ಸುರತ್ಕಲ್: ವಿವೇಕಾನಂದ ಗ್ರಂಥಾಲಯದ ನವೀಕೃತ ವಾಚನಾಲಯ ಉದ್ಘಾಟನೆ

Upayuktha
0

ಸಾಮುದಾಯಿಕ ಗ್ರಂಥಾಲಯಗಳ ಪರಿಕಲ್ಪನೆ ಅಗತ್ಯ: ಸಾಹಿತಿ ರಘುರಾಮ ರಾವ್ ಬೈಕಂಪಾಡಿ




ಸುರತ್ಕಲ್: "ಉತ್ತಮ ಪುಸ್ತಕಗಳ ಓದು ಸುಸಂಸ್ಕೃತ ವ್ಯಕ್ತಿತ್ವವನ್ನು ರೂಪಿಸುವ ಕಾರ್ಯವನ್ನು ಮಾಡುತ್ತದೆ. ಹೀಗಾಗಿ ಯುವಜನರಲ್ಲಿ ಓದಿನ ಹವ್ಯಾಸವನ್ನು ಹೆಚ್ಚಿಸುವ ಅಗತ್ಯವಿದ್ದು, ಸಾಮುದಾಯಿಕ ಗ್ರಂಥಾಲಯಗಳ ಪರಿಕಲ್ಪನೆ ಮೂಡಿಬರಬೇಕು" ಎಂದು ಹಿರಿಯ ಸಾಹಿತಿ ರಘುರಾಮ ರಾವ್ ಬೈಕಂಪಾಡಿ ಅವರು ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಗ್ರಂಥಾಲಯದ ನವೀಕರಣಗೊಂಡಿರುವ ವಾಚನಾಲಯ ಹಾಗೂ ಗ್ರಂಥ ಸಂಗ್ರಹ ವಿಭಾಗಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಗ್ರಂಥಾಲಯ ಸಮಿತಿಯ ಸದಸ್ಯ ಡಾ. ರಾಜಮೋಹನ ರಾವ್ ಮಾತನಾಡಿ, "ಓದುಗರಿಗೆ ಉತ್ತಮ ಪುಸ್ತಕಗಳು ಸುಲಭವಾಗಿ ಲಭ್ಯವಾಗಬೇಕು ಎನ್ನುವ ಉದಾತ್ತ ಉದ್ದೇಶದಿಂದ ಸುರತ್ಕಲ್ ರೋಟರಿ ಕ್ಲಬ್, ನಾಗರಿಕ ಸಲಹಾ ಸಮಿತಿ, ಹೊಸಬೆಟ್ಟು ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಸುರತ್ಕಲ್ ಇನ್ನರ್ ವೀಲ್ ಕ್ಲಬ್ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಗ್ರಂಥಾಲಯವನ್ನು ನವೀಕರಿಸಿ ಲೋಕಾರ್ಪಣೆಗೊಳಿಸಲಾಗಿದೆ" ಎಂದು ಮಾಹಿತಿ ನೀಡಿದರು.


ರೋಟರಿಯನ್ ಶ್ರೀನಿವಾಸ ರಾವ್ ಪಿ. ಅವರು ಮಾತನಾಡಿ, ಜ್ಞಾನದ ಹಂಚುವಿಕೆ ಮತ್ತು ಪ್ರಸಾರಕ್ಕೆ ಗ್ರಂಥಾಲಯಗಳು ಅತ್ಯಂತ ಸಹಕಾರಿಯಾಗಿವೆ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಗ್ರಂಥಾಲಯ ಸಮಿತಿಯ ಅಧ್ಯಕ್ಷ ಗೋಪಾಲ ಕೃಷ್ಣ ರಾವ್ ಇಡ್ಯಾ ಅವರು ಮಾತನಾಡಿ, "ಸಾಮಾಜಿಕ ಸೇವಾ ಶ್ರದ್ಧೆಯ ನೆಲೆಯಲ್ಲಿ ಈ ಗ್ರಂಥಾಲಯವನ್ನು ರೂಪಿಸಲಾಗಿದೆ. ಪತ್ರಿಕೆ ಮತ್ತು ಪುಸ್ತಕಗಳ ವಾಚನಾಭಿರುಚಿಯನ್ನು ವರ್ಧಿಸುವ ನಿಟ್ಟಿನಲ್ಲಿ ಸಂಘಟಿತ ಕಾರ್ಯಗಳು ನಡೆಯಬೇಕಾದ ಅಗತ್ಯವಿದೆ" ಎಂದು ಅಭಿಪ್ರಾಯಪಟ್ಟರು.


ಗ್ರಂಥಾಲಯ ಸಮಿತಿಯ ಸದಸ್ಯ ಪ್ರೊ. ಕೃಷ್ಣಮೂರ್ತಿ ಸ್ವಾಗತಿಸಿದರು. ರಮೇಶ್ ರಾವ್ ಮಧ್ಯ ಪ್ರಾರ್ಥನೆ ನೆರವೇರಿಸಿದರೆ, ಸತೀಶ್ ಸದಾನಂದ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top