ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಂದ ಕುಂಕುಮಾರ್ಚನೆ

Upayuktha
0


ಪುತ್ತೂರು, ಆ. 21: ಶ್ರಾವಣ ಮಾಸದ ಶುಕ್ರವಾರ ಹಾಗೂ ಪವಿತ್ರ ವರಮಹಾಲಕ್ಷ್ಮೀ ವ್ರತದ ಪ್ರಯುಕ್ತ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳು 3ನೇ ಶುಕ್ರವಾರ ನಡೆಯುವ  ಲಲಿತಾ ಸಹಸ್ರನಾಮ ಪಠಣದೊಂದಿಗೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ವಿಶೇಷ ರೀತಿಯಲ್ಲಿ  ನಡೆಯಿತು.


ಸುಮಾರು 80 ಮಂದಿ ಮಾತೆಯರು, ಸಹೋದರಿಯರು ಹಾಗೂ ಕನ್ಯೆಯರು ಭಾಗವಹಿಸಿದರು.  

ದೇವಿಗೆ ಬಾಗಿನ ಸಮರ್ಪಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಬಾಗಿನ ವಿತರಿಸಿ, ಲಘು ಉಪಹಾರ ನೀಡಲಾಯಿತು.


ದೇವಸ್ಥಾನದ ಅರ್ಚಕರಾದ ಉದಯ ಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ  ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಹಾಗೂ ಶ್ರೀ ಮತಿ ಪ್ರಭಾವತಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top