂಡಲದಿಂದ ಇನ್ನಷ್ಟು ಉಪಯುಕ್ತ ಸೇವಾ ಕಾರ್ಯಗಳು ಮೂಡಿ ಬರಲಿ ಎಂದು ಹಾರೈಸಿದರು.


ಅತಿಥಿಗಳಾದ ಎ.ಎನ್ ಶೆಟ್ಟಿ ಹಾಗೂ ತಾಲೂಕ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ರಾಜು ಎಂ ನಾಯ್ಕ ಕಾಟಿಕಲ್ ರವರು ಶುಭ ಹಾರೈಸಿದರು .

ಯುವಕ ಮಂಡಲದ ಅಧ್ಯಕ್ಷರಾದ ನಾಗೇಶ್  ಮಂಜುನಾಥ್ ನಾಯ್ಕ ಮತ್ತು ಇವರ ತಂಡ ಅತ್ಯಂತ ಕ್ರಿಯಾಶೀಲ ಯುವಬಳಗ 

ಯಾಕೆಂದರೆ ಇವರ ಮುಂದಾಳತ್ವದಲ್ಲಿ ಕಳೆದ ಹತ್ತು ವರ್ಷಗಳಿಂದ ಹಲವಾರು ಸಾರ್ವಜನಿಕ ಸೇವಾ ಕಾರ್ಯವನ್ನು ಮಾಡುತ್ತಾ ನಮ್ಮ ತಾಲೂಕಿನಲ್ಲಿಯೇ ಅತ್ಯುತ್ತಮ ಯುವಕ ಮಂಡಲವೆಂದು ಎಲ್ಲರ ಶ್ಲಾಘನೆಗೆ ಕಾರಣವಾಗಿದೆ.


ಕಳೆದ ಮೂರು ತಿಂಗಳ ಹಿಂದೆ

ಯಷ್ಟೇ ತೆರ್ನಮಕ್ಕಿಯ ಸಭಾತಿಯಲ್ಲಿ ಜೈನ ಜಟಕೇಶ್ವರ ದೇವಸ್ಥಾನದ ಜೀಣೊ೯ದ್ದಾರ  ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿದ ಕೀರ್ತಿ ಈ ಬಳಗಕ್ಕೆ ಸಲ್ಲುತ್ತದೆ


ರಾಷ್ಟ್ರೀಯ ಹೆದ್ದಾರಿ ಚತುಷ್ಪತ  ಆದ ಮೇಲೆ ಪ್ರಯಾಣಿಕರಿಗೆ ತೆರನಮಕ್ಕಿ ಭಾಗದಲ್ಲಿ ಮಳೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಒಂದು ಬಸ್ಸು ತಂಗುದಾಣ ತೀರಾ ಅವಶ್ಯಕತೆ ಇತ್ತು ...ಇದನ್ನು  ಮನಗಂಡ ಯುವಕ ಮಂಡಲವು ಈ ಒಂದು ಕಾರ್ಯವನ್ನು ಕೈಗೊಂಡು.


ಅತ್ಯಂತ ಕಡಿಮೆ ಅವಧಿಯಲ್ಲಿ ಸಾರ್ವಜನಿಕ ಬಳಕೆಗೆ ಬೇಕಾದ ಈ ಒಂದು ಪ್ರಯಾಣಿಕರ ತಂಗುದಾಣವನ್ನು ಕೇವಲ 20 ರಿಂದ 25 ದಿನಗಳ ಅವಧಿಯಲ್ಲಿ ಅತ್ಯಂತ ಸುಂದರವಾಗಿ  ಸದೃಢವಾಗಿ ನಿರ್ಮಿಸಿಕೊಟ್ಟಿರುತ್ತಾರೆ.


ಉದ್ಘಾಟನೆಯ ಸಮಯದಲ್ಲಿ ಹಲವಾರು ಊರಿನ ಗಣ್ಯರು ನಾಗರಿಕರು ಹಾಜರಿದ್ದು ಯುವಕಮಂಡಲದ ಕಾರ್ಯವನ್ನು ಶ್ಲಾಘಿಸಿ ಅದರ ಅಧ್ಯಕ್ಷರಾದ ನಾಗೇಶ್ ನಾಯ್ಕ ರವರನ್ನು ಅಭಿನಂಧಿಸಿ ಆತ್ಮೀಯವಾಗಿ ಸನ್ಮಾನಿಸಿದರು.


ಕಾರ್ಯಕ್ರಮದಲ್ಲಿ ಯುವಕ ಮಂಡಲ ಎಲ್ಲ ಸದಸ್ಯರು ಹಾಜರಿದ್ದು ಸಹಕರಿದರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ಮತ್ತು ಉಪಹಾರವನ್ನು ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top