ಸಂತ ಫಿಲೋಮಿನ ಕಾಲೇಜಿನಲ್ಲಿ “ಕಮ್ಯುನಿಕೇಟ್ ಟು ಕನೆಕ್ಟ್, ಕನೆಕ್ಟ್ ಟು ಸಕ್ಸೀಡ್” ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

Upayuktha
0



ಪುತ್ತೂರು: ಸಂತ ಫಿಲೋಮಿನ (ಸ್ವಾಯತ್ತ) ಕಾಲೇಜಿನ ಇಂಗ್ಲಿಷ್ ವಿಭಾಗ, ಐಕ್ಯೂಎಸಿ ಹಾಗೂ ಇನ್‌ಸ್ಟಿಟ್ಯೂಷನ್ಸ್‌ ಇನೋವೇಶನ್ ಕೌನ್ಸಿಲ್ ವತಿಯಿಂದ “ಕಮ್ಯುನಿಕೇಟ್ ಟು ಕನೆಕ್ಟ್, ಕನೆಕ್ಟ್ ಟು ಸಕ್ಸೀಡ್” ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಕಾಲೇಜಿನ ಸ್ಪಂದನ ಸೆಮಿನಾರ್ ಹಾಲ್ ನಲ್ಲಿ ಗುರುವಾರ ಆಯೋಜಿಸಲಾಗಿತ್ತು ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ರೆ. ಡಾ ಆಂಟನಿ ಪ್ರಕಾಶ್ ಮೊಂತೇರೋ ಅವಕಾಶ ಸಿಕ್ಕಾಗ ಮೌನವಾಗಿ ಇರಬಾರದು. ಸಂವಹನವೇ ಶಕ್ತಿಯುತ ಸಂಪರ್ಕದ ಕೀಲಿ. ಒಂದು ಮಾತು ತಂಡವನ್ನು ಕಟ್ಟಬಹುದು, ಒಂದು ಸಮುದಾಯವನ್ನು ಬೆಸೆಯಬಹುದು ಎಂದು ಅಭಿಪ್ರಾಯಪಟ್ಟರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಅವರು ಮಾತಿನ ಮೂಲಕ ಪ್ರೇರಣೆ ನೀಡುವವರು ಜನರನ್ನು ಸಂಪರ್ಕಿಸುತ್ತಾರೆ ಎಂದು ಹೇಳಿದರು. ಕೈಯಿಂದ ಮಾಡುವ ಕೆಲಸವೇ ಪ್ರಗತಿಯ ಮೂಲ. ಅದರೊಂದಿಗೆ ಮಾತಿನಿಂದ ಪ್ರೋತ್ಸಾಹ ನೀಡಿದಾಗ ಮಾತ್ರ ಸಮಾಜ ಒಗ್ಗೂಡುತ್ತದೆ ದುಡಿದು ಸಾಧಿಸಿ, ಮಾತಾಡಿ ಒಗ್ಗೂಡಿಸಿ ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಧೆಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಭಾರತಿ ಎಸ್ ರೈ ಹಾಗೂ ಐಕ್ಯೂಎಸಿ ಸಂಯೋಜಕ ಡಾ ಎದ್ವಿನ್ ಡಿಸೋಜಾ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ ವಿಜಯ್ ಕುಮಾರ್ ಮೊಳೆಯಾರ್, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನೋವೇಲಿನ್ ಡಿಸೋಜಾ, ಸುಷ್ಮ ಕ್ರಾಸ್ತ, ವಿನಿಲ್ ಡಿಸೋಜಾ, ಎಕನಾಮಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಾಸುದೇವ ಏನ್ ಉಪಸ್ಥಿತರಿದ್ದರು. ಸನ್ನಿಧಿ ಮತ್ತು ತಂಡ ಪ್ರಾರ್ಥಿಸಿ, ಶುಭಾನ್ ಶೇನೋಯ್ ಸ್ವಾಗತಿಸಿದರು. ಕೃಷ್ಣ ವಂಶಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.


ಆದಿತ್ಯ ಕುಡ್ವ ವಂದಿಸಿದರು. ಮೋನಿಷಾ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top