ಮಂಗಳೂರು: "ನಮ್ಮದು ಸಮಾಜ ಕಟ್ಟುವ ಸಾಮಾಜಿಕ ಕಾರ್ಯ. ನಮ್ಮದೇ ಆದ ಆಚಾರ- ವಿಚಾರಗಳನ್ನು ಆಚರಿಸುತ್ತಾ ನಮ್ಮತನವನ್ನು ಉಳಿಸಿಕೊಳ್ಳುವಲ್ಲಿ ನಾವು ಹಿಂದುಳಿಯಬಾರದು. ಹಾಗೇನಾದರೂ, ನಾವು ಬ್ರ ಹ್ಮತ್ವವನ್ನು ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿದರೆ ನಾವು ಗೆದ್ದಂತೆಯೇ. ಅಲ್ಲದಾದರೆ, ಮುಂದಿನ ಜನಾಂಗ ನಮ್ಮನ್ನು ಕ್ಷಮಿಸದು. ವಿಪ್ರರಾಗಿ ನಾವು ನಡೆಸಬೇಕಾದ ನಿತ್ಯ ನೈಮಿತ್ತಿಕ ಕರ್ಮಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬಂದಾಗ ನಮ್ಮ ಸಮಾಜ ನಮ್ಮ ಬೆನ್ನಿಗಿರುತ್ತದೆ. ನಾವು ಸಾಮಾಜಿಕವಾಗಿ ಭದ್ರವಾಗುತ್ತೇವೆ. ಛಿದ್ರವಾದ ಸಮಾಜದ ಏಕೀಕರಣ- ಉನ್ನತೀಕರಣ ಇಂದಿನ ತುರ್ತು. ಆ ಕಾರ್ಯ ಇಲ್ಲಿ ಸಾಗುತ್ತಿರುವುದು ಸಂತಸದ ಕಾರ್ಯ" ಎಂದು ಕರ್ಣಾಟಕ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಗೋಪಾಲಕೃಷ್ಣ ಸಾಮಗರು ಕೋಡಿಕಲ್ ನ ವಿಪ್ರ ವೇದಿಕೆಯ ದಶಮಾನೋತ್ಸವ ಆಚರಣೆಯ ಸಮಾರೋಪ ಭಾಷಣದಲ್ಲಿ ಬ್ರಾಹ್ಮಣ ಸಮಾಜಕ್ಕೆ ಕರೆನೀಡಿದರು.
"ಬ್ರಾಹ್ಮಣ್ಯ ಅನ್ನುವುದು ಒಂದು ವ್ರತ. ಅದನ್ನು ಹಠದಿಂದ ಸಾಧಿಸಿ ಗೆದ್ದು ನಮಗಾಗಿ ಅದರ ತಿರುಳನ್ನು ಕೊಟ್ಟಿದ್ದಾರೆ. ಅಂತಃಸತ್ವದಿಂದ ಬೆಳಗುವ ನಾವು ಸಮಾಜದ ಒಂದು ಆಧಾರ. ದಣಿವರಿಯದ ವಿಪ್ರಮನೆಯ ಕೆಲಸ ಪ್ರತಿಯೊಬ್ಬ ವಿಪ್ರನ ಮನೆಗೂ ತಲಪಲಿ" ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಯಾಗಿ ಕರೆ ನೀಡಿದರು.
ಡಾ. ಹರಿಕೃಷ್ಣ ಪುನರೂರು, ಸಕ್ಕಟ್ಟು ಮಂಜುನಾಥಯ್ಯ, ನ್ಯಾಯವಾದಿ ರಾಘುವೇಂದ್ರ ರಾವ್ ಹೆಚ್.ವಿ, ದಾಮೋದರ ಭಟ್, ತಲೆಕಳ, ರಮೇಶ್ ಕಲ್ಬಾವಿ, ಅನೂಪ್ ಕುಮಾರ್ ಬಾಗ್ಲೋಡಿ ಅತಿಥಿಗಳಾಗಿದ್ದರು. ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳು ಅಧ್ಯಕ್ಷತೆ ವಹಿಸಿದ್ದರು.
ವಿಶ್ವಕುಮಾರ್ ಜೋಯಿಸ್ ಪ್ರಸ್ತಾವನೆ ಮಾಡಿದರು ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿ, ದುರ್ಗಾದಾಸ್ ಕಟೀಲ್ ವಂದಿಸಿದರು.
ಶ್ರೀಮತಿ ಅಪರ್ಣಾ ಉಪಾಧ್ಯಾಯ ನಿರ್ವಹಿಸಿದರು. ಟ್ರಸ್ಟಿಗಳಾದ ತೆಕ್ಕೆಕೆರೆ ವಿಶ್ವೇಶ್ವರಭಟ್, ಕಿಶೋರ್ ಕೃಷ್ಣ, ಶ್ರೀಧರ ಹೊಳ್ಳ, ಸಂಪತ್ ಕುಮಾರ್ ಭಟ್, ಶ್ರೀಮತಿ ಪ್ರಭಾವತಿ ಮಾಡಿ, ಶ್ರೀಮತಿ ವಿದ್ಯಾ ಎಲ್. ಸಿ.ಗಣೇಶ್ ರಾವ್ ಉಪಸ್ಥಿತರಿದ್ದರು. ಶ್ರೀಮತಿ ರೂಪಕಲಾ ರಾಮಚಂದ್ರ ಭಟ್ ಪ್ರಾರ್ಥನೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

